ಸಂಕ್ರಾಂತಿಯ ಚಮತ್ಕಾರ

ಸಂಕ್ರಾಂತಿ ಸೂರ್ಯನ ಹಬ್ಬ


ಕರ್ನಾಟಕ , ಆಂಧ್ರ , ಮಹಾರಾಷ್ಟ್ರದಲ್ಲಿ ಚಾಂದ್ರಮಾನ ಯುಗಾದಿ ಆಚರಿಸುತ್ತೇವೆ .ಅದರ ಪ್ರಕಾರ ಹೊಸ ವರ್ಷ ಯುಗಾದಿ.. ತಮಿಳುನಾಡು ಮತ್ತು ಕೇರಳದ ಕಡೆ ಸೌರಮಾನದ ಯುಗಾದಿ ಆಚರಿಸುತ್ತೇವೆ.ಆದರೆ ಹಿಂದುಗಳೆಲ್ಲರೂ ಆಚರಿಸುವ ಸೌರಮಾನದ ಹಬ್ಬ ಎಂದರೆ ಅದು ಸಂಕ್ರಾಂತಿ . ಇದು ಸೂರ್ಯನ ಹಬ್ಬ

ಸಂಕ್ರಾಂತಿಯ ಚಮತ್ಕಾರ



ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಅಂದು ,ಸೂರ್ಯನ ಕಿರಣಗಳು ಲಿಂಗವನ್ನು ಸ್ಪರ್ಶಿಸಿ ,ಹೋಗುವ ವಿಸ್ಮಯಕಾರಿ ಗುಹಾಂತರ ದೇವಾಲಯದ ಬಗ್ಗೆ ಕೇಳಿದ್ದೀರಾ... ಸೂರ್ಯ ಉತ್ತರಾಯಣ ಪುಣ್ಯಕಾಲಕ್ಕೆ ಪ್ರವೇಶ ಮಾಡಿದಾಗ ,ಈ ಚಮತ್ಕಾರ ನಡೆಯುತ್ತದೆ.ಭಾರತೀಯರ ಜ್ಞಾನ ಮತ್ತು ವಿಜ್ಞಾನದ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ಇನ್ನೂ ಹಲವು ದೇವಾಸ್ಥಾನಗಳಿವೆ ,ಬನ್ನಿ ನೋಡೋಣ 


ಆಂಧ್ರಪ್ರದೇಶದ ವೇದನಾರಾಯಣ ದೇವಾಲಯ


ಈ ದೇವಾಲಯವನ್ನು ಖಗೋಳಶಾಸ್ತ್ರದ ಅದ್ಭುತ ಎಂದು ಪರಿಗಣಿಸಲಾಗಿದೆ.ಹಬ್ಬದ ಸಮಯದಲ್ಲಿ ,ಮೂರು ದಿನಗಳು ಸೂರ್ಯನ ರಶ್ಮಿ ಗಳು ನೇರವಾಗಿ ದೇವಾಸ್ಥಾನವನ್ನು ಪ್ರವೇಶಿಸುತ್ತದೆ.
ಮೊದಲನೇ ದಿನ - ಸಾಯಂಕಾಲ ಗೋಪುರದಿಂದ ಗರ್ಭಗೃಹಕ್ಕೆ ಪ್ರವೇಶಿಸುತ್ತದೆ ಮತ್ತು ಅಲ್ಲೇ ನಿಲ್ಲುತ್ತದೆ.
ಎರಡನೆಯ ದಿನ : ಪಾದದಿಂದ ದೇವರ ನಾಭಿಯ ವರೆಗೆ ಪ್ರಯಾಣ ಮಾಡಿ ,ಅಲ್ಲೇ ನಿಲ್ಲುತ್ತದೆ
ಮೂರನೇಯ ದಿನ : ನಾಭಿಯಿಂದ , ಕಿರೀಟದ ವರೆಗೆ ಪ್ರಯಾಣ ಮಾಡುತ್ತದೆ.

ಕೊಲ್ಲಾಪುರದ ಲಕ್ಷ್ಮಿ ದೇವಾಲಯ


ಮಹಾರಾಷ್ಟ್ರದಲ್ಲಿ ಕರ್ನಾಟಕದ ರಾಜ ಮನೆತನ ಚಾಲುಕ್ಯರು ಕಟ್ಟಿದ , ಲಕ್ಷ್ಮೀ ದೇವಾಲಯ ಕೂಡ ಅದ್ಭುತ ಗಣಿತದ ಕೊಡುಗೆ ಎನ್ನಬಹುದು.
ಈ ದೇವಾಲಯದಲ್ಲಿ ಸೂರ್ಯ ಕಿರಣಗಳು ವರ್ಷಕ್ಕೆ 2 ಬಾರಿ ದೇವರನ್ನು ಸ್ಪರ್ಶಿಸಿ ಹೋಗುತ್ತದೆ.
ಮೊದಲನೇ ಬಾರಿಗೆ ಶ್ರವಣ ನಕ್ಷತ್ರ ಮಕರ ಸಂಕ್ರಾಂತಿಯ ದಿನ , ಎರಡನೆ ಬಾರಿ ನವೆಂಬರ್ ನಲ್ಲಿ ತುಲಾ ರಾಶಿ ವಿಶಾಖ ನಕ್ಷತ್ರದ ದಿವಸ...ಮೂರು ದಿನಗಳಲ್ಲಿ ಮೊದಲ ದಿನ ಪಾದಗಳು , ಎರಡನೆಯ ದಿನ ನಾಭಿ,ಮೂರನೇ ದಿನ ಕಿರೀಟ ಸ್ಪರ್ಶಿಸಿ , ಕಿರಣಗಳು ಹೋಗುತ್ತದೆ.

ಅರಿಸೇವೆಲ್ಲಿ ಸೂರ್ಯ ನಾರಾಯಣ ದೇವಾಲಯ


ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿರುವ ದೇವಾಲಯ
ಕಳಿಂಗ ಆಡಳಿತದ ದೇವೇಂದ್ರ ವರ್ಮ ಕಟ್ಟಿಸಿದ ಅದ್ಭುತ ವಿಜ್ಞಾನ ಮತ್ತು ಜ್ಞಾನದ ಕೊಡುಗೆ.
 ಮಾರ್ಚ್ ತಿಂಗಳ ಉತ್ತರಾಯಣದಲ್ಲಿ ಮತ್ತು ಅಕ್ಟೋಬರ್ ತಿಂಗಳ ದಕ್ಷಿಣಾಯಣದಲ್ಲಿ ಸೂರ್ಯ ರಶ್ಮಿ ಗಳು ದೇವರ ಪಾದದಿಂದ ಶಿರದವರೆಗೆ ಸ್ವರ್ಶಿಸುತ್ತದೆ.
ಇನ್ನೂ ಹಲವಾರು ದೇವಾಲಯಗಳು ,ಭಾರತದ ಅದ್ಭುತ  ಶಿಲ್ಪಕಲೆಗಳ ತೊಟ್ಟಿಲು ಆಗಿದೆ.ಭಾರತೀಯರ ಕಲೆ , ಸಾಹಿತ್ಯ , ವಾಸ್ತುಶಿಲ್ಪ ಎಲ್ಲವೂ ಅದ್ಭುತ ಜ್ಞಾನ, ವಿಜ್ಞಾನಗಳ ಸಮ್ಮಿಲನ

ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು