ಮನದ ಹಣತೆ

ಪಾಡ್ಯದಸಂಜೆಯಳೋ ತಂಪಾದ ಮುಸುಕಿನಲಿ ಹತ್ತಿಸು ದೀಪ ಹೃದಯ ಮಂದಿರ ದಲಿ ಚೆಲ್ಲುತ್ತಾ ಉಷೆಯು ಕರಗಿತು ನಿಶೆಯು ಆರದೆ ಉರಿಯಲಿ ಕಾಣುತ ಬೆಳಗಲಿ ಹಾದಿಯಲಿ ಮುಳ್ಳುಗಳು ಬೀದಿಯಲಿ ಕಲ್ಲುಗಳು
ಬೆಳಕು ಚಿಮ್ಮಿದೊಡೆ ಅಜ್ಞಾನ ಇರದು ಜಗದೊಳು ಶಾಂತಿ ವನವ ಬೆಳಸಿ ಪ್ರೇಮ ಯುಗಕೆ ಹರಡಿ ಸುಥೆಯ ಹರಿಸಿದೊಡೆ ಅಂಥಕಾರವೆ ಇರದು ಈ ಭುವಿಯಲಿ ಪ್ರಕೃತಿಯ ಮಡಿಲಲ್ಲಿ ಶಶಿ ಶಿಶು ವಾದರು ಪ್ರೀತಿ ಮನದಲ್ಲಿ ಪಶುವಾಗದಿರಲಿ ಎಲೆಯ ಮೇಲೊಂದು ಹನಿಯು ನೀನಾಗಿ ಕಿರಣವು ಸ್ವರ್ಶಿಸಿದೊಡೆ ಮನವು ಮುತ್ತಾಗಲಿ ಮುತ್ತು ಚಿರವಾಗಲಿ ತೈಲದ ಹಣತೆ ಬದುಕಿನ ಮಮತೆ ದೀಪದ ಸಾರ್ಥಕತೆಯಲಿ ಜೀವ ಜ್ಯೋತಿಯಾಗಲಿ ದೀಪಾವಳಿ ಬಾಳ ಚೇತನವಾಗಲಿ ಅದು ನಮ್ಮೆಲ್ಲರ ಉಸಿರಾಗಲಿ ಲೇಖಕ:ಚಾಣಾಕ್ಷ
ಚಾಣಾಕ್ಷ್ ಕನ್ನಡ ವನ್ನು ನಿಮ್ಮ ಮನದ ಮಂದಿರಕ್ಕೆ ಹಾಕುತ್ತಾ ನಿಮ್ಮ ಪ್ರೀತಿ ಗಳಿಸುತೀನಿ ಎನ್ನುವ ವಿಶ್ವಾಸವಿದೆ. ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ... ನೀವು ಶೇರ್ ಮಾಡಿದಷ್ಟೂ ಬರವಣಿಗೆಯ ಮನಸ್ಸು ಬೆಳೆಯುತ್ತದೆ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು