ಸುಮ್ಮನೆ ಕೂತರೆ ದುಡ್ಡು ಬರುತ್ತೆ !!!! ( ಸಿರೀಯಸ್ ಆಗಿ ಯೋಚನೆ ಮಾಡಬೇಡಿ ಆದರೆ ಏನಿದು ಅಂತಾ ಸಿರೀಯಸ್ ಆಗಿ ಯೋಚನೆ ಮಾಡಿ )

ನಿಮ್ಮ ಅಭಿಪ್ರಾಯ ವನ್ನು ಕಾಮೇಟ್ ನಲ್ಲಿ ತಿಳಿಸಿ ನಿಮ್ಮ ಸಲಹೆ ನನಗೆ ಅತಿ ಮುಖ್ಯ -ಚಾಣಾಕ್ಷ ಕಷ್ಟ ಪಟ್ಟರೇ ಮಾತ್ರ ದುಡ್ಡು ಬರುತ್ತೆ ಆದರೆ ಕಷ್ಟ ಪಡದೇ ಕೂತಿದ್ದರೆ ದುಡ್ಡು ಬರೋಕೆ ಸಾಧ್ಯಾನಾ ? ಅಂತಾ ನೀವು ತಲೆಗೆ ಹುಳ ಬಿಟ್ಟು ಕೊಳ್ತಾ ಇದ್ದೀರಾ ? ಜಾಸ್ತಿ ಯೋಚನೆ ಮಾಡದೇ ಒಂದು ಸಲ ಹಳೇ ಫ್ಲಾಶ್ ಬ್ಯಾಕ್ ಕಡೆಗೆ ತಿರುಗಿ ನೋಡಿ... ನೆನಪು ಬರ್ತಾ ಇಲ್ವಾ... ಸ್ವಲ್ಪ ಹಳೇದೇ ಅಲ್ವಾ ... ಡೇಟಾ ಲಾಸ್ ಆಗಿದೆಯಾ....ಕ್ಲೂ ಕೊಡ್ತೀನಿ... ಸ್ವಲ್ಪ ರಿಕವರಿ ಮಾಡಿಕೊಳ್ಳಿ... ಚಿಕ್ಕ ವಯಸ್ಸಿನಲ್ಲಿ ಯಾರು ಸಿಕ್ಕಾಪಟ್ಟೆ ತುಂಟತನ ಮಾಡಿರುತ್ತಾರೋ ... ಅವರಿಗೆ ಅಪ್ಪ, ಅಮ್ಮ, ಅಜ್ಜಿ ,ತಾತ ಅಥವಾ ಪ್ರೀತಿ ಪಾತ್ರರು ಏನೋ ಒಂದು ಆಸೆ ತೋರಿಸಿ ನಮ್ಮ ವೈಲೆಂಟ್ ನಾ ಸೈಲೆಂಟ್ ಮಾಡೋಕೆ , ಸುಮ್ಮನೆ ಕೂತ್ಕೋ ದುಡ್ಡು ಕೊಡ್ತೀನಿ .... ಕಾಸು ಕೊಡ್ತೀನಿ... ಒಂದು ರೂಪಾಯಿ ಕೊಡ್ತೀನಿ... ಐವತ್ತು ಪೈಸೆ ಕೊಡ್ತೀನಿ...ನೋಡಿ ಆವಾಗ ಸುಮ್ಮನೆ ಕೂತರೆ ಕಾಸು...ಈಗ ಸುಮ್ಮನೆ ಕೂತರೆ ಕ್ಲಾಸ್ ...ಮನಿ ಲಾಸ್...ಇಷ್ಟೇ ಜೀವನ...ಇದು ಇಷ್ಟ ಆದರೆ ಶೇರ್ ಮಾಡಿ... ಇದರಿಂದ ನಿಮಗೆ ಏನು ಅಗೊತ್ತೆ ಲಾಸ್...!!!!!!!! ಚಾಣಾಕ್ಷ್ ಕನ್ನಡ ವನ್ನು ನಿಮ್ಮ ಮನದ ಮಂದಿರಕ್ಕೆ ಹಾಕುತ್ತಾ ನಿಮ್ಮ ಪ್ರೀತಿ ಗಳಿಸುತೀನಿ ಎನ್ನುವ ವಿಶ್ವಾಸವಿದೆ. ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ... ನೀವು ಶೇರ್ ಮಾಡಿದಷ್ಟೂ ಬರವಣಿಗೆಯ ಮನಸ್ಸು ಬೆಳೆಯುತ್ತದೆ. .

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು