ಬಂಗಾಳದಲ್ಲಿ ಬೆಂಕಿ


ಬಂಗಾಳದಲ್ಲಿ ಬಿರುಗಾಳಿ ಬಿರಿಸು


ದೀದಿ ಎಂದೇ ಹೆಸರಾಗಿರುವ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ 'ಏಪ್ರಿಲ್ ಮೇ' ತನ್ನ ಆಡಳಿತದ ಸತ್ವ ಪರೀಕ್ಷೆ ಪ್ರಾರಂಭ ಆಗಲಿದೆ.ಈ ವಿಧಾನಸಭೆ ಚುನಾವಣೆ ಅರ್ಥಾತ್ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನ ಬಾರಿ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ.ಕಾಂಗ್ರೆಸ್ ಮತ್ತು ಎಡಪಕ್ಷಗಳು ಈ ಇಬ್ಬರ ಮಧ್ಯೆ ನಡೆಯುತ್ತಿರುವ ಸ್ವರ್ಧೆಗೆ ಮೂಕ ಪ್ರೇಕ್ಷಕ ಆಗಿದ್ದಾರೆ.

ಸಂಘರ್ಷ ತಾರಕಕ್ಕೆ


ಬಂಗಾಳದಲ್ಲಿ ಹಿಂಸಾಚಾರ ತುಂಬಾ ಅಪಾಯಕಾರಿ ಹಂತಕ್ಕೆ ತಲುಪಿದೆ.ಕಳೆದ ಲೋಕಸಭೆ ಚುನಾವಣೆಯಲ್ಲಿ ,42 ಲೋಕಸಭೆ ಸ್ಥಾನಗಳ ಪೈಕಿ , ಬಿಜೆಪಿ 18 ಲೋಕಸಭಾ ಕ್ಷೇತ್ರಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದಂತೆ,ಆನಂತರ ನಡೆದ ರಾಜಕೀಯ ವಿದ್ಯಮಾನಗಳಲ್ಲಿ , ಇಲ್ಲಿಯ ತನಕ ಜಾಸ್ತಿ ಹಿಂಸಾಚಾರಕ್ಕೆ ಬಲಿಯಾಗಿದ್ದು , ನೂರಾರು ಕಾರ್ಯಕರ್ತರು ಗಾಯಗೊಂಡಿದ್ದು , ಸುಮಾರು 50 ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ನಂಬಲರ್ಹ ವರದಿಯ ಮೂಲಗಳು ತಿಳಿಸಿವೆ.ಹತಾಶೆಯಿಂದ ,ಅತಿ  ಹೆಚ್ಚು ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಇದೊಂದೇ ದೀದಿ ಆಡಳಿತದ ಸಾಧನೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಕಲ್ಲುತೂರಾಟ


ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ವಾಹನ ಮತ್ತು ಬೆಂಗಾವಲಿನ ಪಡೆಯ ಮೇಲೆ ಇತ್ತೀಚೆಗೆ ನಡೆದ ಕಲ್ಲುತೂರಾಟ ಅತ್ಯಂತ ದುರದೃಷ್ಟಕರ ಮತ್ತು ಅಪಾಯಕಾರಿ .
ಅದೃಷ್ಟವಶಾತ್ , ಅಂತಹಾ ಅಪಾಯವಾಗಿಲ್ಲ ನಡ್ಡಾರವರು , ಯಾವುದೇ ಅಪಾಯವಿಲ್ಲದೆ ಪಾರಾಗಿದ್ದರೆ , ಮುಖಂಡರಿಗೆ ಅಲ್ಪಸ್ವಲ್ಪ  ಗಾಯಗಳಾಗಿವೆ." ಡಿಸೆಂಬರ್ 10 ರಂದು ನಡೆದ ಘಟನೆಗೆ , ಇದಕ್ಕೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ ,ಇದು ಆ ಪಕ್ಷದಲ್ಲಿನ , ಆಂತರಿಕ ಭಿನ್ನಾಭಿಪ್ರಾಯ ಗಳಿಂದ ಸೃಷ್ಟಿಯಾದ ಘಟನೆಯಾಗಿದೆ "ಎಂದು ದೀದಿ ಹೇಳಿದ್ದಾರೆ.ಆದರೆ ಸರ್ಕಾರ ಅವರದೇ ಇರುವುದರಿಂದ , ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ,ಜನರ ಮುಂದಿಡುವ ಜವಾಬ್ದಾರಿ ಅವರ ಮೇಲಿದೆ.


ಪ್ರಜಾಪ್ರಭುತ್ವದ ಕಪ್ಪು ಚುಕ್ಕೆ


ಹಿಂಸೆಯ ಮೂಲಕ ರಾಜಕಾರಣ ಯಾವುದೇ ಪಕ್ಷಗಳಿಗೆ ಕ್ಷೋಭೆ ತರುವುದಿಲ್ಲ.ಅಭಿವೃದ್ಧಿಯ ವಿಷಯವಷ್ಟೇ ಮುಖ್ಯವಾದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ.ಇದು ಇಂದಿನ ರಾಜಕಾರಣಿಗಳಿಗೆ ಅರ್ಥ ಮಾಡಿಸುವ ಪ್ರಜಾಪ್ರಭುತ್ವದ ಬಹುತೇಕ ಮಾಲೀಕರು ಚುನಾವಣೆಯ ಸಮಯದಲ್ಲಿ ಧೀರ್ಘ ನಿದ್ದೆ ,ಅಮಿಷ, ಸ್ವಜಾತಿ ಪ್ರೇಮ ಇವುಗಳಿಂದ ಬಂಧಿತನಾಗಿ, ಎಲ್ಲಾ ಘಟನೆಗಳಿಗೆ ಪರೋಕ್ಷವಾಗಿ ತಾನೇ ಕಾರಣನಾಗುತ್ತಾನೆ.

ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು