ಡಿಸೆಂಬರ್ 22 ಯಾವ ದಿನ ? ತಪ್ಪದೇ ಓದಿ


ಅರ್ಥವಿಲ್ಲದ , ಎಷ್ಟೋ ದಿನಗಳ ಮಧ್ಯೆ ಒಬ್ಬ ಪ್ರತಿಭಾವಂತನ ದಿನ

ಡಿಸೆಂಬರ್ 22 ಯಾವ ದಿನ ?


ಭಾರತೀಯ ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ರವರ ಹುಟ್ಟಿದ ದಿನವನ್ನು ಭಾರತದಲ್ಲಿ ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತದೆ.

ಡಿಸೆಂಬರ್ 22 ,ತೆಮಿಳುನಾಡಿನ ಕಡೂರಿನಲ್ಲಿ ಬ್ರಾಹ್ಮಣ  ಅಯ್ಯಂಗಾರ್ ಸಂಪ್ರದಾಯದ ಕುಟುಂಬದಲ್ಲಿ ,1887 ರಲ್ಲಿ ಜನಿಸಿದರು.ಶಾಲೆಯ ದಿನದಿಂದಲೇ , ಅದ್ಭುತ ಗಣಿತದ ಜ್ಞಾನ ಹೊಂದಿದ್ದರು.ಗಣಿತದಲ್ಲಿ ಮಹಾನ್ ಸಾಧನೆ ಮಾಡಿದ್ದರು.ಭಾರತದ ಗಣಿತದ ವಿಷಯದಲ್ಲಿ ಹೆಮ್ಮೆಯ ಪುತ್ರ ಆಗಿದ್ದರು.ಇವರ ಕೊಡುಗೆ ಇಂದು ಕೂಡ ಪ್ರಸ್ತುತ ಆಗಿದೆ.

ಶ್ರೀನಿವಾಸ ರಾಮಾನುಜನ್ 11 ನೇ ವಯಸ್ಸಿಗೆ ಕಾಲೇಜಿನ ಗಣಿತದಲ್ಲಿ ಪರಿಣಿತಿ ಗಳಿಸಿದ್ದರು.13 ನೇ ವಯಸ್ಸಿನಲ್ಲಿ , ಗಣಿತದಲ್ಲಿ ಶ್ರೀನಿವಾಸ ರಾಮಾನುಜನ್ ಮಾಸ್ಟರ್ ಆಗಿದ್ದರು.

ಶ್ರೀನಿವಾಸ ರಾಮಾನುಜನ್ ಇಂಗ್ಲಿಷಿನಲ್ಲಿ ಗಣಿತಕ್ಕೆ ಸಂಬಂಧ ಪಟ್ಟ ಹಾಗೆ ,ಹಲವು ಪತ್ರಗಳನ್ನು ಇಂಗ್ಲಿಷ್ ಗಣಿತಜ್ಞರಿಗೆ ಬರೆದರು.ಆದರೆ ಆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರುಗಳು , ಓದದೇ ವಾಪಸ್ ಕಳುಹಿಸಿದ್ದರು.

ಈ ಮಹಾನ್ ಗಣಿತಜ್ಞ ತನ್ನ ಜೀವನದುದ್ದಕ್ಕೂ ,ಬಡತನ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದರು.1920 ರಲ್ಲಿ ,ವಿಶ್ವವು ಈ ಶ್ರೇಷ್ಠ ಗಣಿತಜ್ಞರನ್ನು ಕಳೆದುಕೊಂಡಿತು.ಆಗ ಇವರಿಗೆ 32 ವರ್ಷ ವಯಸ್ಸಾಗಿತ್ತು.ಅಪಾರ ಜ್ಞಾನ ಸಂಪತ್ತು ಇವರ ಬಳಿ ಇದ್ದರೂ, ಬಡತನದಿಂದ ಹೊರಬರಲಾಗದೆ , ಅನಾರೋಗ್ಯದಿಂದ ನಿಧನ ಆದರೂ ,ಅವರು ಗಣಿತದಲ್ಲಿ ಮಾಡಿದ ಅಪ್ರತಿಮ ಸಾಧನೆಯನ್ನು ಗುರುತಿಸಿ ,ಭಾರತ ಸರ್ಕಾರ ಡಿಸೆಂಬರ್ 22 ರಂದು ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತಿದೆ.


ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು