ನೈಟ್ ಕರ್ಫ್ಯೂಯಿಂದ ಕರೋನಾ ನಿಯಂತ್ರಣಕ್ಕೆ ಬರುತ್ತಾ ?


ಸರ್ಕಾರ ನೈಟ್ ಕರ್ಫ್ಯೂ ಜಾರಿಗೆ ತಂದಿರುವುದರ ಬಗ್ಗೆ ವಿಶ್ಲೇಷಣೆ

ನೈಟ್ ಕರ್ಫ್ಯೂಯಿಂದ ಕರೋನಾ ನಿಯಂತ್ರಣಕ್ಕೆ ಬರುತ್ತಾ ?

ಕರೋನಾ ಮಹಾಮಾರಿ ವಿಶ್ವಾದ್ಯಂತ ಆತಂಕ ಸೃಷ್ಟಿಸಿದೆ.ಎರಡನೇ ಅಲೆ ಮತ್ತು ಪರಿವರ್ತನೆಗೊಂಡ ಕರೋನಾ ವೈರಸ್ ಬಗ್ಗೆ ಇಡೀ ವಿಶ್ವವೇ ಭಯಬಿದ್ದಿದೆ.

ಬ್ರಿಟನ್ ಪ್ರಧಾನಿಯ ಆತಂಕ

ಪರಿವರ್ತನೆಗೊಂಡ ಕರೋನಾ ವೈರಸ್ ನಿಯಂತ್ರಿಸಲು ತುಂಬಾ ಕಷ್ಟವಾಗುತ್ತಿದೆ ಎಂದು ಬ್ರಿಟನ್ ಪ್ರಧಾನಿ ಹೇಳಿರುವುದು ವಿಶ್ವವೇ ಆತಂಕ ಪಡಲು ಕಾರಣವಾಗಿದೆ.ಈ ಸುಧಾರಿತ ಕರೋನಾ ವೈರಸ್ ಹರಡುವ ವೇಗದ ಸಾಧ್ಯತೆ ಹೆಚ್ಚು ಎಂಬ ತಜ್ಞರ ಸಲಹೆ ಮೇರೆಗೆ , ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಈ ಹೇಳಿಕೆ ನೀಡಿದ್ದಾರೆ.

ನೈಟ್ ಕರ್ಫ್ಯೂ ಯಿಂದ ಕರೋನಾ ನಿಯಂತ್ರಣಕ್ಕೆ ಬರುತ್ತದೆಯೇ ?

ಕರೋನಾ ಹೊಸ ಅವತಾರ ತಾಳುತ್ತಿದ್ದು , ಮುಂಬರುವ ಅಪಾಯಗಳನ್ನು ಎದುರಿಸಲು , ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.ಈಗ ಸರ್ಕಾರ ಜನವರಿ 2 ರವರೆಗೆ, ನೈಟ್ ಕರ್ಫ್ಯೂ ಜಾರಿಗೆ ತಂದಿದ್ದಾರೆ.ಆದರೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ನಿಯಂತ್ರಿಸಲಾಗದೇ , ಕೇವಲ ರಾತ್ರಿ ಮಾತ್ರ ನಿಯಂತ್ರಿಸೋಕೆ ಹೇಗೆ ಸಾಧ್ಯ ? ಎಂದು ಜನಸಾಮಾನ್ಯರಲ್ಲಿ ಉಂಟಾಗಿರುವ ಅನುಮಾನಗಳಿಗೆ ತಜ್ಞರೇ ಉತ್ತರಿಸಬೇಕು.

ಈ ಕಾರಣಗಳಿರ ಬಹುದು 

1 ) ನೈಟ್ ಕರ್ಫ್ಯೂ ಜಾರಿಗೆ ಬಂದರೆ , ಜನರಲ್ಲಿ ಕರೋನಾ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಬಹುದು.ಈಗ ಕರೋನಾ ಬಗ್ಗೆ ನಿರ್ಲಕ್ಷ್ಯ ಮನೋಭಾವ ಹೆಚ್ಚುತ್ತಿರುವುದರಿಂದ ,ಕರೋನಾ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಸರ್ಕಾರ ಪರೋಕ್ಷವಾಗಿ ಉತ್ತೇಜಿಸಿದಂತೆ ಆಗುತ್ತದೆ.

2 ) ಚಳಿ ಹೆಚ್ಚಾಗಿರುವುದರಿಂದ , ರಾತ್ರಿ ಕರೋನಾ ವೈರಸ್ ಹರಡುವ ವೇಗ ಅಧಿಕ . ಹಾಗಾಗಿ ನೈಟ್ ಕರ್ಫ್ಯೂ ಜಾರಿಗೆ ತಂದಿರಬಹುದು.

3 ) ಹೊಸ ವರ್ಷ ಯಾವುದೇ ಸಾಮಾಜಿಕ ಅಂತರವಿಲ್ಲದೇ , ಮಾಸ್ಕ್ ಇಲ್ಲದೇ , ಮಧ್ಯಪಾನಿಗಳಾಗಿ ,ಕರೋನಾ ಆತಂಕವನ್ನು ಹೆಚ್ಚಿಸುವ ಸಾಧ್ಯತೆ ಇರುವುದರಿಂದ ,ಈ ನೈಟ್ ಕರ್ಫ್ಯೂ ಜಾರಿಗೆ ತಂದಿರಬಹುದು.

4) ಬ್ರಿಟನ್ ನಿಂದ ರಾಜ್ಯಕ್ಕೆ 2500 ಕ್ಕೂ ಹೆಚ್ಚು ಪ್ರಯಾಣಿಕರು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.ಆಗಿದ್ದರೆ ಬೆಳಿಗ್ಗೆ ಕೂಡ ಅಪಾಯವೇ ಎನ್ನುವುದು ಸಾರ್ವಜನಿಕರ ಅಭಿಪ್ರಾಯ..ಆದರೆ ಈಗಾಗಲೇ , ಲಾಕ್ ಡೌನ್ ನಿಂದ ಸಾಕಷ್ಟು ಹೊಡೆತ , ತಿಂದಿರುವ ಸರ್ಕಾರ ಪೂರ್ತಿ ಲಾಕ್ ಡೌನ್ ಘೋಷಿಸುವ ಸ್ಥಿತಿಯಲ್ಲಿ ಇಲ್ಲ 

ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು