2050 - ಕಾರ್ಬನ್ ಮುಕ್ತ - ಜಪಾನ್ ಸರ್ಕಾರ

2050 ಕ್ಕೆ ಕಾರ್ಬನ್ ಮುಕ್ತ ಜಪಾನ್


ವಿಶ್ವದಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಇದರ ಪರಿಣಾಮ ಪರಿಸರದ ಮೇಲೆ ಆಗುತ್ತಿದೆ.ಹೀಗಾಗಿ ಪ್ರತಿಯೊಂದು ದೇಶವು , ಕಾರ್ಬನ್ ಮುಕ್ತ ಪರಿಸರವನ್ನು ನಿರ್ಮಿಸಲು ಪ್ರೋತ್ಸಾಹ ನೀಡುತ್ತಿದೆ. ತಂತ್ರಜ್ಞಾನದಲ್ಲಿ ಬಹಳ ಮುಂದಿರುವ ಜಪಾನ್ 2050 ಕ್ಕೆ ಸಂಪೂರ್ಣ ಕಾರ್ಬನ್ ಮುಕ್ತ ಆಗುವ ಬಗ್ಗೆ ಕಾರ್ಯಪ್ರವೃತ್ತವಾಗುತ್ತಿದೆ.

ಹಸಿರು ಮತ್ತು ಇಂಗಾಲ ಮುಕ್ತ ಆರ್ಥಿಕತೆಯಲ್ಲಿ ಅತ್ಯುತ್ತಮ
ಬೆಳವಣಿಗೆಯನ್ನು  ಸಾಧಿಸಲು ಯೋಜನೆಯೊಂದನ್ನು ರೂಪಿಸಿದ್ದಾರೆ.
ಹಸಿರು ಹೂಡಿಕೆ ಯಾವುದೇ ಉದ್ಯಮಿಗೆ ಹೊರೆಯಲ್ಲ ಅದು ಅವಕಾಶ ಎಂದು ಹೇಳಿದರು.

ಕೈಗಾರಿಕೆಗಳಿಗೆ ಉತ್ತೇಜನ


ಹಸಿರು ಮತ್ತು ಕಾರ್ಬನ್ ಮುಕ್ತ ಕೈಗಾರಿಕೆಗಳಿಗೆ ಜಪಾನ್ ಸರ್ಕಾರ ಹಲವು ರಿಯಾಯಿತಿಗಳನ್ನು ಜಾರಿಗೆ ತಂದಿದೆ.ನವೀಕರಿಸಬಹುದಾದ ಮತ್ತು ಪರಿಸರಕ್ಕೆ ಹಾನಿಮಾಡದ ಇಂಧನ ಶಕ್ತಿ ಉತ್ಪಾದನಾ ಘಟಕಗಳು , ಸಂಶೋಧನೆ ಮತ್ತು ತಂತ್ರಜ್ಞಾನದ ಅಭಿವೃದ್ಧಿಗೆ ಧನ ಸಹಾಯ ,ತೆರಿಗೆ ಪ್ರೋತ್ಸಾಹ , ಹಣಕಾಸಿನ ನೆರವು ಹೀಗೆ 2 ಟ್ರಿಲಿಯನ್ ಯೆನ್ ಮೀಸಲು ಇಡಲಾಗಿದೆ.
2030 ರ ವೇಳೆಗೆ , 90 ಟ್ರಿಲಿಯನ್ ಯೆನ್ ಮತ್ತು 2050 ರ ವೇಳೆಗೆ , 190 ಟ್ರಿಲಿಯನ್ ಯೆನ್ ವಾರ್ಷಿಕ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ.


ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು