ನನ್ನೊಬ್ಬನಿಂದ ಏನು ಆಗೋಲ್ಲ...!!!



ನನ್ನ ಒಬ್ಬನಿಂದ ,ಈ ದೇಶ ಬದಲಾಗಿ ಬಿಡುತ್ತಾ ?


ಈ ಮಾತು , ತುಂಬಾ ಸಲ ಕೇಳಿದ್ದೀರಾ... ಎಲೆಕ್ಷನ್ ನಲ್ಲಿ ಗೊತ್ತಿದ್ದೂ ,ಗೊತ್ತಿದ್ದೂ 1000, 2000 ಕ್ಕೆ ಮಾರಾಟ ಆದಾಗ , " ಏನು ಗುರು ,ಮಾಡಿದ್ದು ತಪ್ಪಲ್ಲವೇ ? ನಿನಗೆ ಇನ್ನೂ , ಪ್ರಶ್ನೆ ಮಾಡೋ ಯಾವುದೇ ರೈಟ್ಸ್ ಇಲ್ಲ ..
ಅವರು ನಿನ್ನ ಎಷ್ಟು ರೇಟ್ ಗೆ ತಗೊಂಡ್ರೂ , ಅದಕ್ಕಿಂತ ಹತ್ತರಷ್ಟು ಅವರು ದುಡ್ಡು ಮಾಡಬೇಕು.ನಿನಗೆ ಏನಾದ್ರೂ ಕೆಲ್ಸ ಆಗ್ಬೇಕು ಅಂದ್ರೆ ಮತ್ತೆ ನೀನು ದುಡ್ಡು ಕೊಡಬೇಕು.ಇದು ನಿಲ್ಲಬೇಕು ಅಂದ್ರೆ ನೀನು ದುಡ್ಡು ತಗೋಬಾರದು ಅಂತಾ ಯಾರಾದರೂ ಹೇಳಿದರೆ ..
ಅದಕ್ಕೆ ಏನಂತಾರೆ ? ಅಯ್ಯೋ ...ನನ್ನ ಒಬ್ಬನಿಂದ ಇವೆಲ್ಲಾ ನಿಂತು ಬಿಡುತ್ತಾ ? ನಾನು ತಗೊಳ್ಳೊಲ್ಲ ...ಆದರೆ ಅವರನ್ನ ತಗೊಳ್ದೇ ಇರೋತರ ಮಾಡೋಕೆ ಸಾಧ್ಯನಾ ? 
ನಮ್ಮ ಈ ದೇಶದ ಸಮಸ್ಯೆ ಇದೇ ... ಒಬ್ಬನಿಂದ ಏನು ಆಗೋಲ್ಲ ...ಹೌದು ನಿಜ ...ಒಬ್ಬನಿಂದ ಏನು ಬದಲಾಗೋಲ್ಲ ಅಂತಾ ಹೇಳಿ,ಹೇಳಿ ...ಈಗ ಫುಲ್ ಮೆಜಾರಿಟಿ ಯಲ್ಲಿ ದುಡ್ಡನ್ನು ತಗೊಂಡು ,ಕುರಿ ಮಾರಾಟ ಆಗೋ ತರ ಆಗೋತೀರಾ ? ಮತ್ತೆ ಸರ್ಕಾರನಾ ಬೈಯ್ತೀರಾ..ಏನು ಮಾಡಿಲ್ಲ ಅಂತೀರಾ ? ನಿಮಗೆ ಏನು ನಿಯತ್ತು ಇದೆ ...ಬೈಯೋಕೆ ? 

ಪ್ರಜಾಪ್ರಭುತ್ವದ ವ್ಯವಸ್ಥೆ ಬೆಸ್ಟ್ 


ಚೀನಾದ ಕಮ್ಯೂನಿಸ್ಟ್ ,ಅಥವಾ ಯಾವುದೇ ಪದ್ದತಿ ಪರಿಗಣನೆಗೆ ತೆಗೆದುಕೊಂಡರೆ , ಪ್ರಜಾಪ್ರಭುತ್ವದ ವ್ಯವಸ್ಥೆ ತುಂಬಾ ಒಳ್ಳೆಯ ಪದ್ಧತಿ.ಇಲ್ಲಿ ಶಾಂತಿಯುತ ರೀತಿಯಲ್ಲಿ ಅಧಿಕಾರ ಬದಲಾಗುತ್ತದೆ. ಆದರೆ ಇದರ ಯಶಸ್ವಿಯಾಗುವುದು ಪ್ರಜೆಗಳ ಮನಸ್ಥಿತಿಯ ಮೇಲಿದೆ.
ಪ್ರಾಮಾಣಿಕರು ಕಡಿಮೆ ಆಗ್ತಾ ಇದ್ದಾರೆ.ನಾನು ಒಬ್ಬ ಏನು ಮಾಡೋಕೆ ಸಾಧ್ಯ , ಅನ್ನೋರು ಜಾಸ್ತಿ ಆಗ್ತಾ ಇದ್ದಾರೆ... ಇದರಿಂದ ಪ್ರಜಾಪ್ರಭುತ್ವದ ಹಬ್ಬ ಸೂತಕದ ಮನೆ ಆಗ್ತಾ ಇದೆ.ಹನಿ ಹನಿಗೂಡಿದರೆ ಹಳ್ಳ ,ತೆನೆ ತೆನೆ ಸೇರಿದರೆ ಬಳ್ಳ ಅನ್ನೋದು ಈ ಮಾರಾಟ ಆಗುವ ಮತದಾರ ಮರೆಯುತ್ತಿದ್ದಾನೆ.

ಜಪಾನ್ ಲ್ಲಿ ಜನ ದೇಶಕ್ಕಾಗಿ ದುಡಿಯುತ್ತಿದ್ದಾರೆ


ಒಂದು ಚಿಕ್ಕ ದೇಶ ,ವಿಶ್ವದ ಆರ್ಥಿಕತೆಯಲ್ಲಿ ಮೂರನೇ ಬಲಿಷ್ಠ ರಾಷ್ಟ್ರ ... ಇದಕ್ಕೆ ಕಾರಣ ಏನು ಗೊತ್ತಾ ? ಅಲ್ಲಿರುವವರು ಸರ್ಕಾರಗಳ ಟೀಕೆ ಮಾಡುವ ಮುಂಚೆ , ಪ್ರಾಮಾಣಿಕವಾಗಿ ದೇಶಕ್ಕಾಗಿ ದುಡಿಯುತ್ತಾರೆ.ಇತ್ತೀಚೆಗೆ ಅಲ್ಲಿ ಬಸ್ ಸ್ಪೈಕ್ ಆಯಿತು .ಯಾವ
ತರಹ ಗೊತ್ತಾ ? ಪ್ರಯಾಣಿಕರಿಂದ ಹಣವನ್ನು ವಸೂಲಿ ಮಾಡದೇ , ಸರ್ಕಾರಕ್ಕೆ ನಷ್ಟ ಮಾಡಿದರು. ಅವಧಿಗಿಂತ ಜಾಸ್ತಿ ಕೆಲಸ ಮಾಡಿದರು.ಅಲ್ಲಿನ ಸರ್ಕಾರ ಮಾತುಕತೆ ಮಾಡಿ ,ಪರಿಹರಿಸಿತು.ಭೂಕಂಪ ಆದಾಗ ,3 ತಿಂಗಳಿನಲ್ಲಿ ಆ ಸರ್ಕಾರ ಏನೋ ಆಗಿಲ್ಲವೇನೊ ಎನ್ನುವಂತೆ ಸಮಸ್ಯೆ ಪರಿಹರಿಸಿತು.


ಯಥಾ ಪ್ರಜೆ ತಥಾ ರಾಜಾ


ಹಿಂದೆ ರಾಜ ಹೇಗಿರುತ್ತಾರೋ ? ,ಹಾಗೆ ಪ್ರಜೆಗಳು ಇರುತ್ತಿದ್ದರು .ಆದರೆ ಇದು ಪ್ರಜಾಪ್ರಭುತ್ವ ...ಈ ವ್ಯವಸ್ಥೆಯಲ್ಲಿ ಪ್ರಜೆಗಳು ಹೇಗಿರುತ್ತಾರೋ , ನಮ್ಮ ಸೇವಕರು ಹಾಗೇ ಇರುತ್ತಾರೆ.ನಾವು ದುಡ್ಡು ತೆಗೆದುಕೊಂಡಿಲ್ಲ ಅಂದ್ರೆ ,ಅವರು ಕೊಡೋದಕ್ಕೆ  ಸಾಧ್ಯಾನಾ ? ಯಾರು ತಗೊಂಡಿಲ್ಲ ಅಂದ್ರೆ ಅವರು ವಾಮ ಮಾರ್ಗದಲ್ಲಿ ದುಡ್ಡು ಮಾಡೋಕೆ ಸಾಧ್ಯನಾ ? ಯೋಚಿಸು ನಾಗರೀಕ... ಒಂದು ಸರ್ಕಾರ ಜನರ ಸಮಸ್ಯೆ ದಿಡೀರ್ ಎಂದು ಪರಿಹರಿಸಬೇಕು ಎಂದರೆ , ನಾವು ಮೊದಲು ಪ್ರಮಾಣಿಕರಾಗಿಬೇಕು.
 ನೀವು ಒಬ್ಬರೇ ...ನಾಳೆ ಇಬ್ಬರು ... ನಾಳಿದ್ದು ...ಹೀಗೆ ಮುಂದೆ ಇಡೀ ದೇಶ ... ನಮ್ಮ ದೇಶ ವಿಶ್ವದ ದೊಡ್ಡಣ್ಣ ಆಗುವ ಆಸೆ ನಿಮಗಿಲ್ಲವೇ ?

ದಯವಿಟ್ಟು , ನಿಮ್ಮ ಸ್ನೇಹಿತರಿಗೆ what's up ಮತ್ತು Facebook ನಲ್ಲಿ ಶೇರ್ ಮಾಡಿ,ಈ ಲೇಖನದಿಂದ ಮಾರಾಟ ಆಗುವ ಮತದಾರರು , ಆತ್ಮ ವಿಮರ್ಶೆ ಮಾಡಿಕೊಂಡು, ಸ್ವಲ್ಪ ಮಟ್ಟಿಗೆ ಆದರೂ , ಹಣದ ಆಮಿಷಕ್ಕೆ ಒಳಗಾಗದೆ , ಪ್ರಾಮಾಣಿಕವಾಗಿ ಮತ ಚಲಾಯಿಸಿದರೆ ,ಈ ಲೇಖದ ಉದ್ದೇಶ ಸಾರ್ಥಕ. 

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು