ಭಾರತದಲ್ಲಿ ಯಾವುದೇ ಪ್ರಜಾಪ್ರಭುತ್ವ ಇಲ್ಲ - ರಾಹುಲ್ ಹೇಳಿಕೆಗೆ ಮೋದಿ ಟಾಂಗ್

ಪ್ರಧಾನಿ ಮೋದಿ ದೆಹಲಿಯಲ್ಲಿ  ಈ ಹೇಳಿಕೆ ನೀಡಿದರು.


ಭಾರತದಲ್ಲಿ ಯಾವುದೇ ಪ್ರಜಾಪ್ರಭುತ್ವ ಇಲ್ಲ - ರಾಹುಲ್ ಹೇಳಿಕೆಗೆ ಮೋದಿ ಟಾಂಗ್ 

ಪ್ರಧಾನಿ ಮೋದಿ ,ಕಾಂಗ್ರೆಸ್ ನಾಯಕನ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.ಇತ್ತೀಚೆಗೆ ರಾಹುಲ್ ಗಾಂಧಿ " ಭಾರತದಲ್ಲಿ ಯಾವುದೇ ಪ್ರಜಾಪ್ರಭುತ್ವ ಇಲ್ಲ ಎಂದು ಮೂದಲಿಸಿದ್ದರು.ಅದಕ್ಕೆ ಪ್ರಧಾನಿ ಮೋದಿ ಪುದುಚೇರಿಯ ಉದಾಹರಣೆ ತೆಗೆದುಕೊಂಡರು.
ಪುದುಚೇರಿಯಲ್ಲಿ ಪಂಚಾಯಿತಿ ಮತ್ತು ಪುರಸಭೆ ಚುನಾವಣೆ ನಡೆಸಬೇಕೆಂದು , ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ , ಪಾಲಿಸದೆ ಚುನಾವಣೆಗಳನ್ನು ನಿರ್ಬಂಧಿಸಿರುವವರು , ಪ್ರಜಾಪ್ರಭುತ್ವದ ಪಾಠವನ್ನು ಹೇಳಿಕೊಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಡಿ‌.ಸಿ.ಸಿ ಚುನಾವಣೆಯಲ್ಲಿ ಜನರು ಮತದಾನ ಮಾಡಿದನ್ನು ನೆನಪಿಸಿಕೊಂಡ ಪ್ರಧಾನಿ ,ಅದು ಪ್ರಜಾಪ್ರಭುತ್ವದ ಗೆಲುವಾಗಿದೆ.ಭಾರತ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಮಾಡಲಿದೆ.ಹಿಂದಿನ ಸರ್ಕಾರಗಳು ಗಡಿಯ ಬಗ್ಗೆ ನಿರ್ಲಕ್ಷ್ಯ ಮಾಡಿದ್ದವು .ಆದರೆ ನಾವು ಅಭಿವೃದ್ಧಿ ಮಾಡುತ್ತೇವೆ ಎಂದು ತಿಳಿಸಿದರು.ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆ ಜಮ್ಮು ಕಾಶ್ಮೀರದಲ್ಲಿ ಕೂಡ ಗೆಲ್ಲಲಿದೆ.
ಆಯುಷ್ಮಾನ್ ಭಾರತ ಯೋಜನೆಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಕೂಡ ಜಾರಿಗೆ ತರಲಿದ್ದೀವಿ .ಆ ಮೂಲಕ ಉಚಿತವಾಗಿ ವಿಮೆ ಸೌಲಭ್ಯ ಈ ಭಾಗದ ಜನರಿಗೂ ಕೂಡ ಸಿಗಲಿದೆ ಎಂದು ಕೂಡ ತಿಳಿಸಿದರು.

ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು