ಇರಾನ್ ನಲ್ಲಿ 10 ಜನರ ಸಾವು


ಇರಾನ್ ನಲ್ಲಿ 10 ಪರ್ವತಾರೋಹಿಗಳು ಸಾವು 


ಟೆಹ್ರಾನ್ ಇರಾನ್ ನ ರಾಜಧಾನಿ , ಇಲ್ಲಿ ವಿಪರೀತವಾಗಿ ಬೀಳುತ್ತಿರುವ ಹಿಮದಲ್ಲಿ ,ಪರ್ವತಾರೋಹಿಗಳು ಮತ್ತು ಸಾಹಸಿಗಳು ಉತ್ಸಾಹದಿಂದ ಪಾಲ್ಗೊಂಡು , ಸಾಹಸಕ್ಕೆ ಕೈ ಹಾಕಿದ್ದಾರೆ.ಇದರ ಪರಿಣಾಮ ಸುಮಾರು 10 ಪರ್ವತಾರೋಹಿಗಳು , ಸಾವನ್ನಪ್ಪಿದ್ದಾರೆ . ಇನ್ನೂ ಹಲವಾರು ಜನರು ಕಾಣೆ ಆಗಿದ್ದಾರೆ.ಪ್ರತಿಕೂಲ ಪರಿಸ್ಥಿತಿಯಲ್ಲೂ , ಸರ್ಕಾರ ಆ ಪರ್ವತಾರೋಹಿಗಳ ಹುಡುಕಾಟ ನಡೆಸಿದೆ.ಈ ಹುಡುಕಾಟಕ್ಕೆ 20 ತಂಡ ನಿಯೋಜಿಸಲಾಗಿದೆ.ಒಂದು ಅಂದಾಜಿನ ಪ್ರಕಾರ , ಸುಮಾರು 7 ಜನರು ಕಾಣೆ ಆಗಿರಬಹುದು ಎಂದು ಅಂದಾಜಿಸಲಾಗಿದೆ.

ಶನಿವಾರದ ರಾತ್ರಿ, ಮತ್ತಷ್ಟು ಪರಿಸ್ಥಿತಿ ಪ್ರತಿಕೂಲವಾಗಿದ್ದರಿಂದ , ಹುಡುಕಾಟವನ್ನು ನಿಲ್ಲಿಸಲಾಗಿದ್ದು ,ಈಗ ಭಾನುವಾರ ಮತ್ತೆ ಆರಂಭವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈಗ ಸಾವನ್ನಪ್ಪಿರುವ ಜನರಲ್ಲಿ , ರಾಜಕೀಯ ಕಾರ್ಯಕರ್ತರು , ಶೈಕ್ಷಣಿಕ , ವೈದ್ಯರು , ಮತ್ತು ಪರ್ವತಾರೋಹಣ ಬೋಧಕರಿದ್ದಾರೆ.

ಶುಕ್ರವಾರ ಮತ್ತೊಂದು ಅವಘಡ ಸಂಭವಿಸಿತ್ತು . ಕೇಬಲ್ ಕಾರು ,ಮುರಿದು ಬಿದ್ದಾಗ , ಸುಮಾರು 100 ಜನರು ಸ್ಕೀ ರೆಸಾರ್ಟ್ ನಲ್ಲಿ ಸಿಲುಕಿದ್ದರು.ಯಾವುದೇ ಆಪಾಯ ಆಗಿರಲಿಲ್ಲ.ಹಿಮಪಾತದ ತೊಂದರೆ , ತಕ್ಷಣ ಕಡಿಮೆ ಆಗುವ , ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು