ಅಳಿಲು ಸೇವೆ ಕೇಳಿದ್ದೀರಾ...ಅಳಿಲು ಮಾಡಿದ ಸೇವೆ ಏನು ?

ಅಳಿಲು ಸೇವೆ ಕೇಳಿದ್ದೀರಾ ? ..ಅಳಿಲು ಮಾಡಿದ ಸೇವೆ ಏನು ?

ನೀವು ನಮಗೋಸ್ಕರ ತುಂಬಾ ಸಹಾಯ ಮಾಡಿದ್ದೀರಾ.... ತುಂಬಾ ಥ್ಯಾಂಕ್ಸ್ ಅಂದಾಗ ಅವರು ಹೇಳೋದು ' ಅಯ್ಯೋ ಇದು ನನ್ನ ಅಳಿಲು ಸೇವೆ ' 

ಹೌದು ಈ ಅಳಿಲು ಮಾಡಿದ ಸೇವೆ ಆದ್ರೂ ಏನು ?
ಈ ಉತ್ತರಕ್ಕೆ ನಾವು ಶ್ರೀ ರಾಮನ ಕಾಲಕ್ಕೆ ಹೋಗಬೇಕಾಗುತ್ತದೆ.ಶ್ರೀ ರಾಮ ಸೀತಾಮಾತೆಯನ್ನು ಪಡೆಯಲು ಲಂಕೆಗೆ ಸೇತುವೆಯನ್ನು ನಿರ್ಮಿಸಿದ.ಆ ನಿರ್ಮಾಣಕ್ಕೆ ವಾನರ ಸೈನ್ಯ ಕೈ ಜೋಡಿಸಿತು.ಆಗ ಅಳಿಲು ಆ ಸೇತುವೆಯ ಕಲ್ಲುಗಳ ಮಧ್ಯೆ ಚಿಕ್ಕ ಕಲ್ಲುಗಳನ್ನು ಹಾಕುತ್ತಾ ಬಂದಿತು.ಆಗ ವಾನರ ಸೈನ್ಯ ಇದನ್ನು ನೋಡಿ ನಗಲಾರಂಭಿಸಿತು.ಆಗ ಬೇಸರಗೊಂಡ ಅಳಿಲು 
ಶ್ರೀರಾಮನ ಬಳಿ ದುಃಖ ತೋಡಿಕೊಂಡಾಗ ,ಶ್ರೀರಾಮ ಅಳಿಲು ಮಾಡುತ್ತಿರುವ ಕೆಲಸ ಚಿಕ್ಕದಾದರೂ , ಕಲ್ಲುಗಳು ಒಂದಕ್ಕೊಂದು ಚಲಿಸಿದಂತೆ , ಮತ್ತು ಬಿಗಿಯಾಗಿ ಕೂರಲು ಚಿಕ್ಕ ಕಲ್ಲುಗಳ ಅವಶ್ಯಕತೆಯ ಬಗ್ಗೆ ಮನವರಿಕೆ ಮಾಡಿಕೊಡುತ್ತಾನೆ.ಆಗ ವಾನರ ಸೈನ್ಯ ಅಳಿಲಿನ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತೆ.
ಪ್ರಿಯ ಮಿತ್ರರೇ , ಒಂದು ಚಿಕ್ಕ ಚಿಕ್ಕ ಕೆಲಸಗಳು ಕೂಡ ಅಗತ್ಯ ಇದ್ದಾಗ ,ಬಹಳ ಸಹಕಾರಿ ಅದು ಚಿಕ್ಕ ಕೆಲಸ ಎಂದು ನಿರ್ಲಕ್ಷ್ಯ ಮಾಡಿ , ಅವಮಾನ ಮಾಡಬೇಡಿ.ಅವರನ್ನು ಪ್ರೋತ್ಸಾಹಿಸಿ ಮತ್ತು ಹುರಿದುಂಬಿಸಿ.

ಚಾಣಾಕ್ಷ್ ಕನ್ನಡ ವನ್ನು ನಿಮ್ಮ ಮನದ ಮಂದಿರಕ್ಕೆ ಹಾಕುತ್ತಾ ನಿಮ್ಮ ಪ್ರೀತಿ ಗಳಿಸುತೀನಿ ಎನ್ನುವ ವಿಶ್ವಾಸವಿದೆ. ಹೆಚ್ಚು ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ... ನೀವು ಶೇರ್ ಮಾಡಿದಷ್ಟೂ ಬರವಣಿಗೆಯ ಮನಸ್ಸು ಬೆಳೆಯುತ್ತದೆ. ಇಷ್ಟ ಆದರೆ ಮಾತ್ರ ಶೇರ್ ಮಾಡಿ ... ಶೇರ್ ಮಾಡುವುದು ಉಚಿತವಾಗಿದೆ ಎಂದು ಶೇರ್ ಮಾಡಬೇಡಿ....



ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

sathishparthivasa@gmail.com

ಪ್ರಚಲಿತ ಪೋಸ್ಟ್‌ಗಳು