ಜನವರಿ 15 ನಮ್ಮ ಆರ್ಮಿ ದಿನ



ಒಂದು ದೇಶದ ಜನರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಎಂದರೆ ನಮ್ಮ ಸೈನಿಕರು ,ತನ್ನ ಕುಟುಂಬವನ್ನು ತೊರೆದು ,ಮಳೆ ಗಾಳಿ ಚಳಿ ಎನ್ನದೇ ,ಕಷ್ಟಪಡುತ್ತಿದ್ದಾರೆ ಅಂತಾ ಅರ್ಥ .. ಹೌದು ನಮ್ಮ ನಿಜವಾದ ಹೀರೋಗಳು ಇವರು 

ರಜಾ ಕೊಡಲಿಲ್ಲ ರಜಕ್ಕೆ ಬರಲಿಲ್ಲ

ನನಗೆ ಹಬ್ಬಕ್ಕೆ ರಜಾ ಕೊಡಲಿಲ್ಲ.ನನಗೆ ನನ್ನ ಕುಟುಂಬ ಬಿಟ್ಟು 1 ತಿಂಗಳು ಇದ್ದೆ ಅಂದ್ರೆ ಸಾಕು,ಓಡಿ ಹೋಗಿ ಬಿಡಬೇಕು ಅನಿಸುತ್ತೆ.ಆಯ್ಯೋ , ಮದುವೆ ಆದ ಮೇಲೆ ಹೆಂಡ್ತಿ ಬಿಟ್ಟು , ಅಷ್ಟು ದಿನ ಹೋಗಬೇಕಾ ? ನನಗೆ ಮಕ್ಕಳನ್ನು ನೋಡದೇ ಇರೋಕೆ ಆಗೋಲ್ಲ ಅವರನ್ನು ನೋಡಿ ,ಒಂದು ವಾರ ಆಯಿತು.ತುಂಬಾ ದಿನ ಬಿಟ್ಟು ಹೋದರೆ , ಮಕ್ಳು ಯಾರು ನೀವು ಅಂತಾ ಕೇಳೋಳಲ್ವಾ ... ಹೀಗೆ ಸಾವಿರ ಕಾರಣಗಳನ್ನು ಕೊಡುತ್ತೀರಾ , ಆದರೆ ಇವೆಲ್ಲಾ ಕಾರಣಗಳಿಲ್ಲದೇ , ದೇಶಗೋಸ್ಕರ ಸೇವೆ ಮಾಡುತ್ತಾರೆ ನಮ್ಮ ಸೈನಿಕರು.

ಜಾತಿ ಧರ್ಮ 

ಫೇಸ್ ಬುಕ್ ಮೂಲಕ ಅಯ್ಯೋ ಅವನು ಈ ಜಾತಿ ಅದಕ್ಕೆ ಅವನು ಏನು ಮಾಡಿದ್ರೂ ತಪ್ಪೇ ... ಜಾತಿ ಜಾತಿಗಳ ಮಧ್ಯೆ ತಂದಿಡುವುದು .ಒಂದು ಜಾತಿನಾ ಬೈಯುವುದು.ಮತ್ತೊಂದು ಜಾತಿನಾ ಹೊಗಳುವುದು.ಧರ್ಮ ಧರ್ಮದ ಮಧ್ಯೆ ತಂದಿಡುವುದು . ದ್ವೇಷ ಹುಟ್ಟಿಸುವುದು.ಎಲ್ಲಾ ಇಲ್ಲಿ ರಾಜಕೀಯ...ಏ ಅವನು ನಮ್ಮ ಜಾತಿ.. ನಮ್ಮ ಮುಖ್ಯಮಂತ್ರಿ ಆಗಬೇಕು ,ನಮ್ಮ ಜಾತಿಯವರೇ ಮಂತ್ರಿ ಆಗಬೇಕು.ಈ ಜಾತಿ ಕಂಡ್ರೆ ಆಗೋಲ್ಲ..ಹುಟ್ಟಿಸಿ ಸುಳ್ಳು ಸುದ್ದಿ..ಈ ವ್ಯಕ್ತಿ ಕಂಡ್ರೆ ಆಗೋಲ್ಲ ಹುಟ್ಟಿಸಿ , ಸುಳ್ಳು ಸುದ್ದಿ.. ಬ್ರಿಟಿಷರು ಬಿಟ್ಟು ಹೋದ ಒಡೆದು ಆಳುವ ನೀತಿಯನ್ನು ನಾವು ಪಾಲಿಸುತ್ತಿದ್ದೀವಿ.
ಹೀಗೆ ಏನಾದ್ರೂ ಮಾಡ್ತಾ ಇರ್ತೀರಾ...ಕೆಲಸ ಇಲ್ಲದೇ ಟೈಂ ಪಾಸ್ ಗೆ ...ಆದರೆ ನಿಮಗೋಸ್ಕರ ಆ ಸೈನಿಕ ಜಾತಿ ಭೇದವಿಲ್ಲದೆ ,ಧರ್ಮವಿಲ್ಲದೇ ಮೈನಸ್ ಡಿಗ್ರಿ ಚಳಿಯಲ್ಲಿ ನನ್ನ ದೇಶದ ಪ್ರಜೆಗಳು , ನನ್ನ ಅಣ್ಣ ತಮ್ಮಂದಿರನ್ನು ರಕ್ಷಿಸುತ್ತಾ ಇದ್ದೀನಿ ಎನ್ನುವ ದೇಶ ಪ್ರೇಮದಲ್ಲಿ ಪ್ರಾಣವನ್ನು ಅರ್ಪಿಸುತ್ತಾರೆ.ಸೈನಿಕರಿಗೆ ಬೆಲೆ ಕೊಡುವುದಾದರೆ , ಯಾವುದೇ ಸುಳ್ಳು ಸುದ್ದಿ ಹುಟ್ಟು ಹಾಕದೇ, ನಿಮ್ಮ ಕೆಲಸಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ... ಅಷ್ಟೇ ಸಾಕು ... ಯಾರನ್ನೂ ರಾಜಕೀಯ ಲಾಭಕ್ಕೆ ಓಲೈಸಲು ಬೇಡಿ , ಯಾರನ್ನೂ ರಾಜಕೀಯ ಲಾಭಕ್ಕಾಗಿ ದ್ವೇಷಿಸಲು ಬೇಡಿ.

ನಮ್ಮ ಸೈನಿಕರ ದಿನ

ಫೀಲ್ಡ್ ಮಾರ್ಷಲ್  ಕೊಡಗಿನ ವೀರ ಕೆ.ಎಂ.ಕಾರ್ಯಪ್ಪ ಅವರ (ಆಗಿನ ಲೆಫ್ಟಿನೆಂಟ್ ಜನರಲ್) ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚೀಫ್ ಆಗಿ ಅಧಿಕಾರ ವಹಿಸಿಕೊಂಡಿದ್ದನ್ನು ಗುರುತಿಸಿ, ಭಾರತದಲ್ಲಿ ಪ್ರತಿವರ್ಷ ಜನವರಿ 15 ರಂದು ಸೇನಾ ದಿನವನ್ನು ಆಚರಿಸಲಾಗುತ್ತದೆ.ಈ ದಿನ ಹುತಾತ್ಮ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ.ಆ ಆತ್ಮಗಳಿಗೆ ಶಾಂತಿ ಸಿಗಬೇಕಾದರೆ , ಮನುಷ್ಯರಾಗಿ ವರ್ತಿಸಿ , ಮನುಷ್ಯರಾಗಿ ಬಾಳಿ.

ನಿಮಗೆ ಸರಿ ಅನಿಸಿದರೆ ಮಾತ್ರ ,
ದಯವಿಟ್ಟು ಆದಷ್ಟು ಫೇಸ್ ಬುಕ್ ಮತ್ತು ವಾಟ್ಸಪ್ ನಲ್ಲಿ ಶೇರ್ ಮಾಡಿ ..ಇದು ನನ್ನ ಅಭಿಪ್ರಾಯ ಅಷ್ಟೇ... ತಪ್ಪಿದ್ದರೆ ತಿದ್ದಿ.. ಏಕೆಂದರೆ ಇಲ್ಲಿ ಯಾರು ಬೃಹಸ್ಪತಿ ಗಳು ಇಲ್ಲ... ಚಿಕ್ಕ ಮಕ್ಕಳಿಂದ ಕಲಿಯುವುದು ಬಹಳಷ್ಟಿದೆ ,ಹಿರಿಯರಿಂದಲೂ ಕಲಿಯುವುದು ಬೇಕಾದಷ್ಟಿದೆ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು