ಗಣರಾಜ್ಯೋತ್ಸವದ ಅಂಗವಾಗಿ ಭಾರತಕ್ಕೆ ಭೇಟಿ ನೀಡದಂತೆ ಪತ್ರ


ಗಣರಾಜ್ಯೋತ್ಸವದ ಅಂಗವಾಗಿ ಭಾರತಕ್ಕೆ ಭೇಟಿ ನೀಡದಂತೆ ಪತ್ರ


ಬ್ರಿಟನ್ ಪ್ರಧಾನಿಗೆ ಪತ್ರ


ಮುಂದಿನ ತಿಂಗಳು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರತಿಭಟನೆಯ ಸಂಕೇತವಾಗಿ , ಭಾಗವಹಿಸದಂತೆ ಬ್ರಿಟನ್ ಪ್ರಧಾನಿ ಮತ್ತು ಬ್ರಿಟಿಷ್ ಶಾಸಕರನ್ನು ಪತ್ರದ ಮೂಲಕ ಕೋರುವುದಾಗಿ ,ಪ್ರತಿಭಟನಾ ಕೃಷಿ ಸಂಘಟನೆಗಳು ತಿಳಿಸಿದೆ.ಇದರ ಬಗ್ಗೆ ಮಾಹಿತಿ ನೀಡಿದ , ಹಿರಿಯ ಕೃಷಿ ಒಕ್ಕೂಟದ ಮುಖಂಡ ‌ಕುಲ್ವಂತ್ ಸಿಂಗ್ ಮಾತನಾಡಿ ' ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ , ಸುಮಾರು 450 ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ, ಮಾತನಾಡಿ ಒಂದು ಸಮಿತಿಯನ್ನು ರಚಿಸಿದೆ.ಈ ಸಮಿತಿಯು ಸರ್ಕಾರದ ಜೊತೆ ಮಾತುಕತೆ ನಡೆಸಲಿದೆ.


2 ಕೋಟಿ ಪತ್ರದೊಂದಿಗೆ ರಾಷ್ಟ್ರಪತಿಗಳಿಗೆ ಮನವಿ 


 2 ಕೋಟಿ ಜನರು ಈ ಕೃಷಿ ಮಸೂದೆ ವಿರೋಧಿಸಿ ,ಸಹಿ ಮಾಡಿರುವ ಪತ್ರವನ್ನು ಕಾಂಗ್ರೆಸ್ ನಾಯಕರ ಜೊತೆ ರಾಹುಲ್ ಗಾಂಧಿ ರಾಷ್ಟ್ರಪತಿಗಳಿಗೆ ಸಲ್ಲಿಸಿದರು.ಈ ಕೃಷಿ ಮಸೂದೆಗಳು ಕಾರ್ಪೋರೇಟ್ ಮಸೂದೆಗಳು ಆಗಿದ್ದು , ರೈತರು ಮುಂದಿನ ದಿನಗಳಲ್ಲಿ ತುಂಬಾ ಸಂಕಷ್ಟಗಳನ್ನು ಅನುಭವಿಸಬೇಕಾಗಬಹುದು.ಹಾಗಾಗಿ ಜನ ವಿರೋಧಿ ಮಸೂದೆಗಳು ಜಾರಿಗೆ ಬರದಂತೆ ತಡೆಯಬೇಕು ಎಂದು ರಾಷ್ಟ್ರಪತಿಗಳಲ್ಲಿ ಮನವಿ ಮಾಡಿದರು

ತಪ್ಪು ದಾರಿಗೆ ಎಳೆಯುವ ಯತ್ನ


ರೈತರು ಈಗಿರುವ ವ್ಯವಸ್ಥೆಯಲ್ಲಿ ಸಂತೋಷವಾಗಿದ್ದರೆ , ಆತ್ಮಹತ್ಯೆ ಅಂತಹ ಪ್ರಕರಣಗಳು ಏಕೆ ಹೆಚ್ಚಾಗುತ್ತಿದೆ.ಮತ್ತು ರೈತರು ಬಡವರಾಗುತ್ತಿದ್ದಾರೆ.ದಲ್ಲಾಳಿಗಳು ಶ್ರೀಮಂತರಾಗುತ್ತಿದ್ದಾರೆ ಎಲ್ಲಾ ಗೊತ್ತಿದ್ದರೂ, ಕಾಂಗ್ರೆಸ್ ರಾಜಕೀಯವಾಗಿ ಇದನ್ನು ವಿರೋಧಿಸಿ ,ಜನರ ದಾರಿ ತಪ್ಪಿಸುತ್ತಿದೆ ಎಂದು ಬಿಜೆಪಿ ಪ್ರಕಟನೆಯಲ್ಲಿ ಆರೋಪಿಸಿದೆ.

ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು