ಶ್ರೀನಗರ ಲೇಹ್ ಹೆದ್ದಾರಿ ಮುಕ್ತ ಮುಕ್ತ


ಹಿಮಪಾತದ ಕಡಿಮೆ ಹಿನ್ನೆಲೆಯಲ್ಲಿ,


ಶ್ರೀನಗರ ಲೇಹ್ ಹೆದ್ದಾರಿ ಮುಕ್ತ ಮುಕ್ತ


ಭಾರೀ ಹಿಮಪಾತ ಮತ್ತು ಎತ್ತರದ ಜೋಜಿಲಾ ಮೇಲ್ಭಾಗದಲ್ಲಿ ಜಾರುವ ರಸ್ತೆಯಿಂದಾಗಿ , ಒಂದು ವಾರದಿಂದ ಮುಚ್ಚಿದ್ದ , ಶ್ರೀನಗರ ಲೇಹ್ ಹೆದ್ದಾರಿಯನ್ನು ಮಂಗಳವಾರದಿಂದ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹರ್ಷ ವ್ಯಕ್ತಪಡಿಸಿದ ಜನತೆ


ಶ್ರೀನಗರದಿಂದ ಲಡಾಖ್ ರವರೆಗೆ ಸಂಚಾರಕ್ಕೆ ಅನುಕೂಲ ಕಲ್ಪಿಸಿರುವುದರಿಂದ , ನಾಗರೀಕರು ಮತ್ತು  ಭದ್ರತಾ ಸಿಬ್ಬಂದಿಗಳಿಗೆ ತುಂಬಾ ಅನುಕೂಲವಾಗಿದೆ.ಸುರಕ್ಷತೆಯ ದೃಷ್ಟಿಯಿಂದ ,ಮಧ್ಯಾಹ್ನದಿಂದ ಪರಿಸ್ಥಿತಿ ಅವಲೋಕಿಸಿ ,11500 ಅಡಿ ಎತ್ತರದಲ್ಲಿ , ಹಿಮದಿಂದ ಆವೃತವಾದ  ಜೊಜಿಲಾ ಮೇಲ್ಭಾಗವನ್ನು ದಾಟಲು ಅವಕಾಶ ನೀಡಲಾಗಿದೆ ‌.

ವಾಹನಗಳು ಇಲ್ಲಿ ಚಲಿಸುವುದು ಅತ್ಯಂತ ಸಾಹಸಮಯ ವಾಗಿರುವುದರಿಂದ , ತುರ್ತು ಸಮಯದಲ್ಲಿ ಸಹಾಯ ಮಾಡಲು ಪುರುಷರು ಮತ್ತು ಯಂತ್ರೋಪಕರಣಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೈದ್ಯಕೀಯ ಸಿಬ್ಬಂದಿ


ಯಾವುದೇ ಅಹಿತಕರ ಸನ್ನಿವೇಶಗಳು ಸಂಭವಿಸಿದರೆ , ಸಮರ್ಥವಾಗಿ ಎದುರಿಸಲು , ಭದ್ರತಾ ಸಿಬ್ಬಂದಿ , ಅಗತ್ಯ ವೈದ್ಯಕೀಯ ಸಿಬ್ಬಂದಿ ಮತ್ತು ವೈದ್ಯಕೀಯ ಉಪಕರಣಗಳನ್ನು ಸಜ್ಜುಗೊಳಿಸುತ್ತಿದೆ.

ರಸ್ತೆಯನ್ನು ನೋಡಿಕೊಳ್ಳುತ್ತಿರುವ , ಬಾರ್ಡರ್ ರೋಡ್ಸ್ ಆರ್ಗನೈಜೇಷನ್ , ಲಡಾಖ್ ಗೆ ಅಗತ್ಯ ಸಾಮಾಗ್ರಿಗಳನ್ನು ,ಸಾಗಿಸುವ ವಾಹನಗಳು ,ಹಗಲಿನ ವೇಳೆಯಲ್ಲಿ,ಜೊಜಿಲಾ ಮೇಲ್ಭಾಗವನ್ನು ದಾಟಿದೆ ಎಂದು ಹೇಳಿದ್ದಾರೆ.

ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು