ಕರೋನಾ ಕೊನೆಯ ವೈರಸ್ ಅಲ್ಲ


ಬರಲಿದೆ ಕರೋನಾ ವೈರಸ್ ತರಹ ಮತ್ತಷ್ಟು ವೈರಸ್ ಗಳು - ವಿಶ್ವ ಆರೋಗ್ಯ ಸಂಸ್ಥೆ 


ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೂಸ್ ಈ ಅಭಿಪ್ರಾಯ ವ್ಯಕ್ತಪಡಿಸಿದರು ‌.ಹವಾಮಾನ ಬದಲಾವಣೆ , ಪ್ರಾಣಿಗಳ ಸುರಕ್ಷತೆಯಲ್ಲಿನ ನಿರ್ಲಕ್ಷ್ಯ , ಇವುಗಳಿಂದ ತಿಳಿದು ಬರುವುದೇನೆಂದರೆ , ಕರೋನಾ ಕೊನೆಯ ಸಾಂಕ್ರಾಮಿಕ ರೋಗವಲ್ಲ ಎಂದು ತಿಳಿಸಿದರು.

ಕೋವಿಡ್ - 19 ಸಾಂಕ್ರಾಮಿಕದಿಂದ ಪಾಠಗಳನ್ನು ಕಲಿಯುವ ಸಮಯ ಬಂದಿದೆ 
ನಾವು ಬಹಳ ವರ್ಷಗಳಿಂದ , ಆರೋಗ್ಯ ಸಿದ್ದತೆ ಮಾಡಿಕೊಳ್ಳುವುದಿಲ್ಲ.ಬಹಳ ನಿರ್ಲಕ್ಷ್ಯದ ಧೋರಣೆಯಿಂದ ,ಈ ಸಮಸ್ಯೆ ಬಂದಿದೆ.
ನಮ್ಮಲ್ಲಿ ದೂರದೃಷ್ಟಿ ಕೊರತೆ ಇದೆ.ನಮ್ಮಲ್ಲಿರುವ ಹಣದಿಂದ ಕೇವಲ ಈಗಿನ ಸಮಸ್ಯೆಗಳಿಗೆ ಅಷ್ಟೇ ಪ್ರಾಮುಖ್ಯತೆ ನೀಡುತ್ತೇವೆ ಹೊರತು , ಮುಂದೆ ಬರಬಹುದಾದ ಯಾವುದೇ ಸಮಸ್ಯೆಗಳಿಗೆ ತಯಾರಿ ನಡೆಸುವುದಿಲ್ಲ.

ಮಾನವನು ಮತ್ತು ಪ್ರಾಣಿಗಳ ನಡುವಿನ ,ಸಂಪರ್ಕ ಸಾಧನವನ್ನು ಪರಿಹರಿಸದ ಹೊರತು,ಮಾನವನ ಆರೋಗ್ಯವನ್ನು ಸುಧಾರಿಸುವ ಯಾವುದೇ ಪ್ರಯತ್ನಗಳು ‌ಯಶಸ್ವಿಯಾಗುವುದಿಲ್ಲ.
ಹವಾಮಾನ ಬದಲಾವಣೆ ಮತ್ತು ಮಾಲಿನ್ಯ ಸಮಸ್ಯೆ ಕೂಡ ಭೂಮಿಯನ್ನು ಕಲುಷಿತ ಗೊಳಿಸಲಿದೆ.ಭೂಮಿಯನ್ನು ಕಡಿಮೆ ವಾಸಯೋಗ್ಯವಾಗಿಸುತ್ತದೆ.

ಯಾರು ಈ ಟೆಡ್ರೂಸ್


ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರಾಗಿರುವ ಟೆಡ್ರೂಸ್ ಚೀನಾ ಪರವಾಗಿರುವ ಅಧ್ಯಕ್ಷ , ಇವತ್ತು ಕರೋನಾ ವಿಶ್ವವ್ಯಾಪಿಯಾಗಿ ಹಬ್ಬಲು ಚೀನಾ ಕಾರಣ ಎಂದಾಗ ,ಚೀನಾ ಪರ ವಹಿಸಿಕೊಂಡು , ಪ್ರತಿಯೊಂದು ವಿಷಯದಲ್ಲೂ , ಪಕ್ಷಪಾತ ತೋರಿದ್ದಾರೆ ಎಂದು  ಅಮೇರಿಕಾ ಅಧ್ಯಕ್ಷ ಟ್ರಂಪ್ ಆರೋಪಿಸಿದ್ದರು.ಇದೇ ಕಾರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ಧ ಕಿಡಿಕಾರಿದರು.ಅನುದಾನ ನೀಡುವುದು ನಾವು , ಪ್ರೀತಿ ತೋರುವುದು ಚೀನಾ ಮೇಲೆ ಎಂದು ಕಿರಿಕಾರಿದ್ದನ್ನು ಇಲ್ಲಿ ಸ್ಮರಿಸಬಹುದು.

ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು