ಚೀನಾಗೆ ಪುಟಿನ್ ತಣ್ಣೀರು

ಚೀನಾ ಆಸೆಗೆ ತಣ್ಣೀರು ಎರಚಿದ ಪುಟಿನ್


ಚೀನಾ ಕರೋನಾ ವೈರಸ್ ಮತ್ತು ಗಡಿ ವಿವಾದದ ಮೂಲಕ ಹಲವಾರು ದೇಶಗಳನ್ನು ಎದುರು ಹಾಕಿಕೊಂಡಿದೆ.ಈ ಮಧ್ಯೆ ಗಡಿ ವಿವಾದದಿಂದ ,ಭಾರತದ ಜೊತೆ ಖ್ಯಾತೆ ತೆಗೆದಿರುವ , ಚೀನಾಗೆ ರಷ್ಯಾ ಮತ್ತು ಭಾರತದ ನಡುವೆ ಎಲ್ಲವೂ ಸರಿಯಾಗಿಲ್ಲ ಎಂದು ಅಲ್ಲಿನ ಪ್ರಮುಖ ಸರ್ಕಾರಿ ಪತ್ರಿಕೆ ಗ್ಲೋಬಲ್ ಟೈಮ್ಸ್ ವರದಿ ಮಾಡಿತ್ತು .

ಗ್ಲೋಬಲ್ ಟೈಮ್ಸ್ ವರದಿಗೆ ಕಾರಣವೇನು ?


ರಷ್ಯಾ ಮತ್ತು ಅಮೆರಿಕ ಶೀತಲ ಸಮರದಲ್ಲಿ ,ಭಾರತ ಯಾರ ಜೊತೆಗೂ ,ಹೋಗದೇ ತಟಸ್ಥವಾಗಿ ಉಳಿಯಿತು.ಪಾಕಿಸ್ತಾನ ಅಮೇರಿಕಾಗೆ ಬೆಂಬಲ ನೀಡಿದಾಗ , ರಷ್ಯಾ ನಮಗೆ ಬೆಂಬಲವಾಗಿ ನಿಂತಿತು.ಆದರೆ ಭಾರತ ಎರಡು ದೇಶಗಳ ಮಧ್ಯೆ ಸ್ನೇಹಪರವಾಗಿ ವರ್ತಿಸಿತು.ಇದು ವ್ಯಾಪಾರಿ ದೃಷ್ಟಿಯಿಂದ ಮತ್ತು ಎರಡು ದೇಶಗಳ ವಿದೇಶಾಂಗ ವ್ಯವಹಾರಗಳಿಂದ ಇದು ತುಂಬಾ ಮುಖ್ಯವಾಗಿತ್ತು.2020 ರಲ್ಲಿ ನಡೆಯಬೇಕಾಗಿದ್ದ , ಶೃಂಗಸಭೆ ಕರೋನಾ ವೈರಸ್ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಯಿತು.ಇದು ಮೊದಲ ಬಾರಿಗೆ ಆಗಿದೆ.ರಷ್ಯಾ ಮತ್ತು ಭಾರತದ ನಡುವಿನ ಸಂಬಂಧ ಬಿರುಕಿನಲ್ಲಿ , ಇದು ಮೊದಲ ಹೆಜ್ಜೆ ಆಗಿದೆ ಎಂದೆಲ್ಲಾ ,ಇದನ್ನೇ ಕಾಯುತ್ತಿದ್ದ ,ಚೀನಾ ತನ್ನ ಸರ್ಕಾರಿ ಮುಖವಾಣಿಯಲ್ಲಿ ,ರಷ್ಯಾ ಮತ್ತು ಭಾರತದ ನಡುವಿನ ಸಂಬಂಧ ಬಗ್ಗೆ ಇಲ್ಲಸಲ್ಲದ ವರದಿ ಮಾಡಿತ್ತು.


ಪುಟಿನ್ ಮಾಡಿದ್ದು ಆದರೂ ಏನು ?


ಚೀನಾ ತನ್ನ ಸರ್ಕಾರಿ ಮುಖವಾಣಿಯಲ್ಲಿ ಈ ಬಗ್ಗೆ ಪ್ರಕಟಿಸಿದ ನಂತರ , ತಕ್ಷಣ ಎಚ್ಚೆತ್ತುಕೊಂಡು ರಷ್ಯಾದ ಅಧ್ಯಕ್ಷ ಪುಟಿನ್ ಚೀನಾಗೆ ಸರಿಯಾಗಿ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.
ಭಾರತದ ರಾಷ್ಟ್ರಪತಿ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ , ಕ್ರಿಸ್ಮಸ್ ಮತ್ತು ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ.ಭಾರತ ಮತ್ತು ರಷ್ಯಾದ ನಡುವಿನ , ಸಂಬಂಧ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಮತ್ತು 2020 ರಲ್ಲಿ ಕರೋನಾ ನಡುವೆಯೂ ,ಭಾರತ ಮತ್ತು ರಷ್ಯಾ ಉತ್ತಮ ಪ್ರಗತಿ ಸಾಧಿಸಿದೆ ಎಂದು ಹೇಳಿದ್ದಾರೆ.


ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು