100 ಮಾದರಿ ಗ್ರಾಮ - ಮುಖ್ಯ ಮಂತ್ರಿ ಯೋಗಿ


ಸ್ವಾವಲಂಬಿ ಗ್ರಾಮಗಳ ನಿರ್ಮಾಣದ ಗುರಿ - ಯೋಗಿ ಆದಿತ್ಯ ನಾಥ್


100 ಮಾದರಿ ಗ್ರಾಮ - ಮುಖ್ಯ ಮಂತ್ರಿ ಯೋಗಿ


ಗೋರಕ್ ಪುರ್ ಜಿಲ್ಲೆಯಲ್ಲಿ 100 ಗ್ರಾಮ ಪಂಚಾಯಿತಿ ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ಅಭಿವೃದ್ಧಿ ಪಡಿಸಲು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.ಕಾಲಮಿತಿಯೊಳಗೆ ಈ ಕಾರ್ಯಗಳು ಪೂರ್ತಿ ಆಗಬೇಕು ಮತ್ತು ಈ ಕಾರ್ಯಕ್ಕೆ ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ( CSR )  ಮತ್ತು ಕಾರ್ಯಕ್ಷಮತೆ ಧನ ಸಹಾಯದ ಹಣವನ್ನು ಬೆಳೆಸಿಕೊಳ್ಳುವಂತೆ ಆದೇಶಿಸಲಾಗಿದೆ.

ಮಾದರಿ ಗ್ರಾಮಗಳಲ್ಲಿ ಏನು ಇರುತ್ತದೆ


ಹಳ್ಳಿಗಳಲ್ಲಿ ನೀರಿನ ಸಂರಕ್ಷಣೆ ಮತ್ತು ಅಂತರ್ಜಲ ಮಟ್ಟ ಹೆಚ್ಚಿಸಲು ವೈಜ್ಞಾನಿಕ ರೀತಿಯಲ್ಲಿ ಕ್ರಮವನ್ನು ತೆಗೆದುಕೊಳ್ಳುವುದು ,
ಒಳಚರಂಡಿ ವ್ಯವಸ್ಥೆ , ವಿಶಾಲವಾದ ರಸ್ತೆಗಳು ಮತ್ತು ಒಳರಸ್ತೆಗಳು ,ಓಪನ್ ಜಿಮ್ , ಸುಸಜ್ಜಿತ ಲೈಬ್ರರಿ , ಕ್ರೀಡಾ ಮೈದಾನ,ಮಳೆ ನೀರಿನ ಕೊಯ್ಲು ಪದ್ಧತಿ , ಆರ್, ಓ ನೀರಿನ ಸ್ಥಾವರಗಳು , ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ತರಗತಿಗಳು , ಅಂಗನವಾಡಿ ಕೇಂದ್ರಗಳು , ಸುಸಜ್ಜಿತ ಸ್ವಚ್ಛ ಆರೋಗ್ಯ ಕೇಂದ್ರಗಳು ,ಸಮುದಾಯ ಭಾವನೆಗಳು ನಿರ್ಮಿಸಲು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.ಬೆಳೆ ಸಂಬಂಧಿತ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಪರಿಹರಿಸಿ , ಗ್ರಾಮಸ್ಥರ ಆದಾಯ ಹೆಚ್ಚಳಕ್ಕೆ ಕ್ರಮವಹಿಸಬೇಕು ಎಂದು ಸೂಚಿಸಿದ್ದಾರೆ.
ಮಾದರಿ ಗ್ರಾಮಗಳ ಅಭಿವೃದ್ಧಿಗೆ ಈಗಾಗಲೇ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿಜಯೇಂದ್ರ ಪಾಂಡಿಯನ್ ತಿಳಿಸಿದ್ದಾರೆ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು