ನೇಪಾಳ ಸಂಸತ್ತಿನ ವಿಸರ್ಜನೆ



ನಮ್ಮ ನೆರೆಯ ಪುಟ್ಟ ದೇಶವಾದ ನೇಪಾಳದಲ್ಲಿ ಧೀರ್ಘ ಕಾಲದಿಂದಲೂ ನಡೆಯುತ್ತಿದ್ದ ಪಕ್ಷದಲ್ಲಿನ ಅಂತರ್ ಜಗಳ ಹೊಸ ಹಂತವನ್ನು ತಲುಪಿದೆ.


ನೇಪಾಳ ಸಂಸತ್ತಿನ ವಿಸರ್ಜನೆ


ನೇಪಾಳ ಪ್ರಧಾನಮಂತ್ರಿ ಮತ್ತು ಪಕ್ಷದ ಮುಖ್ಯಸ್ಥ ಕೆ.ಪಿ.ಶರ್ಮ ಓಲಿ ಅಲ್ಲಿನ ರಾಷ್ಟ್ರಪತಿಯಾದ ಬಿಡ್ಯಾ ದೇವಿ ಭಂಡಾರಿಯವರಿಗೆ ಸಂಸತ್ತು ವಿಸರ್ಜಿಸಲು ಶಿಫಾರಸ್ಸು ಮಾಡಿದ್ದಾರೆ.ಇಂದು ತುರ್ತು ಕ್ಯಾಬಿನೆಟ್ ಮೀಟಿಂಗ್ ಮಾಡಿದ ಪ್ರಧಾನಿ , ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಲು ನಿರ್ಧರಿಸಲಾಯಿತು.

ಈ ವಿಸರ್ಜನೆಗೆ ಏನು ಕಾರಣ ?


ಪಕ್ಷದ ಕಾರ್ಯನಿರ್ವಾಹಕ ಅಧ್ಯಕ್ಷರಾದ ಮತ್ತು ಮಾಜಿ ಪ್ರಧಾನಿಯಾದ ಪ್ರಚಂಡ ರವರು ಆಡಳಿತಾರೂಢ ಎನ್.ಸಿ.ಪಿ ಯಲ್ಲಿ ಪ್ರಭಾವವನ್ನು ಬೀರಿ , ತನ್ನ ಪ್ರಾಬಲ್ಯವನ್ನು ತೋರಿಸುತ್ತಿರುವುದರ ಕಾರಣದಿಂದ, ಸುಮಾರು 8  ರಿಂದ 9 ತಿಂಗಳುಗಳ ಕಾಲ ನಡೆಯುತ್ತಿದ್ದ ,ಅಂತರ್ ಪಕ್ಷದ ಜಗಳ ಹೊಸ ಆಯಾಮವನ್ನು ಪಡೆದುಕೊಂಡಿದೆ.

ಎರಡು ಬಣಗಳ ಜಗಳ


ಕೆ.ಪಿ.ಶರ್ಮ ಓಲಿ ಮತ್ತು ಪ್ರಚಂಡ ಇಬ್ಬರೂ ಪಕ್ಷದಲ್ಲಿ ಪ್ರಭಾವಿಗಳು ಆಗಿದ್ದು ,ಈ ಎರಡು ಬಣಗಳ ನಡುವೆ ಮೊದಲಿನಿಂದಲೂ , ಸಣ್ಣ ಪ್ರಮಾಣದಲ್ಲಿ ಅಧಿಕಾರ ಮತ್ತು ಆಡಳಿತದ ವಿಷಯದಲ್ಲಿ ಶೀತಲ ಸಮರ ನಡೆಯುತ್ತಲೇ ಇತ್ತು.ಇಬ್ಬರೂ ನಾಯಕರು ತಮ್ಮ ಬೆಂಬಲಿಗರ ಪಡೆಗಳ ಮೂಲಕ ನಿರಂತರವಾಗಿ ಶಕ್ತಿ ಪ್ರದರ್ಶನ ಮಾಡುವುದಕ್ಕೆ ಶುರು ಮಾಡಿದರು.ಇದರ ಪ್ರತಿಫಲವೇ ಈ ಸಂಸತ್ತು ವಿಸರ್ಜನೆ


ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ... 

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು