ಆಮೇರಿಕಾದ ನೌಕಾಪಡೆ ಹೊರಹಾಕಿದೆ - ಚೀನಾ


 ಆಮೇರಿಕಾದ ನೌಕಾಪಡೆ ಹೊರಹಾಕಿದೆ - ಚೀನಾ


ವಿವಾದಾತ್ಮಕ ದಕ್ಷಿಣ ಚೀನಾ ಸಮುದ್ರವನ್ನು ಚೀನಾ ತನ್ನ ಸಾರ್ವಭೌಮ ಪ್ರದೇಶವೆಂದು ಹೇಳಿಕೊಂಡಿದೆ .ಚೀನಾ ಈ ಪ್ರದೇಶದ ಕೃತಕ ದ್ವೀಪಗಳಲ್ಲಿ , ಮಿಲಿಟರಿ ನೆಲೆಗಳನ್ನು ನಿರ್ಮಿಸುತ್ತಿದೆ.ಬ್ರೂನಿ , ಮಲೇಷ್ಯಾ , ಫಿಲಿಫೈನ್ಸ್ ‌, ತೈವಾನ್  ಮತ್ತು ವಿಯೆಟ್ನಾಂ ದೇಶಗಳು ದಕ್ಷಿಣ ಚೀನಾ  ಸಮುದ್ರದ ಮೇಲೆ ಹಕ್ಕು ಸಾಧಿಸಲು ಚೀನಾ ಅಡ್ಡಗಾಲು ವ್ಯಕ್ತಪಡಿಸಿದೆ.ಆಮೇರಿಕಾ ದಕ್ಷಿಣ ಚೀನಾ ಪ್ರದೇಶದಲ್ಲಿ ಸಂಚರಿಸುವ ಸ್ವಾತಂತ್ರ್ಯ ವನ್ನು ಪ್ರತಿಪಾದಿಸುವ  ಉದ್ದೇಶದಿಂದ ,ಯು.ಎಸ್ ನೌಕಾಪಡೆಯ ಹಡಗುಗಳು ವಿವಾದಿತ ದಕ್ಷಿಣ ಚೀನಾ ಸಮುದ್ರದ ಮೂಲಕ ನಿಯಮಿತವಾಗಿ ಸಂಚರಿಸುತ್ತವೆ.

ಚೀನಾ ವಾರ್ನಿಂಗ್ ಕೊಟ್ಟಿದೆ ಎಂದ ಪಿ.ಎಲ್.ಎ ಕಮಾಂಡರ್


ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಕಮಾಂಡರ್ ಹೇಳಿಕೆಯೊಂದನ್ನು ನೀಡಿದ್ದಾರೆ " ಚೀನಾ ಸರ್ಕಾರದ ಅನುಮತಿ ಇಲ್ಲದೆ ,ಚೀನಾದ ದ್ವೀಪಗಳ ಬಳಿ ,ಆಮೇರಿಕಾದ ನೌಕಾಪಡೆ ಅತಿಕ್ರಮಣ ಮಾಡಿದೆ . ಆ ನೌಕಾಪಡೆಗೆ ಎಚ್ಚರಿಕೆ ಕೊಟ್ಟು ,ಕಳುಹಿಸಿದ್ದೀವಿ "
ಎಂದು ಹೇಳಿದ್ದಾರೆ.

ಈ ವಿವಾದ ಮುಂದೆ ಯಾವ ಸ್ವರೂಪ ಪಡೆದುಕೊಳ್ಳಬಹುದು ಎಂದು ಕಾದು ನೋಡಬೇಕು.

ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು