ಮೋದಿಜಿಗೆ ದೊರೆಯಿತು 'ದಿ ಲೆಜಿಯನ್ ಆಫ್ ಮೆರಿಟ್ 'ಗೌರವ


 ಅಮೇರಿಕಾ ನೀಡುವ ಪ್ರತಿಷ್ಠಿತ ಪ್ರಶಸ್ತಿ...


ಮೋದಿಜಿಗೆ ದೊರೆಯಿತು 'ದಿ ಲೆಜಿಯನ್ ಆಫ್ ಮೆರಿಟ್ 'ಗೌರವ


ಆಮೇರಿಕಾದ ಪ್ರತಿಷ್ಠಿತ ಪ್ರಶಸ್ತಿ ಈ ವರ್ಷ ಭಾರತದ ಪ್ರಧಾನಿ ಮೋದಿಯವರಿಗೆ ನೀಡಲಾಗಿದೆ.ಡೊನಾಲ್ಡ್ ಟ್ರಂಪ್ ಸರ್ಕಾರ ಜಾಗತಿಕ ಮಟ್ಟದಲ್ಲಿ ಭಾರತ ಜಾಗತಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವುದರಿಂದ ಮತ್ತು ಉಭಯ ದೇಶಗಳ ನಡುವಿನ ಸ್ನೇಹ ಮತ್ತು ಸಂಬಂಧದ ವೃದ್ಧಿಗಾಗಿ ಈ ಗೌರವ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಲಾಗಿದೆ. ಈ ಪ್ರಶಸ್ತಿಯನ್ನು ಅಮೇರಿಕಾದ ಭಾರತದ ರಾಯಭಾರಿ 'ತಾರಂಜಿತ್ ಸಿಂಗ್ ಸಂಧು ' ಅವರು ಪ್ರಧಾನಿ ಪರವಾಗಿ , ಅಮೇರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರ'ರಾಬರ್ಟ್ ರವರಿಂದ ಸ್ವೀಕರಿಸಿದರು.



ಲೆಜಿಯನ್ ಆಫ್ ಮೆರಿಟ್ 

ಅಮೇರಿಕಾ ಸರ್ಕಾರ ಸಶಸ್ತ್ರ ಪಡೆಗಳ  ಸದಸ್ಯರುಗಳಿಗೆ ಮತ್ತು ವಿದೇಶಿ ರಾಷ್ಟ್ರಗಳ ಮಿಲಿಟರಿ ಮತ್ತು ರಾಜಕೀಯ ವ್ಯಕ್ತಿಗಳಿಗೆ , ಲೀಜನ್ ಆಫ್ ಮೆರಿಟ್ ನೀಡಲಾಗುತ್ತದೆ.
ಇದರ ಮೊದಲ ಪ್ರಶಸ್ತಿಯನ್ನು 1942 ರಲ್ಲಿ ನೀಡಲಾಯಿತು.

ಭಾರತಕ್ಕೆ ದಿ ಲೆಜಿಯನ್ ಆಫ್ ಮೆರಿಟ್

ಮೊಟ್ಟ ಮೊದಲ ಬಾರಿಗೆ 1950 ರಲ್ಲಿ ಭಾರತೀಯ ಆರ್ಮಿ ಗೆ ಈ ಗೌರವ ಸಿಕ್ಕಿತು.ಅದರಲ್ಲೂ ನಮ್ಮ ಕರ್ನಾಟಕದ ವೀರ ಪುತ್ರ ಫೀಲ್ಡ್ ಮಾರ್ಷಲ್ ಕೆ.ಎಂ‌.ಕಾರ್ಯಪ್ಪರವರಿಗೆ ಅಮೇರಿಕಾದ ಈ ಪ್ರತಿಷ್ಠಿತ ಪ್ರಶಸ್ತಿ ದೊರೆಯಿತು.ನಂತರ ಭಾರತೀಯ ಆರ್ಮಿಯ  ಜನರಲ್ ಸತ್ಯವಂತ್ ಮಲ್ಲಣ್ಣ ಶ್ರೀ ನಾಗೇಶ್ ರವರಿಗೆ ದೊರೆಯಿತು.ಇದಾದ ಸುಮಾರು ವರ್ಷಗಳ ನಂತರ ಜಾಗತಿಕ ನಾಯಕತ್ವದ ಸಾಧನೆಗಾಗಿ ಮೋದಿಯವರಿಗೆ ಈ ಪ್ರಶಸ್ತಿ ಸಿಕ್ಕಿದೆ.

ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು