ಕನ್ನಡಾಂಬೆ

ಬಾ ತಾಯಿ ಬಾ ಮಾಯಿ ಧರೆಗಿಳಿದು ಬಾರೆ
ಕರುನಾಡು ಸಿರಿ ದೇವಿ ಕನ್ನಡಿಗನೊಮ್ಮೆ ನೋಡೆ
ಎಲ್ಲೆಲ್ಲಿ ಕಂಡ ಕಡೆಯಲ್ಲಿ ಅಂದು ,ಕನ್ನಡದ ಬಾವುಟ
ಗಲ್ಲಿಗಲ್ಲಿಯಲಿ ಹಳ್ಳಿ ಹಳ್ಳಿಯಲಿ ,ಕನ್ನಡಿಗನ ಅರ್ಭಟ
ಹುಡುಕಿದರು ಸಿಗದು ಇಂದು ,ಕನ್ನಡಿಗನ ಭೂಪಟ
ಕಡೆ ನೋಡು ತಾಯಿ , ಯಾವ ಯಾವ ಕಡೆ ನಿನ್ನ ಮಕ್ಕಳ ಕೂಟ
ಅತ್ತ ಇತ್ತ ಎತ್ತ ನೋಡಿದರತ್ತ ಕನ್ನಡಿಗನ ಸಾಹಸ
ಬಗಿದು ಸಿಗಿದು ಮೆಟ್ಟಿ ಮೆರೆದ ಕನ್ನಡಿಗನೇ ಅರಸ
ಮುತ್ತಿನಂತೆ ಹೊಳೆವ ಲಿಪಿ ,ಜೇನಿನಂತೆ ಸವಿಯ ನುಡಿ ಕನ್ನಡವು ನವರಸ
ಮನ ಮನದ ಪ್ರೇಮದ ವನದಲಿ ಇಂದು ಕನ್ನಡವು ವಿಷ
ಗುಡಿ ಗೊಪುರದ ಕೆತ್ತನೆಯಲಿ ಕನ್ನಡ ಸಂಸ್ಕ್ರತಿ ಅರಳಿಸಿ
ಸಾಹಿತ್ಯ ಕ್ರಾಂತಿಯಲಿ ಕನ್ನಡವ ಉನ್ನತಕ್ಕೇರಿಸಿ
ಗಂದದ ಕನ್ನಡವ ವಿಶ್ವಕ್ಕೆ ಪರಿಚಯಿಸಿ
ಮೆರೆದ ಕನ್ನಡಿಗ ಮಕ್ಕಳಿಗೆ ಕನ್ನಡ ತಾತ್ಸರವೇ?
ಸಾವು ನೋವು ಬೇನೆಯಲಿ ಕನ್ನಡತಿಯು ಬಳಲಿ
ತಾಯ ಅಳಿವು ಉಳಿವು ಕನ್ನಡಿಗನ ಕರದಲಿ
ನಾಡ ಸಂಸ್ಕ್ರತಿಯ ದೀಪ ಜಗದಲಿ ಬೆಳಗಲಿ
ಕನ್ನಡವು ಕನ್ನಡಿಗನ ಎದೆಯಲಿ ಒಣಗದ ಹಸಿರಾಗಲಿ
ಲೇಖಕ: ಚಾಣಾಕ್ಷ
ಚಾಣಾಕ್ಷ್ ಕನ್ನಡ ವನ್ನು ನಿಮ್ಮ ಮನದ ಮಂದಿರಕ್ಕೆ ಹಾಕುತ್ತಾ ನಿಮ್ಮ ಪ್ರೀತಿ ಗಳಿಸುತೀನಿ ಎನ್ನುವ ವಿಶ್ವಾಸವಿದೆ. ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ... ನೀವು ಶೇರ್ ಮಾಡಿದಷ್ಟೂ ಬರವಣಿಗೆಯ ಮನಸ್ಸು ಬೆಳೆಯುತ್ತದೆ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು