ಕರೋನಾಗೆ ಹೆದರಿದ ಸೌದಿ


ಕರೋನಾಗೆ ಹೆದರಿದ ಸೌದಿ


ಕರೋನಾ ವೈರಸ್ ಅಧಿಕ ವೇಗದಲ್ಲಿ ಏರುತ್ತಿರುವ ,ಈ ಸಂದರ್ಭದಲ್ಲಿ ಯುರೋಪ್ ದೇಶಗಳು ಬ್ರಿಟನ್ ನಿಂದ ಬರುವ ಎಲ್ಲಾ ವಿಮಾನಗಳನ್ನು ಮತ್ತು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿದೆ.ಕರೋನಾ ವೈರಸ್ ಅಧಿಕವಾಗಿ ದಾಖಲಾಗುತ್ತಿರ ಬಗ್ಗೆ , ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಕಳವಳ ವ್ಯಕ್ತಪಡಿಸಿದ್ದರು.ಇದರ ಬೆನ್ನಲ್ಲೇ ಹಲವು ದೇಶಗಳು ಕರೋನಾದಿಂದ ಆಗಬಹುದಾದ ಅನಾಹುತಗಳ ಬಗ್ಗೆ ಹೆಚ್ಚು ಗಾಬರಿಗೆ ಒಳಗಾಗಿದ್ದು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಸೌದಿಯ ದಿಟ್ಟ ಹೆಜ್ಜೆ


ಕರೋನಾಯಿಂದ ವಿಶ್ವ ಯಾವ ಮಟ್ಟಿಗೆ ಹೆದರಿದೆ ಎಂದರೆ ,ಎಲ್ಲೊ ನೆಗಡಿ ಆದರೆ ಇಲ್ಲಿ ಮಾತ್ರೆ ನುಂಗುವ ಅನಿವಾರ್ಯತೆಗೆ ತಲುಪಿದೆ.ಬ್ರಿಟನ್ ನಲ್ಲಿ ಹೆಚ್ಚುತ್ತಿರುವ ,ಕರೋನಾ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಅಲ್ಲಿನ ಸರ್ಕಾರ , ಹರಸಾಹಸ ಪಡುತ್ತಿದ್ದಂತೆ ,ಇತ್ತ ಸೌದಿ ಸರ್ಕಾರ ತನ್ನ ಪ್ರಜೆಗಳನ್ನು ಕರೋನಾದಿಂದ ರಕ್ಷಿಸಲು , ಎಲ್ಲಾ ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ನಿಲ್ಲಿಸುವುದಾಗಿ ಘೋಷಣೆ ಮಾಡಿದೆ.ಪಕ್ಕದಲ್ಲಿರುವ ಕುವೈತ್ ಕೂಡ ದಿಟ್ಟ ಹೆಜ್ಜೆಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ,ಸೌದಿ ಕೂಡ ಈ ನಿಟ್ಟಿನಲ್ಲಿ ಯೋಚಿಸುತ್ತಿದೆ.

ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು