ಭಾರತೀಯರೇ ಸ್ಟ್ರಾಂಗ್ ಗುರು




ಅಮೇರಿಕಾದಲ್ಲಿ ಭಾರತೀಯರ ಹವಾ


ಭಾರತೀಯರೇ ಹೀಗೆ ,ಅಪಾರ ಬುದ್ಧಿ ಶಕ್ತಿ ಮತ್ತು ಜ್ಞಾನ ಸಂಪತ್ತಿನಿಂದ ಮತ್ತು ಈ ನೆಲದ ಮಣ್ಣಿನ ಶಕ್ತಿಯಿಂದ , ಹಲವಾರು ಸಾಧನೆಗಳನ್ನು ಮಾಡುತ್ತಾ ಇರುತ್ತಾರೆ.ವಿಶ್ವದಾದ್ಯಂತ ಹಲವಾರು ಹುದ್ದೆಗಳನ್ನು ತನ್ನದಾಗಿಸುವಲ್ಲಿ , ಅವರಿಗೆ ಅವರೇ ಸಾಟಿ....

ಅಮೇರಿಕಾದಲ್ಲಿ ಭಾರತೀಯರು ತನ್ನ ಪ್ರತಿಭೆಯ ಮೂಲಕ , ಹಲವಾರು ಆಯಕಟ್ಟಿನ ಹುದ್ದೆಗಳನ್ನು ಕೂಡ ಸಮರ್ಥವಾಗಿ ನಿಭಾಯಿಸಬಲ್ಲರು ಎಂದು ಸಾಬೀತು ಪಡಿಸುತ್ತಿದ್ದಾರೆ.ಜೋ ಬೈಡನ್ ಹೊಸ ಆಡಳಿತದಲ್ಲಿ ಉಪಾಧ್ಯಕ್ಷೆ ಆಗಿರುವ ಕಮಲಾ ಸೇರಿ ಹಲವಾರು ಭಾರತೀಯರು ಈಗಾಗಲೇ ಪ್ರಮುಖ ಹುದ್ದೆಗಳಿಗೆ ನೇಮಿಸಲ್ಪಟ್ಟಿದ್ದಾರೆ.ಈಗ ಜೋ ಬೈಡನ್ ಆಡಳಿತ ಮತ್ತೊಬ್ಬ ಭಾರತೀಯ ಆಮೇರಿಕನ್ ವ್ಯಕ್ತಿಯನ್ನು ಒಂದು ಪ್ರಮುಖ ಹುದ್ದೆಗೆ ನೇಮಿಸಿದೆ.

ರಾಷ್ಟ್ರೀಯ ಆರ್ಥಿಕ ಮಂಡಳಿಯ ಉಪ ನಿರ್ದೇಶಕರಾಗಿ ಭರತ್ ರಾಮಮೂರ್ತಿ 


ತಮಿಳುನಾಡಿನ ರಾಮಮೂರ್ತಿ ತಂದೆ ರವಿ  ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿ ಪಡೆದವರು .ಇವರ ಮಕ್ಕಳು ಕೂಡ ಹಾರ್ವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆಗಿದ್ದರು. ‌ಈಗ ರವಿ ಮಗ ಭರತ್ ರಾಮಮೂರ್ತಿಯವರು ರೂಸ್ವೆಲ್ಟ್ ಇನ್ಸ್ಟಿಟ್ಯೂಟ್ ಕಾರ್ಪೋರೇಟ್ ನಾ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸೆನೆಟರ್ ಎಲಿಜಬೆತ್ ವಾರ್ನ್ ರ ಆರ್ಥಿಕ ಸಲಹೆಗಾರರಾಗಿ 7 ವರ್ಷ , ಮತ್ತು 2020 ರ  ಅಧ್ಯಕ್ಷೀಯ ಪ್ರಚಾರ ಸೇರಿದಂತೆ ಸೇವೆ ಸಲ್ಲಿಸಿದ್ದಾರೆ.

ದೇಶಿಯ ಮತ್ತು ಜಾಗತಿಕ ಆರ್ಥಿಕ ನೀತಿ ನಿರೂಪಣೆಯ ಕುರಿತು , ಅಧ್ಯಕ್ಷರಿಗೆ ಸಲಹೆ ನೀಡುವ ಶ್ವೇತಭವನದ ಈ ಸಂಸ್ಥೆಯಲ್ಲಿ  ಪ್ರಮುಖ ಹುದ್ದೆ ಕೊಟ್ಟಿದ್ದಕ್ಕೆ ರಾಮಮೂರ್ತಿ ಸಂತಸಗೊಂಡಿದ್ದು ,ಬೈಡನ್ ಮತ್ತು ಕಮಲಾರವರಿಗೆ 
ಕೃತಜ್ಞತೆ ಸಲ್ಲಿಸಿದ್ದಾರೆ.

ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು