ಕರೋನಾ ವರದಿ ಮಾಡಿದ ಪತ್ರಕರ್ತರಿಗೆ ಏನಾಯ್ತು ?

ಕರೋನಾ ವರದಿ ಮಾಡಿದ ಪತ್ರಕರ್ತರಿಗೆ ಏನಾಯ್ತು ? 

ಚೀನಾ ಕಮ್ಯೂನಿಸ್ಟ್ ರಾಷ್ಟ್ರ.. ಇಲ್ಲಿ ಪತ್ರಿಕಾ ಸ್ವಾತಂತ್ರ್ಯ ದ ಮೇಲೆ ಸರ್ಕಾರದ ಹಿಡಿತ ಇರುತ್ತದೆ.ಕರೋನಾ ಮಹಾಮಾರಿ ಪ್ರಾರಂಭ ಆದಾಗ , ಕೆಲವು ಪತ್ರಕರ್ತರು ನಿರ್ಭೀತಿಯಿಂದ ,ಕರೋನಾ ಬಗ್ಗೆ ವರದಿ ಮಾಡಿದಾಗ ,ಚೀನಾ ಸಹಿಸೋಕೆ ಸಾಧ್ಯ ಆಗಲಿಲ್ಲ . ಅವರಿಗೆ ಹಿಂಸೆ ನೀಡಿತು ಎಂದು ದೊಡ್ಡಣ್ಣ ಅಮೆರಿಕಾದ ಆರೋಪ..ಅದೇ ರೀತಿಯಲ್ಲಿ ಚೀನಾ ನಡೆದುಕೊಳ್ಳುತ್ತಿದೆ ಎಂದು ವಿಶ್ವ ಸಮುದಾಯದ ಅನುಮಾನ.

ಏನಾಗಿತ್ತು ?

ಕರೋನಾ ಪ್ರಾರಂಭದ ದಿನಗಳಲ್ಲಿ ಕೋವಿಡ್ ನಿರ್ವಹಣೆಯ ಬಗ್ಗೆ ವರದಿ ಮಾಡಿದ್ದಕ್ಕಾಗಿ ಮತ್ತು ಅಧಿಕಾರಿಗಳ ನ್ಯೂನತೆ , ಅಂಕಿ ಅಂಶಗಳು ,ಭಯಾನಕ ಪರಿಸ್ಥಿತಿ ಇವೆಲ್ಲವನ್ನೂ ಜಗತ್ತಿಗೆ ಪತ್ರಕರ್ತರು ತಿಳಿಸಿದಾಗ ,ಕಳೆದ ತಿಂಗಳು ಆ ಪತ್ರಕರ್ತೆಯ ಮೇಲೆ ಸುಳ್ಳು ಪ್ರಸಾರ ಆರೋಪ ಹೊರಿಸಲಾಯಿತು.ಈ ವಿಚಾರಣೆ ಸಮಯದಲ್ಲಿ ವಿದೇಶಿ ವೀಕ್ಷಕರಿಗೆ ,ಚೀನಾ ಪ್ರವೇಶ ನಿರ್ಬಂಧ ಕ್ರಮವನ್ನು ಆಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ ಖಂಡಿಸಿದರು.ನಾಗರೀಕ ಪತ್ರಕರ್ತೆ ಜಾಂಗ್ ಅವರಿಗೆ ,ಚೀನಾದ ನ್ಯಾಯಾಲಯ ‌4 ವರ್ಷದ ಶಿಕ್ಷೆ ವಿಧಿಸಿದೆ.ಸುಮಾರು 40ಕ್ಕಿಂತಲೂ ಹೆಚ್ಚು ಪತ್ರಕರ್ತರನ್ನು ಜೈಲಿಗೆ ಕಳುಹಿಸಿದೆ ಎನ್ನಲಾಗುತ್ತಿದೆ.


ಪೊಂಪಿಯೋ ಆರೋಪಗಳು ಏನು ?

ಕಮ್ಯೂನಿಸ್ಟ್ ರಾಷ್ಟ್ರ ಪತ್ರಕರ್ತರಿಗೆ ಸ್ವಾಂತಂತ್ರ್ಯ ದಮನ ಮಾಡುತ್ತಿದೆ.ಸೆನ್ಸಾರ್ ಇಲ್ಲದ ಪತ್ರಿಕಾ ಸ್ವಾತಂತ್ರ್ಯವನ್ನು ಸಾಯಿಸುತ್ತಿದೆ.ಇದರಿಂದ ನಿಜ ಸ್ಥಿತಿ ಜಗತ್ತಿಗೆ ತಿಳಿಯುತ್ತಿಲ್ಲ. ಈ ಜೈಲು ಶಿಕ್ಷೆಯ ಮೂಲಕ , ತನ್ನ ಅಧಿಕೃತ ಮಾರ್ಗವನ್ನು ಪ್ರಶ್ನಿಸುವವರಿಗೆ ಇದೇ ಗತಿ ಎಂದು ತೋರಿಸಿದೆ.ಚೀನಾ ನಾಗರೀಕರ ಮುಕ್ತ ಮತ್ತು ಶಾಂತಿಯುತ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅಮೇರಿಕಾ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.

ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು