ಅಂಟಾರ್ಟಿಕಾ ದಲ್ಲಿ ಕಾಣಿಸಿಕೊಂಡ ಕರೋನಾ - ಸೋಂಕು ಇಲ್ಲದ ಖಂಡವಿಲ್ಲ ಎಂಬ ಕುಖ್ಯಾತಿ

ಅಂಟಾರ್ಟಿಕಾ ದಲ್ಲಿ ಕಾಣಿಸಿಕೊಂಡ ಕರೋನಾ - ಸೋಂಕು ಇಲ್ಲದ ಖಂಡವಿಲ್ಲ ಎಂಬ ಕುಖ್ಯಾತಿ


ಕರೋನಾ ಈಗ ವಿಶ್ವವ್ಯಾಪಿ


ಚೀನಾ ದೇಶದಿಂದ ವಿಶ್ವಾದ್ಯಂತ ಹಲವಾರು ದೇಶಗಳಿಗೆ ,ಹಬ್ಬುತ್ತಾ, ಹಲವಾರು ಜನರ ಬಲಿ ಪಡೆದು , ಹಲವಾರು ಜನರ ಉದ್ಯೋಗ ಕಸಿದುಕೊಂಡು , ಹಲವಾರು ಆರ್ಥಿಕ ಮತ್ತು ಸಾಮಾಜಿಕ ಸಂಕಷ್ಟಗಳಿಗೆ ಕಾರಣವಾಗಿದ್ದ, ಕರೋನಾ ಎಂಬ ಮಹಾಮಾರಿ, ಇಷ್ಟು ದಿನ ಅಂಟಾರ್ಟಿಕಾ ಒಳಗೆ ಕಾಲಿಟ್ಟಿರಲಿಲ್ಲ.ಆದರೆ ಕೊನೆಗೂ ತನ್ನ ರಾಕ್ಷಸತ್ವ ಮೆರೆದಿರುವ ,ಕರೋನಾ ಕೊನೆಗೂ ವಿಶ್ವವ್ಯಾಪಿ ಆಗಿದೆ.

36 ಜನರಿಗೆ ಪಾಸಿಟಿವ್


ಜನರಲ್ ಬರ್ನಾಡೋ ಒ ' ಹಿಗ್ಗಿನ್ಸ್ ' ರಿಕೆಲ್ಮ್ ಅಂಟಾರ್ಟಿಕಾ ನೆಲೆಯಲ್ಲಿ ಪರೀಕ್ಷೆ ಮಾಡಿದ್ದು , ಅದರಲ್ಲಿ 36 ಜನರಿಗೆ ಪಾಸಿಟಿವ್ ಬಂದಿದೆ ಎಂದು ಚಿಲಿಯ ಸೈನ್ಯವು ಸೋಮವಾರ ಘೋಷಿಸಿತು.ಇದರಲ್ಲಿ ಮಿಲಟರಿಯ  26 ಸದಸ್ಯರು , ನಿರ್ವಹಣೆ ಗುತ್ತಿಗೆ ಕಂಪನಿಯ 10 ನಾಗರೀಕ ನೌಕರರು ಸೇರಿದ್ದಾರೆ ಎಂದು ಸೇನೆಯು ಹೇಳಿದೆ.

ಮಂಗಳವಾರ ಚಿಲಿಯ ಬಯೋಬಿಯೋ ಪ್ರದೇಶದ ಆರೋಗ್ಯ ಸಚಿವರು ,ಚಿಲಿಯ ನೌಕಾಪಡೆಯ ಸಾರ್ಜೆಂಟ್ ಅಲ್ಡಿಯಾ ಪೂರೈಕೆ ಹಡಗಿನಲ್ಲಿ , ಜನರನ್ನು ಒಳಗೊಂಡಂತೆ 21 ಸೋಂಕುಗಳಿವೆ ಎಂದು ಹೇಳಿದರು.


ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು