2028 ಕ್ಕೆ ಚೀನಾ ನಂಬರ್ 1 2030 ಕ್ಕೆ ಭಾರತ ನಂಬರ್ 3 ಆಗಲಿದೆಯೇ ?


2028 ಕ್ಕೆ ಚೀನಾ ನಂಬರ್ 1 2030 ಕ್ಕೆ ಭಾರತ ನಂಬರ್ 3


ಕರೋನಾ ಚೀನಾಗೆ ಅತಿ ದೊಡ್ಡ ಸಹಾಯ ಮಾಡಲಿದೆ. ಕರೋನಾದಿಂದ ವಿಶ್ವದ ಹಲವು ರಾಷ್ಟ್ರಗಳು ಚೇತರಿಕೆ ಕಾಣುತ್ತಿದ್ದರೆ , ಚೀನಾ ಮಾತ್ರ ಚೇತರಿಕೆಯಿಂದ ಹೊರ ಬಂದು , ಪ್ರಗತಿ ಸಾಧಿಸಿದೆ.

ಚೀನಾದ ಈ ಅಭಿವೃದ್ಧಿಗೆ ಕಾರಣವೇನು ?


ಚೀನಾದಲ್ಲಿ ಕರೋನಾ ವೈರಸ್ ಬೇಗ ಕಾಣಿಸಿಕೊಂಡಿತು.ಲಾಕ್ ಡೌನ್ ಮಾಡಿದರೂ , ಮತ್ತೆ ಆದಷ್ಟು ಬೇಗ ಸಮಸ್ಯೆಯಿಂದ ಆಚೆ ಬಂದರು .ಆಗ ವಿಶ್ವದ ರಾಷ್ಟ್ರಗಳು ಸಮಸ್ಯೆ ಎದುರಿಸಲು ಶುರು ಮಾಡಿತ್ತು.ಇದು ಚೀನಾದ ಆರ್ಥಿಕತೆಗೆ ವರವಾಯಿತು.

ಸೆಂಟರ್ ಫಾರ್ ಎಕನಾಮಿಕ್ಸ್ ಆಂಡ್  ಬಿಸಿನೆಸ್ ರಿಸರ್ಚ್ ವರದಿ ಏನು ?


ಚೀನಾದ ಆರ್ಥಿಕತೆ 2021 -2025 ರಿಂದ ವರ್ಷಕ್ಕೆ ಸರಾಸರಿ 5.7 ರಷ್ಟು , ಆರ್ಥಿಕ ಬೆಳವಣಿಗೆ ಹೊಂದಲಿದ್ದು ,2026 -2030 ರೂಂ ವರೆಗೂ, ವರ್ಷಕ್ಕೆ , 4.5 ಕ್ಕೆ ಇಳಿಯುತ್ತದೆ. 2021 ರಲ್ಲಿ ಅಮೇರಿಕಾ, ಸಾಂಕ್ರಾಮಿಕ ರೋಗದ ನಂತರ ಆರ್ಥಿಕತೆ ಉತ್ತಮಗೊಳ್ಳುವ ನಿರೀಕ್ಷೆ ಇದ್ದು ,2022 ರಿಂದ 2024 ರ ನಡುವೆ , ವರ್ಷಕ್ಕೆ 1.9 % ಕ್ಕೆ ನಿಧಾನವಾಗುತ್ತದೆ . ಮತ್ತು ಅದರ ನಂತರ 1.6% ಕ್ಕೆ ಇಳಿಯುತ್ತದೆ.

ಭಾರತದ ಆರ್ಥಿಕತೆ


ಭಾರತದಲ್ಲಿ ಚೀನಾ ಸಂಬಂಧಿತ ಆಪ್ ಮತ್ತು ಕೆಲವು ನಿಷೇಧಗಳು , ಸ್ವದೇಶಿ ವಸ್ತುಗಳ ಬಳಕೆಯ ಜಾಗೃತಿಯಿಂದಾಗಿ ,ಆಮದು ಕಡಿಮೆಯಾಗಿ , ಆಂತರಿಕ ಮಾರುಕಟ್ಟೆ ಬಲಿಷ್ಠ ಆಗಬಹುದು.ಚೀನಾದ ಕೈಗಾರಿಕೆಗಳು ಭಾರತಕ್ಕೆ ವಲಸೆ ಬರುವುದರಿಂದ ಆರ್ಥಿಕತೆ ಸುಧಾರಿಸುವ ಸಾಧ್ಯತೆ ಇದೆ.ಆತ್ಮನಿರ್ಭರದಿಂದ ಉದ್ಯೋಗಾವಕಾಶಗಳು ಹೆಚ್ಚಾಗಿ ದೊರೆಯಬಹುದು . ಇದರಿಂದ ಆರ್ಥಿಕತೆ ಬಲಗೊಳ್ಳ ಬಹುದು.
ಸಮೀಕ್ಷೆ 2030 ನೇ ಇಸವಿಯಲ್ಲಿ ಜಪಾನ್ ದೇಶವನ್ನು ಹಿಂದಿಕ್ಕಿ, 3 ನೇ ಬಲಿಷ್ಠ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಲಿದೆ ಎಂದು ಹೇಳಿದೆ.

ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು