ಒಂದು ರಾಜ್ಯಕ್ಕೆ ಎರೆಡೆರಡು ರಾಜಧಾನಿಯ ಅವಶ್ಯಕತೆ ಇದೆಯೇ ?

ಒಂದು ರಾಜ್ಯಕ್ಕೆ ಎರೆಡೆರಡು ರಾಜಧಾನಿಯ ಅವಶ್ಯಕತೆ ಇದೆಯೇ ? 



ಭಾರತದ ರಾಜಧಾನಿ ದೆಹಲಿಯಿಂದ ಉತ್ತರಪ್ರದೇಶಕ್ಕೆ ಬದಲಾಯಿಸಲು ಚಿಂತನೆ ಶುರುವಾಗಿರುವ ಬೆನ್ನಲ್ಲೇ , ಇಂತಹದೊಂದು ಚಿಂತನೆ ಎಲ್ಲಾ ರಾಜ್ಯಗಳ ರಾಜಧಾನಿಗಳಿಗೂ ಬರಬಹುದೇ ಎಂಬ‌ ಚರ್ಚೆ ಶುರುವಾಗಿದೆ.ದೆಹಲಿಯು ಬಾರಿ ಜನಸಂಖ್ಯೆ ಸ್ಫೋಟವನ್ನು ಮತ್ತು ವಾಯುಮಾಲಿನ್ಯವನ್ನು ತನ್ನ ಮಡಿಲಲ್ಲಿ ಹಾಕಿಕೊಂಡು ಬೆಳೆಯುತ್ತಿದೆ.ಕರೋನಾ ಬಂದ ಮೇಲೆ , ಲಾಕ್ ಡೌನ್ ನಂತರ ಸ್ವಲ್ಪ ಮಟ್ಟಿಗೆ ಕಡಿಮೆಯಾದ ವಾಯುಮಾಲಿನ್ಯದ ತೀವ್ರತೆ, ಈಗ ಮತ್ತಷ್ಟು ಅಧಿಕವಾಗಿದೆ.ಮುಂದೆ ದೆಹಲಿ ಮಾಲಿನ್ಯದ ಮಹಾ ಕೂಪಕ್ಕೆ ತಳ್ಳಲಿದೆ.ದೆಹಲಿಯನ್ನು ಯಾವ ರೀತಿಯಲ್ಲೂ ನಿಯಂತ್ರಿಸುವುದಕ್ಕೆ ಸಾಧ್ಯವಿಲ್ಲ ಏಕೆಂದರೆ ಅದು ಭಾರತದ ರಾಜಧಾನಿ ಹಾಗಾಗಿ ಜನರನ್ನು ಬರದ ಹಾಗೆ ತಡೆಯುವುದು ಸಾಧ್ಯವಿಲ್ಲ.

ದೆಹಲಿಯ ಒತ್ತಡವನ್ನು ತಗ್ಗಿಸಲು ಒಂದೇ ದಾರಿ ಬದಲಿ ರಾಜಧಾನಿಯನ್ನು ಉತ್ತಮ ಯೋಜನೆಯೊಂದಿಗೆ ಕಟ್ಟುವುದು.ಆಗ ಜನಸಂಖ್ಯೆ ತನ್ನಿಂತಾನೇ ಕಡಿಮೆ ಆಗುತ್ತದೆ ಎಂಬುದು ಸರ್ಕಾರದ ಚಿಂತನೆಯಾಗಿದೆ.

ದೆಹಲಿಯ ನಂತರದ ಪರಿಸ್ಥಿತಿ ಏನು ?


ಭಾರತದ ಬಹುತೇಕ ರಾಜ್ಯಗಳಲ್ಲಿ ವಾಯುಮಾಲಿನ್ಯ ವಿಪರೀತವಾಗಿ ಏರುತ್ತಿದೆ.ದೆಹಲಿಯಷ್ಟು ನಮ್ಮ ರಾಜಧಾನಿಗಳು ಇನ್ನೂ ಕೆಟ್ಟಿಲ್ಲ ಎನ್ನುವುದು ನಿಜ ಆದರೂ , ಮುಂದಿನ ಪರಿಸ್ಥಿತಿಗಳ ಬಗ್ಗೆ ಯಾರೂ ಊಹಿಸಿದ ಚಿಂತಾಚನಕ ಸ್ಥಿತಿಯನ್ನು ತಲುಪಬಹುದು.ಕರೋನಾಯಿಂದ ಮತ್ತು ವರ್ಕ್ ಫ್ರಮ್ ಹೋಮ್ ನಿಂದ ಸ್ವಲ್ಪ ಮಟ್ಟಿಗೆ ನಗರಗಳ ಮೇಲಿನ ಹೊರೆ ಕಡಿಮೆಯಾಗಿದ್ದರೂ , ನಿರೀಕ್ಷಿತ ಪ್ರಮಾಣದಲ್ಲಿ ಏನೇನೋ ಸುಧಾರಣೆ ಆಗಿಲ್ಲ.ಹಾಗಾಗಿ ಮುಂದಿನ ದಿನಗಳಲ್ಲಿ ಪರ್ಯಾಯ ರಾಜಧಾನಿಗಳ ಅಭಿವೃದ್ಧಿಯ ಮೂಲಕ ರಾಜಧಾನಿಗಳ ಒತ್ತಡವನ್ನು ಕಡಿಮೆ ಮಾಡಿದರೆ ಮಾತ್ರ , ಸ್ವಲ್ಪ ಮಟ್ಟಿಗೆ ಒಂದೇ ಕಡೆ ಕೇಂದ್ರಿತ ಮಾಲಿನ್ಯವನ್ನು ತಡೆಯಬಹುದಾಗಿದೆ.

ಜನಸಾಂದ್ರತೆ ಮತ್ತು ಟ್ರಾಫಿಕ್ ಜಾಮ್


ಜನ ಚದುರಿದಂತೆ , ಟ್ರಾಫಿಕ್ ಜಾಮ್ ಮತ್ತು ಜನಸಾಂದ್ರತೆಯು ಸ್ವಲ್ಪ ಮಟ್ಟಿಗೆ ಸುಧಾರಿಸಬಹುದು.ಸರಳವಾಗಿ ಹೇಳಬೇಕೆಂದರೆ ಸಮಸ್ಯೆಯನ್ನು ಹಂಚುವುದು ಅಷ್ಟೇ ....ಪರಿಹರಿಸುವುದಲ್ಲ...


ರಾಜಧಾನಿ ಬದಲಿ ಒಂದೇ ಪರ್ಯಾಯವೇ‌ ?


ರಾಜಧಾನಿ ಬದಲಿ ಮಾಡಿದ ತಕ್ಷಣ ಮಾಲಿನ್ಯ ನಿಯಂತ್ರಣ
 ಸಾಧ್ಯವೇ ? 

ದೆಹಲಿ ಅಂತಹ ಮಹಾ ನಗರಗಳು ಬೆಳೆಯುವುದನ್ನು ನಿಯಂತ್ರಿಸಬಹುದು . ಆದರೆ ಇದು ಬೆಳೆಯುತ್ತಿರುವ ಭಾರತದ ಜನಸಂಖ್ಯೆ ಯಾವ ಹಂತಕ್ಕೆ ತಲುಪುತ್ತದೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ.ಬಾಣಲಿಯಿಂದ ಬೆಂಕಿಗೆ ಬೀಳುವ ಪರಿಸ್ಥಿತಿ ಸೃಷ್ಟಿಯಾಗದ ರೀತಿ ನಗರಗಳ ನಿರ್ಮಾಣ ಮಾಡಿ, ಜೊತೆ ಜೊತೆಗೆ ಮಾಲಿನ್ಯ ನಿಯಂತ್ರಣ ಮಾಡುವ ಶಾಶ್ವತ ಕಾರ್ಯಕ್ರಮಗಳ ಜೊತೆಗೆ ಗಮನಹರಿಸಬೇಕು.ಇಲ್ಲದಿದ್ದರೆ ಹೊಸ ರಾಜಧಾನಿಯು ದೆಹಲಿಯಾದರೆ, ನೀರಿನಲ್ಲಿ ಹೋಮ ಮಾಡಿದ ಪರಿಸ್ಥಿತಿ ನಿರ್ಮಾಣವಾಗುತ್ತದೆ.


ಚಾಣಾಕ್ಷ್ ಕನ್ನಡ ವನ್ನು ನಿಮ್ಮ ಮನದ ಮಂದಿರಕ್ಕೆ ಹಾಕುತ್ತಾ ನಿಮ್ಮ ಪ್ರೀತಿ ಗಳಿಸುತೀನಿ ಎನ್ನುವ ವಿಶ್ವಾಸವಿದೆ. ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ... ನೀವು ಶೇರ್ ಮಾಡಿದಷ್ಟೂ ಬರವಣಿಗೆಯ ಮನಸ್ಸು ಬೆಳೆಯುತ್ತದೆ. ಇಷ್ಟ ಆದರೆ ಮಾತ್ರ ಶೇರ್ ಮಾಡಿ ... ಶೇರ್ ಮಾಡುವುದು ಉಚಿತವಾಗಿದೆ ಎಂದು ಶೇರ್ ಮಾಡಬೇಡಿ....

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

sathishparthivasa@gmail.com

ಪ್ರಚಲಿತ ಪೋಸ್ಟ್‌ಗಳು