ಲವ್ ಮಾಡೋಕೆ ಮುಂಚೆ ಓದಲೇಬೇಕು

ನಿಮ್ಮ ಅಭಿಪ್ರಾಯ ವನ್ನು ಕಾಮೇಟ್ ನಲ್ಲಿ ತಿಳಿಸಿ ನಿಮ್ಮ ಸಲಹೆ ನನಗೆ ಅತಿ ಮುಖ್ಯ -ಚಾಣಾಕ್ಷ ಪ್ರೀತಿ ಎಂದರೆ ಹೇಳಿಕೊಳ್ಳಲಾಗದ ಒಂದು ಅನುಭವ, ಪ್ರೀತಿ ಎಂದರೆ ನೋಡುವ ಆತುರ , ಕಾಣುವ ತವಕ ,ಪ್ರೀತಿ ಮಾಡಿರುವವರಿಗೆ ಮಾತ್ರ ಗೊತ್ತು ಪ್ರೀತಿಯ ಅನುಭವ ಪ್ರೀತಿನಾ ನಿವೇದನೆ ಮಾಡುವಾಗ ಯಾವ ಪುಣ್ಯಾತ್ಮ ಗುಲಾಬಿ ಹೂವು ಕೊಡೋಕೆ ಶುರು ಮಾಡಿದನೂ ಗೊತ್ತಿಲ್ಲ.ಆದರೆ ಅದು ಎಷ್ಟು ಅರ್ಥಗರ್ಭಿತವಾಗಿದೆ ಅಂದರೆ ಪ್ರೀತಿಯಲ್ಲಿ ಕೇವಲ ಸುಂದರವಾದ ಗುಲಾಬಿ ಮಾತ್ರ ಇಲ್ಲ ... ಅದರಲ್ಲಿ ಮುಳ್ಳುಗಳು ಇದೆ ಎಂಬುದರ ಅರ್ಥವಾಗುತ್ತದೆ. ಒಂದು ಹುಡುಗಿ ಒಂದು ಹುಡುಗ ಪ್ರೀತಿಯಲ್ಲಿ ಬಿದ್ದಾಗ,ಒಂದು ರೀತಿಯ ಸುಂದರ ಅನುಭವಗಳು , ಮುಂದೆ ಬರುವ ಜಗಳ ,ಮನಸ್ತಾಪದ ಚಿಂತನೆಗಳು ಹತ್ತಿರ ಸುಳಿಯದಂತೆ ತಡೆಯುತ್ತದೆ. ಗಂಡು ಯೋಚನೆ ಮಾಡುವ ರೀತಿಗೆ ಮತ್ತು ಹೆಣ್ಣು ಯೋಚನೆ ಮಾಡುವ ರೀತಿಗೆ ತುಂಬಾ ವೈತ್ಯಾಸಗಳು ಇರುತ್ತದೆ.ಗಂಡು ಹೆಣ್ಣಿನ ಮಧ್ಯೆ ಅನ್ಯೋನ್ಯತೆ, ಸಣ್ಣ ಪುಟ್ಟ ಜಗಳ ,ಬೇಗ ಜಗಳ ಮರೆಯುವ ಗುಣ , ಹೊಂದಾಣಿಕೆ ಇದ್ದರೆ ಮಾತ್ರ ಸಂಸಾರ ಸ್ವರ್ಗ ...ಇಗೋ ಇದ್ದರಂತೂ ಬದುಕು ನರಕ.... ಅದಕ್ಕೆ ಪ್ರೀತಿಯಲ್ಲಿ ಯಶಸ್ವಿಯಾಗುವ ಪ್ರೇಮಿಗಳು ಅಥವಾ ಅರೆಂಜ್ ಆಗುವ ದಂಪತಿಗಳು ಹೊಂದಾಣಿಕೆ ಆಗದೇ ವಿಚ್ಛೇದನ ಪಡೆದುಕೊಳ್ಳುತ್ತಾರೆ. ಒಂದೇ ಮನೆಯಲ್ಲಿ ಒಂದು ವರ್ಷ ಹೊಂದಾಣಿಕೆಯಿಂದ ಜೀವಿಸಿದರೆ ಅಂದ್ರೆ ಅದು LL ಆಗ DL ಸುಲುಭವಾಗಿ ಸಿಗುತ್ತೆ... ಬದುಕು ಉತ್ತಮ ಜರ್ನಿ ಆಗುತ್ತೆ... ಆಕ್ಸಿಡೆಂಟ್ ಆಗದ ಹಾಗೆ ಡ್ರೈವ್ ಮಾಡಬೇಕು...ನಾನೇ ಏಕೆ ಡ್ರೈವ್ ಮಾಡಬೇಕು ಅನ್ನುವ ಇಗೋ ಬರಬಾರದು... ಬುದ್ಧಿವಂತಿಕೆಯಿಂದ ಅವರಿಂದ ಡ್ರೈವ್ ಮಾಡಿಸಬೇಕು....ಇದು ಅನುಭವ ಆಗಿದ್ದರೆ ನಿಜ ಅನಿಸುತ್ತೆ...ಅನುನುಭವಿ ಆಗಿದ್ದರೆ, ಮನಸ್ಸಿನಲ್ಲಿ ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳಿ... ಎಲ್ಲಾ ಸ್ನೇಹಿತರಿಗೆ ಶೇರ್ ಮಾಡಿ, ಎಲ್ಲರ ಸಂಸಾರವು ಉತ್ತಮವಾಗಿರಲಿ ಅಲ್ಲವೇ ಸ್ನೇಹಿತರೇ.... ಶೇರ್ ಮಾಡೋದ್ರಿಂದ ಕಳೆದುಕೊಳ್ಳೋದು ಏನೂ ಇಲ್ಲ... ಎನ್ನೋದು ನೆನಪಿರಲಿ... ಚಾಣಾಕ್ಷ್ ಕನ್ನಡ ವನ್ನು ನಿಮ್ಮ ಮನದ ಮಂದಿರಕ್ಕೆ ಹಾಕುತ್ತಾ ನಿಮ್ಮ ಪ್ರೀತಿ ಗಳಿಸುತೀನಿ ಎನ್ನುವ ವಿಶ್ವಾಸವಿದೆ. ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ... ನೀವು ಶೇರ್ ಮಾಡಿದಷ್ಟೂ ಬರವಣಿಗೆಯ ಮನಸ್ಸು ಬೆಳೆಯುತ್ತದೆ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು