ಭಾರತ ಮತ್ತು ಯು.ಎ.ಇ ವೃದ್ಧಿ ಅಭಿವೃದ್ಧಿ


ಯು.ಎ.ಇ ಮತ್ತು ಭಾರತ ಅಭಿವೃದ್ಧಿ ವೃದ್ಧಿ


ಭಾರತ ಮತ್ತು ಯು.ಎ.ಇ ನಡುವೆ‌ ಉತ್ತಮ ಭಾಂದವ್ಯ ವೃದ್ಧಿಗೆ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತೀಯ ಸೇನೆಯ ಮುಖ್ಯಸ್ಥರು ನಾರವಾನೆ ಯು‌.ಎ.ಇ ಗೆ ಭೇಟಿ ನೀಡಿದ್ದು ,ಅಲ್ಲಿ ಯುಎಇ ಭೂ ಪಡೆಗಳ ಕಮಾಂಡರ್  ಮತ್ತು ಸಿಬ್ಬಂದಿ ಮೇಜರ್ ಜನರಲ್ ಸಲೇಹ್ ಮೊಹಮ್ಮದ್ ಸಲೇಹ್ ಅಲ್ ಅಮೆರಿಯನ್ನು ಭೇಟಿ ಮಾಡಿದರು . ಇದರಿಂದ ರಕ್ಷಣೆ ಮತ್ತು ಭದ್ರತಾ ಕ್ಷೇತ್ರದಲ್ಲಿ, ಸಹಕಾರಕ್ಕಾಗಿ ಹೊಸ ಮಾರ್ಗಗಳು ಮತ್ತಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ನವೆಂಬರ್ ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರ ಭೇಟಿ


ಭಾರತ ಮತ್ತು ಯು.ಎ.ಇ ನಡುವಿನ ಬಗ್ಗೆ ವಿಶೇಷ ಆಸಕ್ತಿ ವಹಿಸಿರುವ
,ಜೈ ಶಂಕರ್ ರವರು ಭಾರತದ ಮತ್ತು ಯು.ಎ.ಇ ನಡುವಿನ ಬಾಂಧವ್ಯ ವೃದ್ಧಿಯಲ್ಲಿ ಪ್ರಮುಖ ಮಾತುಕತೆಯನ್ನು ನಡೆಸಿದ್ದರು.ಜೈ ಶಂಕರ್ ರವರು ಹೇಳಿಕೆಯೊಂದನ್ನು ನೀಡಿ " ಭಾರತ ಮತ್ತು ಯು.ಎ.ಇ ಉನ್ನತ ನಾಯಕತ್ವದ ಪ್ರಬಲ ಆಸಕ್ತಿಯಿಂದ , ಕೆಲವು ವರ್ಷಗಳಲ್ಲಿ ಭಾರತ ಮತ್ತು ಯು.ಎ.ಇ ನಡುವಿನ ಸಂಬಂಧಗಳು ‌ಏರಿಕೆ ಆಗುತ್ತಿದೆ.ಕೋವಿಡ್ ನಂತರದ ಯುಗದಲ್ಲಿ , ವಿಶೇಷವಾಗಿ ಆರ್ಥಿಕ ರಂಗದಲ್ಲಿ , ಅವುಗಳನ್ನು ಇನ್ನಷ್ಟು ಬಲಪಡಿಸಲು ಉಭಯ ದೇಶಗಳ ನಾಯಕರು ಈ ವರ್ಷ ನಿಯಮಿತವಾಗಿ ಪಾರ್ಲಿಗಳನ್ನು ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಭಾರತೀಯರನ್ನು ನೋಡಿಕೊಂಡ ಯು.ಎ.ಇ


ಕೋವಿಡ್ ಸಮಯದಲ್ಲಿ ಯು.ಎ.ಇ ಯಲ್ಲಿ ವಾಸಿಸುವ 3.3 ಮಿಲಿಯನ್ ಭಾರತೀಯರ ಕಲ್ಯಾಣಕ್ಕಾಗಿ ಭಾರತ ಮನವಿ ಮಾಡಿತ್ತು.ಭಾರತೀಯರನ್ನು ನೋಡಿಕೊಂಡಿದ್ದಕ್ಕೆ , ಶೇಖ್ ಮೊಹಮ್ಮದ್ ಅವರಿಗೆ ,ಜೈ ಶಂಕರ್ ಧನ್ಯವಾದ ಅರ್ಪಿಸಿದ್ದು ,ಕರೋನಾ ಸಂಕಷ್ಟದ ಸಮಯದಲ್ಲಿ ಯು.ಎ.ಇ ಗೆ ಎಲ್ಲಾ ರೀತಿಯಲ್ಲೂ , ಭಾರತವು
ವಿಶ್ವಾಸಾರ್ಹ
ಪಾಲುದಾರನಾಗಿತ್ತು ಎಂದು ಒತ್ತಿ ಹೇಳಿದ್ದಾರೆ.

ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು