ಕಾಣದ ನಿಜ ಕಾಣಿಸದ ಕಣಜ

ಕಾಣದ ನಿಜ ಕಾಣಿಸದ ಕಣಜ ಮೇ 06, 2008 ಕಾಣದ ನಿಜ ಕಾಣಿಸದ ಕಣಜ ಸಣ್ಣ ಕಥೆ - ಲೇಖಕರು - ಚಾಣಾಕ್ಷ ನಾನು ಬಸ್ಸಿನಿಂದ ಇಳಿಯುತ್ತಿದ್ದಂತೆ ಲಾಡ್ಜ್ ಮಾಡುವ ಗೊಡವೆಗೆ ಹೋಗಲಿಲ್ಲ ನೇರವಾಗಿ ಕೆಲಸಕ್ಕೆ ಹಾಜರಾದೆ. ಹೊಸ ಜಾಗ, ಹೊಸ ಆಫೀಸ್ ಎಲ್ಲವೂ ಹೊಸದೆ, ಹಳೆಯ ಆಫೀಸಿನಲ್ಲಿ ನಾನು ಹೆಚ್ಚು ಅಡ್ಜಸ್ಟ್ ಆಗಿದ್ದೆ .ಅದು ಏಕೆ ವರ್ಗ ಮಾಡಿದರು ಈ ದೊಡ್ಡ ಬೆಂಗಳೂರಿಗೆ ನನಗಂತೂ ಅರ್ಥವಾಗಿರಲಿಲ್ಲ. ಇನ್ನೇನು ಮಾಡುವುದಕ್ಕೆ ಆಗುತ್ತದೆ ,ನಾನೊಬ್ಬ ಸರ್ಕಾರಿ ನೌಕರ ಹೀಗಾಗಿ ಅವರು ಎಲ್ಲಿ ಹಾಕುತ್ತಾರೂ ಅಲ್ಲಿ ಹೋಗುವುದು ನನ್ನ ಕರ್ತವ್ಯ. ಹೊಸ ಎನ್ನುವ ಪದ ಹಳೆಯದಾಗುವರೆಗೂ ಕಷ್ಟವಾಗುತ್ತದೆ.ಆಮೇಲೆ ಇಲ್ಲೇ ಇಷ್ಟವಾಗಬಹುದು .ಬಾಸ್ ನನಗೆ ಎಲ್ಲರನ್ನೂ ಪರಿಚಯಿಸಿ ನನಗೆ ಮಾಡುವ ಕೆಲಸ -ಕೂರುವ ಜಾಗವನ್ನು ತೋರಿಸಿದರು .ಆಫೀಸಿನಲ್ಲಿ ಎಲ್ಲರೂ ತಮ್ಮ ತಮ್ಮ ಕೆಲಸ ಮಾಡುತ್ತಾ ಹೋಗುತ್ತಿದ್ದರು .ಕೆಲಸ ಬೇಗ ಮುಗಿಸಿ ಮಧ್ಯಾಹ್ನ ಹೊತ್ತು ಹರಟೆ ಹೊಡೆಯುತ್ತಿದ್ದರು .ಸರ್ಕಾರದ ಕೆಲಸ ಎಂದರೆ ಕೇಳಬೇಕೇ ಕೆಲಸ ಎಷ್ಟರ ಮಟ್ಟಿಗೆ ನಮ್ಮ ಸರ್ಕಾರ ಸೃಷ್ಟಿಸಿರುತ್ತದೆ ಎಂದು .ಸರಿ ನಾನು ಅಷ್ಟೇ ವೇಗದಲ್ಲಿ ಕೆಲಸ ಮುಗಿಸಿ ಎಲ್ಲರ ಪರಿಚಯ ಮಾಡಿಕೊಂಡೆ .ಅಂದಿನ ಹರಟೆ ನನ್ನಂತಹ ಹೊಸಬರಿಗೆ ಬಹಳ ಅನುಕೂಲವಾಯಿತು .ಎಲ್ಲರ ಆತ್ಮೀಯತೆ ಸಿಕ್ಕಿತು. ನನಗೆ ಹೆಚ್ಚು ಆತ್ಮೀಯನಾದವನು ವಿಜಯ್ .ಇಡೀ ಆಫೀಸಿನಲ್ಲಿ ಒಟ್ಟು ೧೫ ಸಹೋದ್ಯೊಗಿಗಳಿದ್ದರು. ಅದರಲ್ಲಿ ೫ ಜನ ಮಾತ್ರ ಬ್ಯಾಚುಲರ್,ಅದು ನನ್ನನ್ನು ಸೇರಿಸಿ ಮೂರು ಹುಡುಗರಾದರೆ, ಇಬ್ಬರು ಹುಡುಗಿಯರು .ವಿಜಯ್ ಹೆಚ್ಚು ಆತ್ಮೀಯನಾಗಿದ್ದು , ಅವನು ಬ್ಯಾಚುಲರ್ ಎಂಬ ಕಾರಣಕ್ಕೆ, ಇನ್ನೊಬ್ಬ ಬ್ಯಾಚುಲರ್ ಸೂರಜ್ ಇವನು ಹೆಚ್ಚು ರೋಡ್ ರೋಮಿಯೋ ಆಗಿದ್ದ .ಆಫೀಸಿನಲ್ಲಿ ಆಫೀಸ್ ರೋಮಿಯೋ . ಹುಡುಗಿಯರೆಂದರೆ ತನ್ನ ಮಾತಿನ ಮೋಡಿಯಲ್ಲಿ ಅವರನ್ನು ಸೆಳೆದು ಬಿಡುತ್ತಿದ್ದ .ಇವನ ಬಲೆಗೆ ಸಿಕ್ಕಿದ ಹುಡುಗಿಯರು ,ಇವನಿಂದ ತಪ್ಪಿಸಿಕೊಳ್ಳೋ ಅವಕಾಶ ಕಡಿಮೆ .ಹುಡುಗಿಯರೆಂದರೆ ಅಷ್ಟಕ್ಕೇ ಅಷ್ಟೇ ಅಂತ ಬೆಳೆದಿದ್ದ ನನಗಂತೂ ಅವನ ಸ್ನೇಹ ದೂರವಾಯಿತು .ವಿಜಯ್ ಸಹಜವಾಗಿ ಹತ್ತಿರವಾದ. ನಾನಂತೂ ದಿನ ಪೂರ್ತಿ ವಿಜಯ್ ನ ಜೊತೆಯಲ್ಲೇ ಇರುತ್ತಿದ್ದೆ . ವಿಜಯನ ಸಹಾಯದಿಂದ ಅವರ ಮನೆಯ ಹತ್ತಿರವೇ ನನಗೊಂದು ಮನೆ ಕೊಡಿಸಿ ಕೊಟ್ಟಿದ್ದ. ಸುರಜ್ ನ ನಡವಳಿಕೆಯ ಬಗ್ಗೆ ನಮಗೆಲ್ಲಾ, ಇಷ್ಟವಾದರೂ ಜನರು ನಮ್ಮ ಮೇಲೆ ತಪ್ಪು ಅಭಿಪ್ರಾಯ ವ್ಯಕ್ತ ಪಡಿಸುತ್ತಾರೇನೋ ಎಂಬ ಅಂಚಿಕೆಯಿಂದ ಸಮಾನಾಂತರ ಕಾಯ್ದುಕೊಂಡಿದ್ದೆವು .ಸುರಜ್ ಆ ಇಬ್ಬರು ಹುಡುಗಿಯರು ಬ್ಯಾಜುಲರ್ ಆಗಿದ್ದೆ, ಅವರ ಮೇಲೆ ಕಾಳ್ ಎಸೆಯಲು ಕಾರಣವಾಗಿತ್ತು . ಯಾವುದೇ ಹುಡುಗಿಯನ್ನು ನೋಡಲಿ ,ಸುರಜ್ ಮೊದಲು ನೋಡುತ್ತಿದ್ದಿದ್ದು ಅವರ ಕಾಲನ್ನು , ಕಾಲು ಉಂಗುರವನ್ನು ,ಕಾಲಿನಲ್ಲಿ ಕಾಲು ಉಂಗುರ ಇಲ್ಲದಿದ್ದರೆ ಮಾತ್ರ ತನ್ನ 'ಬಾಯ್ 'ವರಸೆ ಶುರು ಮಾಡುತ್ತಿದ್ದ . ಬಂದ ಸಂಬಳವನ್ನೆಲ್ಲ ತನ್ನ ಜೊತೆ ತಿರುಗುವ ಹುಡುಗಿಗೆ ಖರ್ಚು ಮಾಡಿಬಿಡುತ್ತಿದ್ದ .ಸುರಜ್ ನ ತಾಯಿ ಸುಮತಿಗೆ ಗಂಡ ಕಟ್ಟಿಸಿದ ಬಾಡಿಗೆ ಮನೆಗಳು ಇದ್ಡಿದರಿಂದ ಸಂಸಾರದ ಖರ್ಚು -ವೆಚ್ಚವನ್ನೆಲ್ಲ ಆ ದುಡ್ಡಿನಿಂದ ಸರಿದೂಗಿಸುತ್ತಿದ್ದಳು .ತನ್ನ ಮಗನ ಚಾಳಿಯೆಲ್ಲಾ ಆಕೆಗೆ ಗೊತ್ತು ಆದರೆ ಏನು ಮಾಡುವುದು ? ಮೊದಲೆಲ್ಲಾ ಸೂರಜ್ ಹೀಗೆ ಇರಲಿಲ್ಲ .ಕಾಲೇಜಿನ ಮೆಟ್ಟಿಲು ಹತ್ತಿತ್ತೇ ಬದಲಾಗಿ ಹೋಗಿದ್ದ .ಆಗ ತಾಯಿ ಇದು ಹುಡುಗು ಬುದ್ಧಿ ಅಂತಾ ಸುಮ್ಮನಾಗಿದ್ದಳು .ಅವನ ಮೇಲೆ ಜನರ ಬಾಯಲ್ಲಿ ,ಹಲವಾರು ಪ್ರಕರಣಗಳು ಪೋಲೀಸ್ ಮೆಟ್ಟಿಲು ಹತ್ತುತ್ತಿದ್ದಂತೆ, ಆಕೆ ಜಾಗರೂಕರಾಗಿ , ಬುದ್ಧಿವಾದ ಹೇಳಿದಳು.ಯಾವುದು ಗಂಭೀರವಾಗದಂತೆ ಎಚ್ಚರ ವಹಿಸಿ ,ತಾಯಿ ಕಾಪಾಡುವುದಕ್ಕೆ ಶುರು ಮಾಡಿದಳು. ಅವನಿಗೆ ಒಂದು ಸರ್ಕಾರಿ ಕೆಲಸ ಸಿಕ್ಕಿದ ಮೇಲಂತೂ ತಾಯಿಯ ಕೈಯಿಗೆ ಇವನು ಸಿಗದಾದ . ತನ್ನ ಮಗನನ್ನು ಸರಿ ದಾರಿಗೆ ತರಲು ಆಕೆ ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ .ಅನೇಕ ತಂತ್ರಗಳನ್ನು ಪ್ರಯೋಗಿಸಿದಳು .ಆದರೆ ಅವನು ಸರಿ ದಾರಿಗೆ ಬರುವ ಲಕ್ಷಣ ಗಳು ಗೋಚರಿಸದೇ ಇದ್ದಾಗ ಇನ್ನೂ ಬೇರೆ ದಾರಿಯಿಲ್ಲ ಅಂತಾ ತಿಳಿದು ಸುಮ್ಮನಾದಳು . ಹಾಗಾಗಿ ಅವನಿಗೆ ಹೇಳುವರಿಲ್ಲದೇ , ಕೇಳುವರಿಲ್ಲದೇ ಅವನ ಆಟ ಹೀಗೆಯೇ ಮುಂದುವರಿದಿತ್ತು .ಆಫೀಸಿನ ವಾತಾವರಣವನ್ನು ಹಾಳು ಮಾಡುತ್ತಾ ಇದ್ದಾನೆಂದು ,ವಯಸ್ಸಾದ ಸಹೋದ್ಯೋಗಿಗಳು ಆರೋಪಿಸಿದಾಗ ಮಾತ್ರ ಅವನು ಸಿಡಿದು ಬೀಳುತ್ತಿದ್ದ ."ನಿಮಗೆಲ್ಲಾ ನನ್ನ ತರಹ ಬಿಂದಾಸ್ ಆಗಿರಬೇಕೆಂದು ಆಸೆ ಇದೆ .ಆದರೆ ಒಬ್ಬರಿಗೆ ಹಣದ ಅಭಾವ .ಇನ್ನೊಬ್ಬರು ಹೆಂಡತಿ ಗುಲಾಮ .ಮತ್ತೊಬ್ಬರು ಸಮಾಜಕ್ಕೆ ಹೆದರುತ್ತೀರಾ , ಮಗದೊಬ್ಬರಿಗೆ ಭಯ .ಇವೆಲ್ಲವೂ ನನಗೆ ಇಲ್ಲ .ಇರುವಷ್ಟು ದಿನ ಬಿಂದಾಸ್ ಆಗಿ ಸ್ವರ್ಗಕ್ಕೆ ಹೋಗಬೇಕು .'' ಎಂದು ಉತ್ತರ ನೀಡುತ್ತಿದ್ದ. ಒಮ್ಮೊಮ್ಮೆ ಸಂಸಾರದ ತಾಪತ್ರಯಗಳು ತಲೆಯ ಮೇಲೆ ಕುಳಿತಾಗ, ಇವನ ತರಹ ಆಗಬೇಕೆಂದು ನಮ್ಮ ಹಿರಿಯ ಸಹೋದ್ಯೋಗಿಗಳು ಅಂದುಕೊಳ್ಳುತ್ತಿದ್ದರು.ಆದರೆ ಯಾರು ಆ ಹೆಣ್ಣುಗಳಿಗೆ ಆಗುವ ಅನ್ಯಾಯದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲ್ಲಿಲ್ಲ .ತಮಗೆ ತಮ್ಮ ಮನೆಗೆ ಸಂಬಂದ ಪಟ್ಟವರಿಗೆ ಏನಾದಾರೂ ಅನಾಹುತ ಆಗುವ ವರೆಗೂ ಅದರ ಗಂಭೀರತೆ ನಮಗೆ ಆಗುವುದೇ ಇಲ್ಲ .ಅದೇ ಘಟನೆ ಬೇರೆಯವರಿಗೆ ನಡೆದರೆ ನಾವು ಅಷ್ಟಾಗಿ ತಲೆ ಕೆಡಿಸಿ ಕೊಳ್ಳುವುದೇ ಇಲ್ಲ.ಹೀಗಾಗಿ ಎಲ್ಲರೂ ಸುರಜನನ್ನೇ ಹೊಗಳುತ್ತಿದ್ದರು. ಹುಡುಗಿಯರು ಅಷ್ಟೇ ,ಇವನ ಬಳಿ ಹೆಚ್ಚು ಸಂತೋಷವಾಗಿರುತ್ತಿದ್ದರು. ಹಿರಿಯರು, ಕೆಲವು ಬುದ್ಧಿವಾದಗಳನ್ನು ಹೇಳುತ್ತಿದ್ದರು. ಆ ಹುಡುಗಿಯರು ಇವರ ಮಾತನ್ನು ಕಿವಿ ಮೇಲೆ ಹಾಕಿ ಕೊಳ್ಳುತ್ತಿರಲಿಲ್ಲ .ಒಂದು ಹೆಣ್ಣು, ಒಂದು ಗಂಡು ಹೀಗೆ ನಗು ನಗುತ್ತಾ ಮಾತಾನಾಡಿದರೆ ಏನು ಹೆಸರು ಕಟ್ಟುತ್ತಾರಪ್ಪ ಅಂತಾ ಆ ಹಿರಿಯರ ಮೇಲೆ ಕೋಪಿಸಿ ಕೊಳ್ಳುತ್ತಿದ್ದರು. ಒಂದು ಸಲ ಬಾಸ್ ಕೂಡ ಆ ಹುಡುಗಿಗೆ ಬುದ್ಧಿವಾದ ಹೇಳಿದ್ದರು ,ಆದರೂ ಆ ಹುಡುಗಿಯರು ಕೇರ್ ಮಾಡಲಿಲ್ಲ. ಅವನ ಜೇಬು ಖಾಲಿ ಮಾಡಿಸಿ ಆರಾಮವಾಗಿ ಸುತ್ತುತ್ತಿದ್ದರು.ಅವರ ಸ್ನೇಹ ಎಷ್ಟು ಬಲವಾಗಿತ್ತೆಂದರೆ ,ಅದರಲ್ಲಿನ ಒಬ್ಬ ಹುಡುಗಿ ಶ್ರುತಿಗೆ ನಿರಂತರ ಮದುವೆ ಒತ್ತಡವಿದ್ದರೂ , ಮದುವೆ ನಿರಾಕರಿಸುತ್ತಲೇ ಇದ್ದಳು .ತಂದೆ ತಾಯಿ ,''ನೀನು ಮದುವೆ ಆಗುವುದಿಲ್ಲ ವೆಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದರೂ ಆಕೆ ಕೇರ್ ಮಾಡಲಿಲ್ಲ .ಆಕೆಯ ನಿರೀಕ್ಷೆಯಂತೆ ಅವರು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ .ಇನ್ನೊಬ್ಬ ಹುಡುಗಿ ಭವ್ಯ ,ಆ ಹುಡುಗನ ಜೊತೆ ಚೆಲ್ಲಾಟ ದಿಂದ ಇರಬೇಡ ಅಂತಾ ಮನೆಯಲ್ಲಿ ಅಂದರೂ ಇವನ ಸಹವಾಸ ಬಿಡಲಿಲ್ಲ . ಅವರ ಅಣ್ಣಾ,ಈ ಭವ್ಯಾಳಿಗೆ ಚಿತ್ರಹಿಂಸೆ ಕೊಟ್ಟು ,ರೌಡಿಗಳನ್ನು ಬಿಟ್ಟು ,ಸುರಜ್ ನನ್ನು ಹೊಡಿಸಿದ .ಆದರೂ ಕೇರ್ ಮಾಡಲಿಲ್ಲ .ಆಗ ಸಹಜವಾಗಿ ಇವರಿಬ್ಬರೂ ಸುರಜ್ ನನ್ನು ಪ್ರೀತಿ ಮಾಡುತ್ತಿದ್ದಾರೆಂದು ನಾವೆಲ್ಲರೂ ಅಂದು ಕೊಂಡೆವು .ಅವರನ್ನು ನೇರವಾಗಿ ಕೇಳಿದಾಗ '' ನಾವು ಪ್ರೀತಿ, ಗೀತಿ ಅಂತ ಯಾವುದು ಮಾಡಿಲ್ಲ .ಇಲ್ಲದ ಬಣ್ಣ ಕಟ್ಟ ಬೇಡಿ.ನಾವು ಸ್ನೇಹಿತರು ಎಂದಷ್ಟೇ ಉತ್ತರಿಸುತ್ತಿದ್ದರು .ಆ ಹುಡುಗಿಯರು ಇವನನ್ನು ತುಂಬಾ ಇಷ್ಟ ಪಡುತ್ತಿದ್ದರು ಎಂಬ ವಿಚಾರ ಮಾತ್ರ ನಿಜವಾಗಲೂ ಆಶ್ಚರ್ಯ ಆಗುತ್ತಿತ್ತು. ಸುರಜ್ ಒಬ್ಬನೇ ಹಣವನ್ನು ನೀರಿನಂತೆ, ಚೆಲ್ಲುತ್ತಿದ್ದ .ಆದರೆ ಹುಡುಗಿಯರು 5 ಪೈಸಾನೂ ಖರ್ಚು ಮಾಡದೇ ,ತನ್ನ ಮನೆಗೆ ಕೊಟ್ಟು ಬಿಡುತ್ತಿದ್ದರು.ಇದರಿಂದಾಗಿ ನನ್ನಲ್ಲಿ ಅನೇಕ ಅನುಮಾನಗಳು ಹುಟ್ಟಿ ಕೊಂಡವು .ಕೇವಲ ಜಾಲಿಗೋಸ್ಕರ ಸುರಜ್ ನ ಜೊತೆ ಸುತ್ತುದಿರ ಬಹುದೆಂದು ನನಗೆ ಅನಿಸಿತು.ಆದರೂ ,ಮೋಜುಗೋಸ್ಕರ ಇವರು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರಲ್ಲ ಎಣಿಸಿದಾಗ ನಿಜವಾಗಲೂ ವ್ಯಥೆ ಮಾಡುತ್ತಿತ್ತು. ಇಂತಹ ವಿಚಿತ್ರ ಹುಡುಗಿಯರು ಸಂಪ್ರದಾಯ ವೆತ್ತ ಈ ಸಮಾಜದಲ್ಲಿ ಇದ್ದಾರಲ್ಲಪ್ಪಾ ಅಂತ ಅನಿಸುತ್ತಿತ್ತು. ಒಮ್ಮೆ ನಾನೇ ಖುದ್ದಾಗಿ ಸುರಜ್ ನನ್ನು ಕೇಳಿದೆ. ''ಯಾಕೆ ಹಣವನ್ನು ಹಾಳು ಮಾಡುತ್ತಿಯಾ ಮೇಲಾಗಿ ಆ ಹುಡುಗಿಯರ ಭವಿಷ್ಯವನ್ನು ಹಾಳು ಮಾಡುತ್ತಿಯಾ,ಅವರು ಮದುವೆ ಆಗಿ ತಮ್ಮ ಗಂಡಂದಿರ ಜೊತೆ ಸುಖ ವಾಗಿರಲಿ ಒಬ್ಬರಿಗೆ ಒಳ್ಳೆಯದು ಮಾಡುವುದು ಆಗದೆ ಇದ್ದರೂ, ಕೆಟ್ಟದು ಮಾಡುವುದು ಬೇಡ . ನಿನ್ನ ವೈಯಕ್ತಿಕ ಜೀವನದಲ್ಲಿ ತಲೆ ಹಾಕುವುದು ನನ್ನ ತಪ್ಪು.ಆದರೂ ಇಷ್ಟು ಅನ್ಯಾಯ ನಡೆಯುತ್ತಿದ್ದರೂ ,ಏಕೋ ಮನಸ್ಸು ಸುಮ್ಮನಿರಲಿಲ್ಲ . ಇದೇ ಜಾಗದಲ್ಲಿ ನಮ್ಮ ಅಕ್ಕ ತಂಗಿ ಇದ್ದಿದ್ದರೆ ಅನ್ನುವ ಭಾವನೆ ಬಂತು.ಅದಕ್ಕಾಗಿ ನಿನಗೆ ಬುದ್ಧಿವಾದ ಹೇಳುತ್ತಿದ್ದೇನೆ.ದಯವಿಟ್ಟು ತಪ್ಪಾಗಿ ತಿಳಿಯ ಬೇಡ.'' ಮನಸಿನಲ್ಲಿ ಅಡಗಿದ್ದ ಪ್ರಶ್ನೆಗೆ ಉತ್ತರ ಸಿಗಬಹುದೆಂದು ನೇರವಾಗಿ ಕೇಳಿಯೇ ಬಿಟ್ಟೆ .ಆದರೆ ಅವನು ಅಷ್ಟೇ ನೇರವಾಗಿ ನಗುತ್ತಾ ''ನಾನು ಬಿಟ್ಟರೂ ಅವನು ಬಿಡೊಲ್ಲ ಎಂದು ಹೊರಟು ಹೋದ. ಈ ಉತ್ತರ ನನ್ನಲ್ಲಿ ಮತ್ತಷ್ಟು ಗೊಂದಲ ಉಂಟು ಮಾಡಿತ್ತು.ಅಂದರೆ ಇವರನ್ನು ಯಾರು ಒಬ್ಬನೂ ನಿಯ೦ತ್ರಿಸುತ್ತಿದ್ದಾನೆ .ಸುರಜ್ ಇವರಿಗೆ ಹೆದರಿಕೂಂಡ್ ಈ ಕೆಲಸ ಮಾಡುತ್ತಿದ್ದಾನೆ ,ಎಂಬುದು ಅವನ ಉತ್ತರದಿಂದ ಅರ್ಥ ವಾಯಿತು.ಅವನ ಹಿಂದೆಯೇ ಓಡಿ, ಅವನ ಕೈ ಎಳೆದು ಕೊಂಡು ''ನೀನು ಯಾರಿಗೂ ಹೆದರಬೇಡ ,ನಾನಿದ್ದೇನೆ.ಅವರ ಭವಿಷ್ಯ ಹಾಳು ಮಾಡಬೇಡ . ನನ್ನ ಪ್ರಾಣ ಹೋದರೂ ,ಸರಿ ನಾನು ಅವನನ್ನು ಎದುರಿಸುತ್ತೇನೆ.ದಯವಿಟ್ಟು ನನ್ನ ಮಾತನ್ನು ಗಂಭೀರವಾಗಿ ತೆಗೆದು ಕೋ ,ಅದಕ್ಕೆ ಅವನು ಜೋರಾಗಿ ನಗೆಯ ತೊಡಗಿದ .ಅವನ ನಗು ನನ್ನಲ್ಲಿ ಕೋಪ ಉಕ್ಕಿಸಿತು.ಜೋರಾಗಿ ಅವನ ಕೆನ್ನೆಗೆ ಬೀಸಿದೆ.5 ನಿಮಿಷ ಇಬ್ಬರು ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಾ, ಮಾತನಾಡದೇ ಇದ್ದೆವು .ಆ ಮೌನ ವನ್ನು ಸುರಜೇ ಮುರಿದ .''ನೋಡು ,ಈ ಕಾಲದಲ್ಲಿ ನೀನು ಆ ಹುಡುಗಿಯರ ಮೇಲೆ ಇಟ್ಟಿರುವ ವಿಶ್ವಾಸ ಅಭಿಮಾನ ,ನಿನ್ನ ಅಕ್ಕ ತಂಗಿಯರಂತೆ ಭಾವಿಸಿದ ರೀತಿ ಕಂಡು ನಿಜಕ್ಕೂ ನನಗೆ ಸಂತೋಷವಾಗುತ್ತದೆ.'' ಎಂದು ಹೇಳಿ ಹೊರಟು ಹೋದ.ದಿನ ಕಳೆದಂತೆ ಅವನಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ . ಎಂದೂ ಯಾರ ಮೇಲೂ ಕೈ ಮಾಡದ ನಾನು, ಅವನ ಮೇಲೆ ಕೈ ಮಾಡಿದ್ದು, ದಿನಾ ಕೊರಗುವಂತೆ ಮಾಡಿತ್ತು. ಆದರೆ ಒಂದು ದಿನ ಅಘಾತಕಾರಿ ಸುದ್ದಿ ಬಂತು.ಸುರಜ್, ಭವ್ಯ , ಶ್ರುತಿ ಮೂವರು ಸತ್ತಿದ್ದಾರೆ ಎಂಬ ಸುದ್ದಿ ತಿಳಿದು ಎಲ್ಲರಿಗೂ ಶಾಕ್ ಆಯಿತು.ನಾವೆಲ್ಲರೂ ಅಲ್ಲಿಗೆ ಹೋದೆವು .ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.ಎಲ್ಲರೂ ತಮ್ಮವರನ್ನು ಕಳೆದುಕೊಂಡ ಕಿರುಚಾಟ ,ನರಳಾಟ, ನೋಡಲಾಗದೇ ನೇರವಾಗಿ ಮನೆಗೆ ಬಂದೆ . ''ತಮಗೆ ಕಾಗದ ಬಂದಿದೆ .ಹೆಸರು -ಊರು ಒಂದು ಬರೆದಿಲ್ಲ .ಎಂದು ಮನೆಯ ಯಜಮಾನ ಕಾಗದ ಕೊಟ್ಟು ಹೊರಟು ಹೋದ.ನಾನು ನಿಧಾನವಾಗಿ ಕಾಗದ ಓದಿದೆ ಆ ಕಾಗದ ಈ ರೀತಿ ಇತ್ತು.''ಆತ್ಮೀಯ ಅಣ್ಣ ,ನಾವು ಭವ್ಯ ಶ್ರುತಿ....ನೀವು ನಮ್ಮ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ,ಸುರಜ್ ನಿಂದ ತಿಳಿಯಿತು.ಯಾವ ಜನ್ಮದ ಅಣ್ಣನು ನೀವು...........ಒಬ್ಬನನ್ನು ಹೊಡೆಯುವಷ್ಟು ಸಿಟ್ಟನ್ನು ಪಡೆದು ಕೊಂಡಿರಿ ಎಂದರೆ ನಿಮಗೆ ನಮ್ಮ ಬಗ್ಗೆ ಎಷ್ಟು ಕಾಳಜಿ ಇತ್ತು ಎಂಬುದು ಅರಿವಾಗುತ್ತದೆ.ಅದಕ್ಕಾಗಿಯೇ ಈ ಕಾಗದ ಬರೆದದ್ದು...........................................................................''ನಲ್ಮೆಯ ಗೆಳೆಯ ನಾನು ಸುರಜ್ ,ನೀನು ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರಿಸುತ್ತೀನಿ ನಾನು ಹುಡುಗಿಯ ಜೊತೆ ಮೋಜು ಮಾಡುತ್ತಾ ಕಾಲ ಕಳೆಯುತ್ತಿದ್ದೆ .ಆಗ ಒಂದು ದಿನ ನನಗೆ ತಿಳಿಯಿತು.ನನಗೆ ಬ್ರ್ಯೆನ್ ಟ್ಯೂಮರ್ ಇದೆಯೆಂದು ,ಇನ್ನೂ 6 ತಿಂಗಳಲ್ಲಿ ಸಾಯುತ್ತೇನೆಂದು ,ಆಗ ಇಡೀ ಜಗತ್ತೇ ತಲೆ ಕೆಳಗೆ ಆಗ ಬಾರದ ಎಂದು ಅನಿಸಿತು .ಡಾಕ್ಟರ್ ಹೇಳಿದ ಸಮಯಕ್ಕೆ ದಿನಾ ಕಾಟಾಚಾರಕ್ಕೆ ಚಿಕಿತ್ಸೆಗೆ ಹೋಗುತ್ತಿದ್ದೆ. ನನಗೆ ಒಂದು ಆಶ್ಚರ್ಯ ಕಾದಿತ್ತು.ಭವ್ಯ ಶ್ರುತಿ ಕೂಡ ಚಿಕಿತ್ಸೆಗೋಸ್ಕರ ಬಂದಿದ್ದರು.ಡಾಕ್ಟರ್ ನನ್ನು ವಿಚಾರಿಸಿದಾಗ ಇವರಿಗೂ ಬ್ರ್ಯೆನ್ ಟ್ಯೂಮರ್ ಇದೆಯೆಂದು ಗೊತ್ತಾಯಿತು.ಎಂತಹ ವಿಚಿತ್ರವಲ್ಲವೇ, ನಾನು ನನ್ನ ಗೆಳತಿಯರು ಒಂದೇ ಕಾಯಿಲೆಯಿಂದ ನರಳುವುದು .ನನಗೆ ಊಹಿಸಲಿಕ್ಕೂ ಸಾಧ್ಯವಾಗಲಿಲ್ಲ.ಅವರನ್ನು ಕೇಳಿದೆ . ಅವರು ಈ ಕಾಯಿಲೆ ಇದೆ ಎಂದು ಒಪ್ಪಿದರು.ನನ್ನ ಕಾಯಿಲೆ ಬಗ್ಗೆಯೂ ಅವರಿಗೆ ವಿವರಿಸಿದೆ. ಅವರು ನಂಬಿಲ್ಲ. ಕ್ರಮೇಣ ನಂಬಿಕೆ ಹುಟ್ಟಿತು.ನಾವು ಅಂತೂ ಸಾಯುತ್ತೇವೆ ಏನಾದರೂ ಒಳ್ಳೇ ಕೆಲಸವನ್ನು ಮಾಡಿ ಸಾಯೋಣಾ ಅನಿಸಿತು .ಮನುಷ್ಯನಿಗೆ ಯಾವಾಗ ಸಾಯುತ್ತೇನೆಂದು ನಮ್ಮ ತರಹ ಗೊತ್ತಾಗಿ ಹೋದರೆ ,ಪ್ರಪಂಚದಲ್ಲಿ ಯಾರು ಕೆಟ್ಟವರಿರುವುದಿಲ್ಲ.ನಾನು ನನ್ನ ಹಣವನ್ನೆಲ್ಲ ಬಡ ರೋಗಿಗಳು ಬಂದರೆ ಉಚಿತ ಚಿಕಿತ್ಸೆ ಮಾಡುವ ಸಲುವಾಗಿ ಬ್ಯಾಂಕ್ ನಲ್ಲಿ ಇಟ್ಟಿದ್ದೆ. ಅದನ್ನು ನಿನ್ನ ಖಾತೆ ಗೆ ವರ್ಗಾಯಿಸಿದ್ದೇನೆ .ನಾನು ವಹಿಸಿರುವ ಕೆಲಸವನ್ನು ನೀನು ಸಂತೋಷವಾಗಿ ಮಾಡುತ್ತಿಯಾ ಎಂಬ ನಂಬಿಕೆ ಮೇಲೆ ನಾವು ಆತ್ಮಹತ್ಯೆ ಮಾಡಿಕೊಂಡಿದ್ದು. ..................ಸಾವು ಯಾವಾಗ ಬರುತ್ತೆ ಅಂತಾ ಕಾಯುವುದರಲ್ಲಿನ ಹಿಂಸೆ ಯಾವುದರಲ್ಲೋ ಇಲ್ಲ .ನೀನು ಒಂದು ಮಾತು ಹೇಳಿದೆ . ನೆನಪಿದೆಯಾ....... ''ನೀನು ಯಾರಿಗೂ ಹೆದರಬೇಡ ನಾನಿದ್ದೇನೆ ,ಪ್ರಾಣ ಹೋದರೂ ಸರಿ ನಾನು ಅವನನ್ನು ಎದುರಿಸುತ್ತೇನೆಂದು .......ಅದಕ್ಕೆ ಉತ್ತರ ಕೊಟ್ಟಿದ್ದೇನೆ ನೀನು ನಾವು ವಹಿಸಿದ ಕೆಲಸ ಮಾಡಿ ನಮ್ಮಗಳ ಆತ್ಮಕ್ಕೆ ಶಾಂತಿ ಉತ್ತರವನ್ನು ನೀಡುತ್ತಿಯಾ ಎಂಬ ನಂಬಿಕೆಯಿಂದ ನಾವು ಆತ್ಮಹತ್ಯೆ ಮಾಡಿಕೊಂಡಿದ್ದೀವಿ................................ಇಂತೀ...ನಿಮಗೆ................ಅಳಿದು ಹೋದ ಜೀವಗಳ ಕೊನೆಯ ವಂದನೆ......................................ಶುಭ0............................

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

sathishparthivasa@gmail.com

ಪ್ರಚಲಿತ ಪೋಸ್ಟ್‌ಗಳು