ಮುತ್ತಿನೊಳಗಿನ ಬಿಂದು

ಸಾಗರದ ಒಳಗಿಂದ ನೇಸರನ ಪ್ರತಿಬಿಂಬ ಕೆಂಪೆಲ್ಲ ಚೆಲ್ಲಿಹುದು ಪ್ರಕೃತಿಯ ಎದೆ ತುಂಬಾ ಮಿಂದೆ ಮಾತಾ ಮಿಂದೆ ನಿನ್ನ ಎದೆಯಾಳದಲಿ ಮಿಂದೆ ಕಂಡೆ ಮಾತಾ ಕಂಡೆ ,ನಿನ್ನ ಅಂತರಂಗವ ಕಂಡೆ
ಟೊಂಗೆಗಳ ನಡುವಿಂದ ಹಕ್ಕಿಗಳ ಝೇಂಕಾರ ಸಂಗೀತ ಅಲೆಯಲಿ ಸಪ್ತ ನಾದಗಳ ಸಾಕಾರ ಮಿಂದೆ ಮಾತಾ ಮಿಂದೆ ನಿನ್ನ ಎದೆಯಾಳದಲಿ ಮಿಂದೆ
ಕಂಡೆ ಮಾತಾ ಕಂಡೆ ,ನಿನ್ನ ಅಂತರಂಗವ ಕಂಡೆ
ಗಿರಿಯ ಮೇಲಿಂದ ಜಲಧಾರೆಯ ಜಲಕಾರ ಚಿಮ್ಮುತ್ತಿರೊ ಚಿಲುಮೆಯಲಿ ಕೆಂಪು ಭಾಸ್ಕರನ ಸಿಂಗಾರ ಮಿಂದೆ ಮಾತಾ ಮಿಂದೆ ನಿನ್ನ ಎದೆಯಾಳದಲಿ ಮಿಂದೆ ಕಂಡೆ ಮಾತಾ ಕಂಡೆ ,ನಿನ್ನ ಅಂತರಂಗವ ಕಂಡೆ
ತುಂತುರು ಮಳೆಯಿಂದ ತನ್ಮನ ತಂಪಾಗಿ ಭುವಿಯೆಲ್ಲ ಕೆಂಪಾಗಿ ನಿನ್ನೊಳಗೆ ನಾನಾಗಿ ಧನ್ಯ ತಾಯಿ ಧನ್ಯ ನನ್ನ ಅಂತರಾತ್ಮವು ಧನ್ಯ ನಿತ್ಯ ತಾಯಿ ನಿತ್ಯ ನಿನ್ನ ಸಿರಿ ಬಾಳಿಗೆ ನಿತ್ಯ
ಲೇಖಕರು :ಚಾಣಾಕ್ಷ
ಚಾಣಾಕ್ಷ್ ಕನ್ನಡ ವನ್ನು ನಿಮ್ಮ ಮನದ ಮಂದಿರಕ್ಕೆ ಹಾಕುತ್ತಾ ನಿಮ್ಮ ಪ್ರೀತಿ ಗಳಿಸುತೀನಿ ಎನ್ನುವ ವಿಶ್ವಾಸವಿದೆ. ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ... ನೀವು ಶೇರ್ ಮಾಡಿದಷ್ಟೂ ಬರವಣಿಗೆಯ ಮನಸ್ಸು ಬೆಳೆಯುತ್ತದೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

sathishparthivasa@gmail.com

ಪ್ರಚಲಿತ ಪೋಸ್ಟ್‌ಗಳು