2020 ಸಿನಿಮಾ - ಬಂದ ಪುಟ್ಟ - ಹೋದ ಪುಟ್ಟ

2020 ರ ಸಿನಿಮಾ - ಬಂದಿದೆಷ್ಟು ? ಹೋಗಿದೆಷ್ಟು ?


ಪ್ರತಿವರ್ಷ 200 ಕ್ಕೂ ಹೆಚ್ಚು ಚಿತ್ರಗಳು ಚಂದನವನದಲ್ಲಿ ,ತೆರೆಕಾಣುತ್ತಿದ್ದು ,ಈ ವರ್ಷ ಕೇವಲ 80 ರಿಂದ 90 ರಷ್ಟು ಚಿತ್ರಗಳಷ್ಟೇ ಬಿಡುಗಡೆ ಆಗಿದೆ.2020 ರ ಹೊಸವರ್ಷದಲ್ಲಿ ,ಹೊಸ ನಿರೀಕ್ಷೆ ,ಇಟ್ಟುಕೊಂಡಿದ್ದ ಚಿತ್ರ ರಂಗ ತುಂಬಾನೇ ನಿರಾಸೆ ಅನುಭವಿಸಿತು.ಕರೋನಾ ಮಹಾಮಾರಿಯಿಂದ ಇಡೀ ವಿಶ್ವದ ಮಾರುಕಟ್ಟೆ ಮತ್ತು ಮನರಂಜನೆಯ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿತ್ತು.


ಕೋವಿಡ್ ನಿಂದ ಡೆಡ್ ಆದ ಚಿತ್ರರಂಗ


ಕರೋನಾ ಲಾಕ್ ಡೌನ್ ಮತ್ತು ಆನಂತರದ ಪರಿಸ್ಥಿತಿ ಸುಮಾರು 6 ತಿಂಗಳು ಕಾಡಿದೆ...ಮೊದಲ 3 ತಿಂಗಳು ಹೊರತುಪಡಿಸಿದರೆ,ಚಿತ್ರರಂಗದ ಬೆಳವಣಿಗೆ ತೀರಾ ಕುಂಠಿತವಾಗಿದೆ .

ಸ್ಟಾರ್ ಗಳು ಬರಲೇ ಇಲ್ಲ


ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ದ್ರೋಣ ಒಂದೇ ಸ್ಟಾರ್ ಚಿತ್ರ... ಉಳಿದಂತೆ ,ಯಾವ ಚಿತ್ರಗಳು ಚಂದನವನದಲ್ಲಿ ಚೆಂದ ಮಾಡಲೇ ಇಲ್ಲ.ಇದಕ್ಕೆ ಪ್ರಮುಖ ಕಾರಣ ಇದೇ ಕೋವಿಡ್ ...ಸರ್ವವೂ ಕೋವಿಡ್ ಮಯ ಆಗಿತ್ತು.

ಓಟಿಟಿ ವೇದಿಕೆ


ಮನರಂಜನೆಗೆ‌ ಕೇವಲ ಚಿತ್ರಮಂದಿರ  ಎಂದು ತಿಳಿದಿದ್ದ ಜನತೆಗೆ , ಹೊಸ ಅಲೆಯನ್ನು ಎಬ್ಬಿಸಿದ್ದು ಓಟಿಟಿ

ಹಲವು ಭಾಷೆಗಳ ಹಲವು ಚಿತ್ರಗಳು ಈ ವರ್ಷ ಓಟಿಟಿಯಲ್ಲಿ ಬಿಡುಗಡೆ ಆಯಿತು . ಒಂದಷ್ಟು ಸೌಂಡ್ ಮಾಡಿತು.ಒಂದಷ್ಟು ಪರಸ್ವರ ಜಗಳಕ್ಕೆ ಕೂಡ ಕಾರಣವಾಯಿತು.ಕನ್ನಡದಲ್ಲಿ ಪ್ರಮುಖವಾಗಿ , ಫ್ರೆಂಚ್ ಬಿರಿಯಾನಿ ,ಲಾ, ತನಿಖೆ , ಭೀಮಸೇನ ನಳಮಹಾರಾಜ ,ಭೂಮಿಕಾ , ಹೀಗೆ ಹಲವು ಚಿತ್ರಗಳು ಬಿಡುಗಡೆ ಆಗಿತ್ತು.ಓಟಿಟಿಯ ಚಿತ್ರಗಳು ಕೂಡ ಪೈರಸಿ ಸಮಸ್ಯೆ ಅನುಭವಿಸಿದ್ದು ಮಾತ್ರ ವಿಪರ್ಯಾಸ ...

ದಿಗ್ಗಜರು ಹೋದರು


ಚಿತ್ರರಂಗ ಈ ವರ್ಷ ಸುಮಾರು 25 ಕ್ಕೂ ಹೆಚ್ಚು ಕಲಾವಿದರನ್ನು ಕಳೆದುಕೊಂಡು ಬಿಟ್ಟಿತು . ಅದರಲ್ಲಿ ಮುಖ್ಯವಾಗಿ ಯುವ ನಟ ಚಿರಂಜೀವಿ ಸರ್ಜಾ , ಸಂಗೀತ ಮಾಂತ್ರಿಕ ಬಾಲ ಸುಬ್ರಹ್ಮಣ್ಯಂ , ಹಾಸ್ಯ ನಟ ಬುಲೆಟ್ ಪ್ರಕಾಶ್ , ಹೀಗೆ ಸಾಧನೆ ಮಾಡಿದ ಮಹನೀಯರ ಸಾಲು ಬೆಳೆಯುತ್ತಲೇ ಹೋಗುತ್ತದೆ.ಎಲೆಗಳು ಉದುರಿದ ಮೇಲೆ ಚಿಗುರೆಲೆಗಳು ಮರಕ್ಕೆ ಆಧಾರವಾಗಬೇಕು.2021 ರ ಹೊಸ ವರ್ಷದಲ್ಲಿ ಹೆಚ್ಚು ಹೆಚ್ಚು ಚಿಗುರೆಲೆ ಗಳು ಚಿತ್ರ ರಂಗ ಪ್ರವೇಶ ಮಾಡಲಿ  ಎಂಬುದಷ್ಟೇ ಚಿತ್ರರಂಗದ ಆಶಯ

2021 ಮೃಷ್ಟಾನ್ನ ಭೋಜನ ಆಗಲಿದೆಯೇ ?


2020 ರ ಸ್ಟಾರ್ ಗಳೆಲ್ಲಾ 2021 ಕ್ಕೆ ಬರುವುದರಿಂದ ,ಪ್ರೇಕ್ಷಕರ ಪಾಲಿಗೆ ಮೃಷ್ಟಾನ್ನ ಭೋಜನ ಆಗಲಿದೆ ಎಂಬುದು ಸಿನಿ ಪಂಡಿತರ ಲೆಕ್ಕಾಚಾರ.


ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು