ಮರೆಯಲಾಗದ ನೆನಪು - ಕುವೆಂಪು


ಕುವೆಂಪು ಮರೆಯಲಾಗದ ನೆನಪು


ದೇಶ ಕಂಡ ಮಹಾನ್ ಸಾಹಿತಿ ನಮ್ಮ ಪುಟ್ಟಪ್ಪ . ಇಂದು ಅವರ ಜನ್ಮದಿನ . ನಮ್ಮ ರಾಜ್ಯಗೀತೆ 'ಭಾರತ ಜನನಿಯ ತನುಜಾತೆ ,ಜಯಯೇ ಕರ್ನಾಟಕ ಮಾತೆ 'ಎಂದು ಇಡೀ ವಿಶ್ವಕ್ಕೆ ಸಾರಿದ ಮಹಾನ್ ಲೇಖಕನ ಹುಟ್ಟು ಹಬ್ಬ

ಕುವೆಂಪು ಜನನ


ಕುವೆಂಪು 1904 ಡಿಸೆಂಬರ್ 29 ರಂದು ಹಿರೇಕೂಡಿಕೆ,ಕೊಪ್ಪ ತಾಲ್ಲೂಕು , ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಿಸಿದರು.

ವೃತ್ತಿ 


ಕುವೆಂಪುರವರು , ಪ್ರಾಧ್ಯಾಪಕ, ಪ್ರಾಂಶುಪಾಲ, ಕುಲಪತಿಯಾಗಿ ಸೇವೆ ಸಲ್ಲಿಸಿದ್ದಾರೆ.ಕವಿಯಾಗಿ ಮತ್ತು  ಲೇಖಕರಾಗಿ ಜಗತ್ ಪ್ರಸಿದ್ಧಿ ಆಗಿದ್ದಾರೆ.


ಸಾಹಿತ್ಯ ಕೃಷಿ


ಇವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯ , ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ ಕುವೆಂಪು ಅವರ ಸಾಮರ್ಥ್ಯವನ್ನು ಮತ್ತು ಅವರ ಸಾಹಿತ್ಯ ಕೃಷಿಯನ್ನು ವಿಶ್ವಕ್ಕೆ ತೋರಿಸುತ್ತದೆ.
ಚಿತ್ರಾಂಗದಾ , ಕೊಳಲು , ಪಾಂಚಜನ್ಯ , ನವಿಲು ,ಕಲಾ ಸುಂದರಿ , ಪ್ರೇಮ ಕಾಶ್ಮೀರ , ಅಗ್ನಿ ಹಂಸ , ಮಂತ್ರಾಕ್ಷತೆ ಹೀಗೆ ಹಲವಾರು ಕವನ ಸಂಕಲನಗಳು , ಕಥೆಗಳನ್ನು ಬರೆದಿದ್ದಾರೆ


ಸಾಂಸಾರಿಕ ಜೀವನ


ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪನವರು , ಹೇಮಾವತಿ ಎನ್ನುವರನ್ನು ವಿವಾಹ ಆದರು.ಇವರ ಮಗ ಪೂರ್ಣ ಚಂದ್ರ ತೇಜಸ್ವಿ ಮಹಾನ್ ಲೇಖಕರಾಗಿದ್ದರು.


ಮರೆಯಲಾಗದ ನೆನಪು , ಕುವೆಂಪು
ಮಲೆನಾಡಿನ ಕಂಪು,ಕೋಗಿಲೆಗಳ ಇಂಪು
ಮಹಾನ್ ಕವಿಯ ಸಾವಿಲ್ಲದ ಸಾಹಿತ್ಯಕ್ಕೆ ಹುಟ್ಟು ಹಬ್ಬದ ಶುಭಾಶಯಗಳು



ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು