ಡಿಸೆಂಬರ್ 23 , ಪತ್ರಕರ್ತರ ರಕ್ಷಿಸುವ ಸಮಯ


ವಿಶ್ವಸಂಸ್ಥೆಯ ಘೋಷಣೆ

ಡಿಸೆಂಬರ್ 23 , ಪತ್ರಕರ್ತರ ರಕ್ಷಿಸುವ ಸಮಯ

ಪತ್ರಕರ್ತರು ಸತ್ಯದ ಪರೀಕ್ಷೆಯಲ್ಲಿ , ಪ್ರಭಾವಿ ರಾಜಕಾರಣಿಗಳು , ಅಧಿಕಾರಿಗಳು , ಉದ್ಯಮಿಗಳು,ಸಮಾಜಘಾತುಕರು ಹೀಗೆ ಸಮಾಜದ ಹಲವಾರು ವ್ಯಕ್ತಿಗಳಿಂದ , ಬೆದರಿಕೆಯನ್ನು ಅನುಭವಿಸುತ್ತಿರುತ್ತಾರೆ.ಈ ವರ್ಷ ವಿಶ್ವದಾದ್ಯಂತ, ನಾಲ್ಕು ಮಹಿಳೆಯರು ಸೇರಿದಂತೆ ,59 ಪತ್ರಕರ್ತರು ಸಾವನ್ನಪ್ಪಿದ್ದಾರೆ.

ಪತ್ರಿಕೋದ್ಯಮ ಪ್ರಜಾಪ್ರಭುತ್ವಕ್ಕೆ ಪ್ರಸ್ತುತವಾದಾಗ , ಪತ್ರಕರ್ತರ ಕೆಲಸ ತುಂಬಾ ಅಪಾಯದಿಂದ ಕೂಡಿರುತ್ತದೆ.ಅವರಿಗೆ‌ ರಕ್ಷಣೆ ನೀಡುವುದು ಅತ್ಯವಶ್ಯಕವಾಗಿದೆ ಎಂದು ಯುನೆಸ್ಕೋ ಮಹಾನಿರ್ದೇಶಕ ಅಡ್ರೆ ಅಜೌಲೆ ತಿಳಿಸಿದ್ದಾರೆ.
ಜಗತ್ತಿನಾದ್ಯಂತ , ಲ್ಯಾಟಿನ್ ಅಮೆರಿಕ  ಮತ್ತು ಕೆರಿಬಿಯನ್ 22 ದಾಖಲಿಸಿದೆ.ಅರಬ್ ನಲ್ಲಿ 9 ಸಾವು , ಆಫ್ರಿಕಾದಲ್ಲಿ ಆರು ಸಾವು ಸಂಭವಿಸಿದೆ.ಏಷ್ಯಾ ಮತ್ತು ಫೆಸಿಫಿಕ್ ಪ್ರದೇಶದಲ್ಲಿ ಹೆಚ್ಚು ಸಾವು ಸಂಭವಿಸಿದೆ.

ಪತ್ರಕರ್ತರನ್ನು ರಕ್ಷಿಸಿ ಅಭಿಯಾನ

ಪತ್ರಕರ್ತರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ , ವಿಶ್ವಸಂಸ್ಥೆಯು ಯುನೆಸ್ಕೋ ಮಹಾನಿರ್ದೇಶಕರ ವರದಿ -2020 ಬಿಡುಗಡೆ ಮಾಡಿದ್ದು , ಪತ್ರಕರ್ತರ ರಕ್ಷಿಸಿ , ಅಭಿಯಾನವನ್ನು ಪ್ರಾರಂಭಿಸಿದೆ.
ಈ ವರದಿಯಲ್ಲಿ ಈ ಎರಡು ವರ್ಷದಲ್ಲಿ ಹತ್ಯೆಯಾದ ಪತ್ರಕರ್ತರ ಹಿನ್ನೆಲೆ ಮತ್ತು ಹತ್ಯೆಯಾದ ಸಂದರ್ಭ ವನ್ನು ಇದರಲ್ಲಿ ದಾಖಲಿಸಲಾಗಿದೆ.

ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು