ಖಾಸಗಿ ರೇಡಿಯೋ ಮೊದಲ ಮಾತು


ರೇಡಿಯೋ ಬಗ್ಗೆ ಕುತೂಹಲ ಮಾಹಿತಿಗಳು


ಖಾಸಗಿ ರೇಡಿಯೋ ಮೊದಲ ಮಾತು


ಒಂದು ಕಾಲದಲ್ಲಿ ನಾಟಕ, ಜನರ ಮನೋರಂಜನೆಯ ಸಾಧನ ಆಗಿತ್ತು.ಆ ಮನರಂಜನೆಯ ಸಾಧನವನ್ನು ಪಕ್ಕಕ್ಕೆ ಸರಿಸಿ ,ಆ ಜಾಗವನ್ನು ಆಕ್ರಮಿಸಿಕೊಂಡಿದ್ದು , ರೇಡಿಯೋ ...ಯಾರ ಮನೆಯಲ್ಲಿ ರೇಡಿಯೋ ಇರುತ್ತದೆಯೋ ...ಅವನೇ ಶ್ರೀಮಂತ... 

ರೇಡಿಯೋ ಸಾಮ್ರಾಜ್ಯವನ್ನು ಹಾಳು ಮಾಡಿದ್ದು ಟಿ‌ವಿ ಮಾಧ್ಯಮ... ಕೇವಲ ಕೇಳುವುದಲ್ಲದೇ , ನೋಡುವುದು ಕೂಡ ಇದರ ವೈಶಿಷ್ಟ್ಯ ಆಗಿತ್ತು.ಹಾಗಾಗಿ ರೇಡಿಯೋ ಗತಿ ಅಯೋಮಯ ಆಗೋಯ್ತು.

ಆಗ ಟೇಪ್ ರೆಕಾರ್ಡರ್ ಜೊತೆಗೆ ರೇಡಿಯೋ ಬರುವುದಕ್ಕೆ ಪ್ರಾರಂಭ ಆಯಿತು.ಇದರಿಂದ ಸ್ವಲ್ಪ ಮಟ್ಟಿಗೆ ರೇಡಿಯೋ ಉಸಿರಾಡುವಂತೆ ಆಯಿತು.

ನಂತರ ಟೇಪ್ ರೆಕಾರ್ಡರ್ ಕೂಡ ಅವನತಿ ಹೊಂದಲು ಪ್ರಾರಂಭಿಸಿದಾಗ , ರೇಡಿಯೋ ಅವನತಿಯ ದಾರಿ ಹಿಡಿಯಿತು... ಇವುಗಳ ಮಧ್ಯೆ ರೇಡಿಯೋ ದಲ್ಲಿ ಕ್ರಾಂತಿಕಾರಿ ಬದಲಾವಣೆ ಆಯಿತು...ಸಪ್ಪಗಿದ್ದ ರೇಡಿಯೋ...'ಮಗ' ಏನು ಗುರು 'ಎಂಬ ಮಾತುಗಳಿಂದ ಮಸಾಲೆ ಮಿಶ್ರಿತ ಆಯಿತು... ಇವೆಲ್ಲವೂ ಸಾಧ್ಯವಾಗಿದ್ದು , ರೇಡಿಯೋ ಖಾಸಗೀಕರಣ ಆದಾಗ 

ಹೌದು ರೇಡಿಯೋ ಖಾಸಗೀಕರಣ ಆದ ಮೇಲೆ ರೇಡಿಯೋದಲ್ಲಿ , ಸಾಂಪ್ರದಾಯಿಕ ಕಾರ್ಯಕ್ರಮಗಳ ಜೊತೆಗೆ , ಯುವಕರಿಗೆ ಇಷ್ಟ ಆಗುವ ಭಾಷೆಯನ್ನು ಬಳಸಲಾಯಿತು.. ಕ್ರಮೇಣ ರೇಡಿಯೋ ಜನಪ್ರಿಯ ಆಯಿತು


ಮೊಟ್ಟ ಮೊದಲು ಖಾಸಗಿ ರೇಡಿಯೋ ಆಗಿದ್ದು ಎಲ್ಲಿ ? 


ನಮ್ಮ ಚೆಲುವ ಕನ್ನಡ ನಾಡಿನಲ್ಲಿ , ಮೊಟ್ಟ ಮೊದಲು ಖಾಸಗಿ ರೇಡಿಯೋ ಆರಂಭ ಆಗಿದ್ದು , ಎಂದೂ ಎಷ್ಟೋ ಜನರಿಗೆ ತಿಳಿದಿಲ್ಲ.
2001 ರಲ್ಲಿ 91.1 ಎಫ್ .ಎಂ ಅನ್ನು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪ್ರಾರಂಭಿಸಲಾಯಿತು.ಇಂದು ಈ ಚಾನೆಲ್ ದೇಶಾದ್ಯಂತ 50 ಕ್ಕೂ ಹೆಚ್ಚು , ರೇಡಿಯೋ ಕೇಂದ್ರಗಳನ್ನು ಹೊಂದಿದೆ.

ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು