ಈ ಫ್ಯಾಮಿಲಿಗೆ ಫಿಂಗರ್ ಪ್ರಿಂಟ್ಸ್ ಇಲ್ಲ


ಫಿಂಗರ್ ಪ್ರಿಂಟ್ಸ್ ಇಲ್ಲದ ಕುಟುಂಬ

ಆಧುನಿಕ ತಂತ್ರಜ್ಞಾನದಲ್ಲಿ ಬೆರಳಚ್ಚು ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿದೆ.ಸರ್ಕಾರದಿಂದ ಪಡೆಯುವ ಎಲ್ಲಾ ಸವಲತ್ತುಗಳಿಗೆ ಮತ್ತು ಪಾಸ್ ಪೋರ್ಟ್ ಗಳಿಗೆ ಬೆರಳಚ್ಚು ಬೇಕೇ ಬೇಕು.ಆದರೆ ಬಾಂಗ್ಲಾ ದೇಶದ ಈ ಕುಟುಂಬಕ್ಕೆ ಬೆರಳಚ್ಚಿನ ಸಮಸ್ಯೆ ಉದ್ಭವಿಸಿದೆ .

ಕುಟುಂಬದವರ ಹಿನ್ನೆಲೆ 

ವಂಶಪಾರಂಪರ್ಯವಾಗಿ ಈ ಬೆರಳಚ್ಚು ಇಲ್ಲ .ಅವರ ಹಿರಿಯರಿಗೆ ಇದು ಸಮಸ್ಯೆ ಆಗಿರಲಿಲ್ಲ.
ಆದರೆ ಈಗ ಆಧುನಿಕತೆಯಲ್ಲಿ ಯಾವುದೇ ಸೌಲಭ್ಯ ಪಡೆಯಲು , ಬೆರಳಚ್ಚು ದಾಖಲೆಯು ಮುಖ್ಯವಾದುದರಿಂದ ,ಈ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ.ಬೆರಳಚ್ಚಿನ ಸಮಸ್ಯೆ ಎದುರಿಸದೇ , ನೆಮ್ಮದಿಯಿಂದ ಜೀವನ ಕಳೆದ ,ಆ ಮನೆಯ ಹಿರಿಯ ಅಮಲ್ ಸರ್ಕರ್ ತಮ್ಮ ಮಕ್ಕಳು ಅನುಭವಿಸೋ ಕಷ್ಟಗಳನ್ನು ನೆನೆದು ,ವಿಷಾದ ವ್ಯಕ್ತಪಡಿಸಿದರು.

ಏನೇನು ಸಮಸ್ಯೆ ಆಗಿದೆ ?

ಬಾಂಗ್ಲಾದೇಶದಲ್ಲಿ ಹೊಸ ಸಿಮ್ ಖರೀದಿಸಲು ,ಚಾಲನಾ ಪರವಾನಗಿ ಪಡೆಯಲು ಮತ್ತು ಪಾಸ್ಪೋರ್ಟ್ ಪಡೆಯಲು ಸಾಧ್ಯವಾಗಿಲ್ಲ.
" ಚಾಲನೆಯ ಸಮಯದಲ್ಲಿ ಪೋಲೀಸರು ಚಾಲನಾ ಪರವಾನಗಿ ಕೇಳಿದಾಗ ವಿಷಯ ತಿಳಿಸಿದರೂ , ಅವರು ದಂಡ ಹಾಕುತ್ತಾರೆ.ಹೀಗೆ ಎಲ್ಲರಿಗೂ ವಿಷಯ ತಿಳಿಸಿ , ತಿಳಿಸಿ ಸಾಕಾಗಿದೆ . ನ್ಯಾಯಾಲಯಕ್ಕೆ ಹೋಗುವಂತೆ ಕೆಲವರು ಸಲಹೆ ನೀಡಿದ್ದಾರೆ.ಎಲ್ಲಾ ಪ್ರಯತ್ನಗಳು ವಿಫಲವಾದರೆ ,ನಾನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುತ್ತೇನೆ ಎಂದು ಆ ಮನೆಯ ಸದಸ್ಯರು ಅಳಲು ತೋಡಿಕೊಂಡರು.

ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು