5600 ಡಾಲರ್ ಟಿಪ್ಸ್


ಕರೋನಾ ಸಂದರ್ಭದಲ್ಲಿ ಅತಿ ದೊಡ್ಡ ಟಿಪ್ಸ್ ಇದಾಗಿತ್ತು ಎಂದು ನೌಕರರ ಹರ್ಷ


5600 ಡಾಲರ್ ಟಿಪ್ಸ್


ಆಮೇರಿಕಾದ ಓಹಿಯೋ ರೆಸ್ಟೋರೆಂಟ್ ನಲ್ಲಿ ಬರೋಬ್ಬರಿ 5600 ಡಾಲರ್ ಟಿಪ್ಸ್ ಅಲ್ಲಿನ ರೆಸ್ಟೋರೆಂಟ್ ಸಿಬ್ಬಂದಿಗೆ ಗ್ರಾಹಕನೊಬ್ಬ ನೀಡಿದ್ದು , ಬಾರಿ ದೊಡ್ಡ ಸುದ್ದಿ ಆಗಿದೆ.ರಾತ್ರಿ ಆಹಾರ ಸೇವಿಸಲು ಬಂದ ಗ್ರಾಹಕ , ಆಹಾರವನ್ನು ಸೇವಿಸಿ ,ಈ ಟಿಪ್ಸ್ ಕೊಟ್ಟಿದ್ದಾರೆ.ಕರೋನಾ ಸಂಕಷ್ಟದ ಸಮಯದಲ್ಲಿ ,ಈ ಟಿಪ್ಸ್ ನೌಕರರಿಗೆ ತುಂಬಾನೇ ಅನುಕೂಲ ಆಗಿದೆ .ಈ ಉತ್ತಮವಾದ ಹೃದಯ ಹೊಂದಿರುವ ಗ್ರಾಹಕನಿಗೆ ಮಾಲೀಕರು ಅಭಿನಂದನೆ ಸಲ್ಲಿಸಿದ್ದಾರೆ.

 ಎಲ್ಲಾ ಪಾಳಿಯ 28 ಸಿಬ್ಬಂದಿಗೆ ತಲಾ 200 ಡಾಲರ್ ದೊರೆತಿದ್ದು , ಅವರು ತುಂಬಾ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.


ಟೊಲೆಡೊದ ಸೂಕ್ ಮೆಡಿಟರೇನಿಯನ್ ಕಿಚನ್ & ಬಾರ್ ಮಾಲೀಕರಾದ ಮೌಸಾ ಸಲೌಕ್ ರವರು , ತಮ್ಮ ಫೇಸ್ ಬುಕ್ ಪೇಜ್ ಪೋಸ್ಟ್ ನಲ್ಲಿ ಔದಾರ್ಯ ತೋರಿದ ಗ್ರಾಹಕನ ಬಗ್ಗೆ ತುಂಬು ಹೃದಯದಿಂದ ಹೊಗಳಿದ್ದಾರೆ.ನೌಕರರ ಹರ್ಷ ಮತ್ತು ಸಂತೋಷವನ್ನು ಪೋಸ್ಟ್ ಮಾಡಿದ್ದಾರೆ.

' ಈ ಕಾರಣಕ್ಕಾಗಿಯೇ ಒಳ್ಳೆಯ ವ್ಯಕ್ತಿಗಳನ್ನು ನಂಬಲು ಸಾಧ್ಯವಾಗುತ್ತಿದೆ ' ಎಂದು ಹೇಳಿಕೊಂಡಿದ್ದಾರೆ 

ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು