ಭಾರತದ ವಿಧಿಯಾಟ ಇಂದು ಜಗತ್ತಿಗೆ ಫೇಮಸ್


ಭಾರತೀಯರ ಕೊಡುಗೆ


ಭಾರತದ ವಿಧಿಯಾಟ ಇಂದು ಜಗತ್ತಿಗೆ ಫೇಮಸ್


ಜಗತ್ತಿಗೆ ಭಾರತೀಯರ ಕೊಡುಗೆ ಏನು ಕಡಿಮೆ ಇಲ್ಲ.ಭಾರತೀಯರ ಒಂದೊಂದು ಕೊಡುಗೆಯೂ ಅತ್ಯಂತ ವಿಶಿಷ್ಟ ಮತ್ತು ವಿಭಿನ್ನವಾದುದು.ಸರ್ವ ಕಾಲಕ್ಕೂ ಸಲ್ಲುವ ಶ್ರೇಷ್ಠವಾದುದನ್ನೇ ಭಾರತವು ನೀಡಿದೆ.

ಹಾವು ಏಣಿ ಆಟ


ಸೊನ್ನೆಯ ಮಹತ್ವ ,ಚದುರಂಗದ ಬುದ್ಧಿವಂತಿಕೆ ,ಯೋಗದ ಆರೋಗ್ಯ , ಆಯುರ್ವೇದದ ಆರೋಗ್ಯ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.ಈ ಹಾವು ಏಣಿ ಆಟ ಕೂಡ ಭಾರತದ ಅದ್ಭುತ ಕೊಡುಗೆ ಆಗಿದೆ.

ವಿಧಿಯಾಟದ ಕಲ್ಪನೆ


ಹಾವು ಎಂದರೆ ಕಷ್ಟಗಳು ..ಏಣಿ ಎಂದರೆ ಜೀವನದ ಸಾಧನೆಗಳು ... ಒಂದು ಗುರಿಯನ್ನು ತಲುಪಬೇಕಾದರೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವಾಗ ,ವಿಧಿಯ ಆಟದಲ್ಲಿ ಹಾವಿನ ಮೂಲಕ ಕಚ್ಚಿಸಿಕೊಂಡು ಕೆಳಗಡೆ ಬರುತ್ತೇವೆ .ಆಗ ಧೃತಿಗೆಡದೆ ಮತ್ತೆ ಆಟ ಮುಂದುವರಿಸಿಕೊಂಡು ಹೋಗಬೇಕು.ಅದೃಷ್ಟ ಇದ್ದರೆ ,ಏಣಿ ಸಿಗುತ್ತದೆ.ಒಂದು ಗುರಿಯ ಬೆನ್ನತ್ತಿ ಹೋಗುವಾಗ ಆಗುವ ಅಪಾಯಗಳ ಮುನ್ಸೂಚನೆಯನ್ನು , ಸಾಂಕೇತಿಕವಾಗಿ ತಿಳಿಸುವ ಈ ಏಣಿ ಹಾವು ಆಟ ನಮ್ಮ ಭಾರತೀಯರ ಪರಿಕಲ್ಪನೆ ಎಂದರೆ ನಿಜವಾಗಿಯೂ ಹೆಮ್ಮೆಯಲ್ಲವೇ .....

ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು