ಬದುಕುಳಿದ ಆನೆ




ಥೈಲ್ಯಾಂಡ್ ನಲ್ಲಿ ನಡೆಯಿತು ಒಂದು ಪವಾಡ


ಬದುಕುಳಿದ ಆನೆ 


ಒಂದು ಮರಿ ಆನೆ ತಾಯಿ ಗುಂಪಿನಿಂದ ಸ್ವಲ್ಪ ಪ್ರತ್ಯೇಕವಾಗಿ , ತಾಯಿಯನ್ನು ಹುಡುಕುತ್ತಾ , ರಸ್ತೆ ದಾಟಬೇಕಾದರೆ ರಸ್ತೆ ಅಪಘಾತ ಆಯಿತು.ಮೋಟಾರು ಬೈಕ್ ನಲ್ಲಿ ಬರುತ್ತಿದ್ದ ವ್ಯಕ್ತಿಗೆ , ದಿಢೀರನೆ ಬಂದ ಮರಿ ಆನೆಯಿಂದ ಬೈಕ್ ನಿಯಂತ್ರಣ ತಪ್ಪಿತು. ಅಪಘಾತ ಆಯಿತು.ಇದರಿಂದ ಸಾಯುವ ಸ್ಥಿತಿಯಲ್ಲಿದ್ದ ಆನೆಯನ್ನು ಕಂಡ ಜನತೆ , ಮತ್ತು ಆಫ್ ಡ್ಯೂಟಿ ರೆಸ್ಕ್ಯೂ ವರ್ಕರ್ ಮನ ಶ್ರೀವೇಟ್ ಅವರ , ಪ್ರಾಥಮಿಕ ಚಿಕಿತ್ಸೆ ಮೂಲಕ ,ಪ್ರಾಣ ಮತ್ತೆ ಮರಳಿ ಬಂದಿದೆ.10 ನಿಮಿಷ ನಿರಂತರ ಪ್ರಯತ್ನದ ಮೂಲಕ ಆನೆಯು , ಎದ್ದು ನಿಲ್ಲುವುದರ ಮೂಲಕ ಪುನರ್ಜನ್ಮ ಪಡೆಯಿತು.ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಆನೆ ನಿಂತಿದ್ದರಿಂದ 
ನೆರೆದಿದ್ದ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

ಮನ ಶ್ರೀವೇಟ್


26 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಇವರು , ಹಲವಾರು ಇಂತಹ ಪ್ರಕರಣಗಳನ್ನು ನೋಡಿದ್ದಾರೆ . ಅಂದು ಅವರು ರಸ್ತೆ ಡ್ಯೂಟಿ ಮೇಲೆ ಇದ್ದಿದ್ದರಿಂದ , ಹೆಚ್ಚು ಅನುಕೂಲ ಆಯಿತು ಎಂದು ವಿವರಿಸಿದರು.

ತಾಯಿ ಆನೆ ಮತ್ತು ಇತರ ಆನೆಗಳು ಮರಿ ಆನೆಯನ್ನು ಕೂಗುವುದನ್ನು ಕೇಳಿದೆ.ನಿಜಕ್ಕೂ ಅದು ತುಂಬಾ ಆಪ್ಯಾಯಮಾನ ಆಗಿತ್ತು.ಸ್ವಲ್ಪ ಸುಧಾರಿಸಿದ ಆನೆಯ ಹೆಚ್ಚಿನ ಚಿಕಿತ್ಸೆಗಾಗಿ , ಆಸ್ಪತ್ರೆಗೆ ಸೇರಿಸಿ , ಗುಣಮುಖವಾದ ಮೇಲೆ ಕಾಡಿಗೆ ಬಿಟ್ಟಿದ್ದೀವಿ.ಮತ್ತೆ ಅದು ತನ್ನ ಕುಟುಂಬವನ್ನು ಸೇರಿಕೊಳ್ಳುತ್ತದೆ ಎನ್ನುವ ನಂಬಿಕೆ ಇದೆ ಎಂದು ತಿಳಿಸಿದರು.


ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು