ಹೊಸ ವರ್ಷ ಹಳೇ ಭಯ


  

ಹೊಸ ವರ್ಷದ ಸಂಭ್ರಮಾಚರಣೆ ಎಲ್ಲೆಲ್ಲಿ ಬಿಗಿ ಕಾನೂನು ?


ಕರೋನಾಯಿಂದ ವಿಶ್ವ ಬದಲಾಗಿದೆ.ಇಡೀ ವಿಶ್ವ 2020 ಅನ್ನು ಸಂಭ್ರಮದಿಂದ ಬರ ಮಾಡಿಕೊಂಡು ,ಹಿರಿ ಹಿರಿ ಹಿಗ್ಗಿತ್ತು.ಆದರೆ 2021 ಕ್ಕೆ ಜನ ಹೊರ ಬರದಂತೆ , ಸಂಭ್ರಮಾಚರಣೆ ಮಾಡದಂತೆ , ಹಲವು ದೇಶಗಳು ಹಲವು ಬಿಗಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ

ಭಾರತ


ಭಾರತದಲ್ಲಿ, ದೆಹಲಿ ಮತ್ತು ಇತರ ಹಲವಾರು ನಗರಗಳು ಹೊಸ ವರ್ಷದ ಕೂಟಗಳನ್ನು ತಡೆಯಲು ರಾತ್ರಿ ಕರ್ಫ್ಯೂ ಮತ್ತು ಇತರ ನಿರ್ಬಂಧಗಳನ್ನು ವಿಧಿಸಿವೆ.

ಫ್ರಾನ್ಸ್ 


ಹೊಸ ವರ್ಷದ ಮುನ್ನಾದಿನ ಯಾವುದೇ ಪಾರ್ಟಿಗಳನ್ನು ನಡೆಸದಂತೆ , ನೈಟ್ ಕರ್ಫ್ಯೂ ಜಾರಿಗೆ ತಂದಿದೆ ಮತ್ತು ಇದಕ್ಕಾಗಿ , ಒಂದು ಲಕ್ಷ ಪೋಲೀಸರನ್ನು ನಿಯೋಜಿಸಿದೆ.ರೆಸ್ಟೋರೆಂಟ್‌ಗಳು ಮತ್ತು ಸಾಂಸ್ಕೃತಿಕ ಆಕರ್ಷಣೆಗಳು ಹೊಸ ವರ್ಷಕ್ಕೆ ಮುಚ್ಚಲ್ಪಡುತ್ತವೆ.

ಇಂಗ್ಲೆಂಡ್


ಹೊಸ ವರ್ಷದ ಸಂಭ್ರಮಾಚರಣೆ ಕೇವಲ ಮನೆಯಲ್ಲಿ ಮಾತ್ರ ಆಚರಿಸುವುದರೊಂದಿಗೆ ,ಕೋವಿಡ್ ಹರಡದಂತೆ ಸಹಕರಿಸುವಂತೆ ಅಲ್ಲಿನ ಸರ್ಕಾರ ಜನರಿಗೆ ಮನವಿ ಮಾಡಿದೆ.ಯಾವುದೇ ದೊಡ್ಡ ಪಾರ್ಟಿ ನಡೆಸದಂತೆ , ಪೋಲೀಸರು ಬಿಗಿ ಕ್ರಮಗಳನ್ನು ಕೈಗೊಂಡಿದ್ದಾರೆ.

ನೆದರ್ಲೆಂಡ್ 


ಜನವರಿ 19 ವರೆಗೆ ಲಾಕ್ ಡೌನ್ ಇರುವುದರಿಂದ, ಜನರು ಮನೆಯಲ್ಲಿ ಸಂಭ್ರಮಾಚರಣೆ ಮಾಡುವಂತೆ , ಜನರಲ್ಲಿ ಅಲ್ಲಿನ ಸರ್ಕಾರ ಮನವಿ ಮಾಡಿದೆ

ಜರ್ಮನಿ


ಜರ್ಮನಿ ಪ್ರಸ್ತುತ ಜನವರಿ 10 ರವರೆಗೆ ಲಾಕ್‌ಡೌನ್ ಜಾರಿಯಲ್ಲಿದೆ. ಪಟಾಕಿ ಮಾರಾಟವನ್ನು ಸರ್ಕಾರ ನಿಷೇಧಿಸಿದೆ ಮತ್ತು ಸಾರ್ವಜನಿಕವಾಗಿ ಒಟ್ಟುಗೂಡಬಲ್ಲ ಜನರ ಸಂಖ್ಯೆಗೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿದೆ.

ಆಸ್ಟ್ರೇಲಿಯಾ 


ಹೊಸ ವರ್ಷ ಬಂದರೆ , ಆಸ್ಟೇಲಿಯಾದಲ್ಲಿ ಪಟಾಕಿಗಳ ಸಂಭ್ರಮ ಮುಗಿಲು ಮುಟ್ಟುತ್ತದೆ.ಆದರೆ ಈ ಸಲ ಅದನ್ನು  ,ಜನ  ಟಿವಿಯಲ್ಲಿ ನೋಡಬೇಕು ... ಅದನ್ನು ಆನಂದಿಸಲು ಮೈದಾನಕ್ಕೆ ಬರುವ ಆಗಿಲ್ಲ.ಕೇವಲ ಗಣ್ಯರಿಗೆ ಮಾತ್ರ ಆಸನ ವ್ಯವಸ್ಥೆ ಮಾಡಲಾಗಿದೆ.

ಚೀನಾ


ಹೊಸ ವರ್ಷದ ಎಲ್ಲಾ ಬೆಳಕಿನ ಸಂಭ್ರಮಕ್ಕೆ ಬಿಗಿ ನಿಯಮಗಳನ್ನು ಜಾರಿಗೆ ತರಲಾಗಿದೆ ಮತ್ತು ದೇಶಾದ್ಯಂತ ಆಚರಣೆಗಳನ್ನು ಕಡಿಮೆ ಮಾಡುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.

ಜಪಾನ್


ಜಪಾನ್ ಸಾಂಪ್ರದಾಯಿಕ ಹೊಸ ವರ್ಷದ ಕಾರ್ಯಕ್ರಮವನ್ನು ರದ್ದುಗೊಳಿಸಿದೆ, ಇದರಲ್ಲಿ ಚಕ್ರವರ್ತಿ ನರುಹಿಟೊ ಮತ್ತು ಇತರ ಸಾಮ್ರಾಜ್ಯಶಾಹಿ ಕುಟುಂಬ ಸದಸ್ಯರು ಜನರನ್ನು ಸ್ವಾಗತಿಸಬೇಕಾಗಿತ್ತು.

ಟರ್ಕಿ 


ಹೊಸ ವರ್ಷದ ಮುನ್ನಾದಿನದಿಂದ , ನಾಲ್ಕು ದಿನಗಳ ಲಾಕ್ ಡೌನ್ ಘೋಷಣೆ ಮಾಡಿದೆ.

ಅಮೇರಿಕಾ


ಅಮೇರಿಕಾದಲ್ಲಿ ಹಲವು ರಾಜ್ಯಗಳಲ್ಲಿ , ಅನೇಕ ನಿರ್ಬಂಧ ಹೇರಲಾಗಿದೆ.ಪಟಾಕಿಗಳನ್ನು ಕೆಲವು ರಾಜ್ಯಗಳಲ್ಲಿ ನಿರ್ಬಂಧಿಸಲಾಗಿದೆ.

ಈ ಕರೋನಾಯಿಂದ ಹಲವು ದೇಶಗಳು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ.

ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು