ಜನವರಿ 20ಕ್ಕೆ ಜೋ ಬೈಡನ್


ಜನವರಿ 20 ರಂದು ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕಾರ

ವಾಷಿಂಗ್ಟನ್ ಡಿಸಿ ಕಚೇರಿಯಲ್ಲಿ ಜನವರಿ 20 ಮಧ್ಯಾಹ್ನ 46 ನೇ ಅಧ್ಯಕ್ಷರಾಗಿ ,ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಯಾಗಿ ಕಮಲಾ ಹ್ಯಾರಿಸ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.1933 ರಲ್ಲಿ ಅಂಗೀಕರಿಸಲ್ಪಟ್ಟ 20 ನೇ ತಿದ್ದುಪಡಿಯು ,ಜನವರಿ 20 ರಂದು ಹೊಸ‌ ಅಧ್ಯಕ್ಷರ ಆಯ್ಕೆಗೆ ಅನುಕೂಲ ಮಾಡಿಕೊಟ್ಟಿತು..

ಕರೋನಾ ಹಿನ್ನೆಲೆಯಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ

ಈ ಸಲ ಪ್ರಮಾಣ ವಚನ ಸ್ವೀಕಾರ ಸಮಾರಂಭ ಅತ್ಯಂತ ಸರಳ ಮತ್ತು ಕಡಿಮೆ ಜನರ ಉಪಸ್ಥಿತಿಯಲ್ಲಿ ನಡೆಯುತ್ತದೆ ಎಂದು ಜೋ ಬೈಡನ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆಯೇ ?

ಸಾಮಾನ್ಯವಾಗಿ , ಅಧಿಕಾರ ಬಿಟ್ಟು ಕೊಡುವ ಅಧ್ಯಕ್ಷರು ಮುಂದಿನ ಸಾಲಿನಲ್ಲಿ ಕುಳಿತು , ಹೊಸ ಅಧ್ಯಕ್ಷರಿಗೆ ಶುಭಾಶಯವನ್ನು ಕೋರುವುದು ವಾಡಿಕೆ , ಆದರೆ ಈ ಸಲ ಟ್ರಂಪ್ ಈ ವಾಡಿಕೆಯನ್ನು ಉಳಿಸುತ್ತಾರೋ ಅಥವಾ ಅಳಿಸುತ್ತಾರೋ ಎನ್ನುವ ಕುತೂಹಲ ಜನರಿಗೆ ಇದೆ.

ಅಧಿಕಾರ ಶಾಂತಿಯುತವಾಗಿ , ಮತ್ತು ಅಮೇರಿಕಾದ ಅಭಿವೃದ್ಧಿಯ ಪೂರಕವಾಗಿ ಹಸ್ತಾಂತರ ಆಗಲಿದೆ ಎಂದು ನಾನು ನಂಬಿದ್ದೇನೆ ಎಂದು ಜೋ ಬೈಡನ್ ಹೇಳಿದ್ದಾರೆ.

ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು