ಪ್ರೀತಿ ಮಾಯೆ ! ಹುಷಾರು

ಹದಿಹರೆಯದ ಹುಡುಗರಿಗೆ ಕಾಡುವ ವೈರಸ್..ಈ ಪ್ರೀತಿ


ಪ್ರೀತಿ ಮಾಯೆ ! ಹುಷಾರು 

ಪ್ರೀತಿ , ಪ್ರೇಮ ,ಪ್ರಣಯ...ವಯಸ್ಸಿನ ಪ್ರಭಾವ , ಸಿನಿಮಾ , ಸಾಮಾಜಿಕ ಜಾಲತಾಣ, ಹೀಗೆ ಹಲವು ರೀತಿಯಲ್ಲಿ ಹದಿಹರೆಯದ ಹುಡುಗ ಅಥವಾ ಹುಡುಗಿಯರಲ್ಲಿ ಸಾಮಾನ್ಯವಾಗಿರುವ ಮೂಡುವ ಒಂದು ರೀತಿಯ ಭಾವನೆ ಆಗಿದೆ.

ಪ್ರೀತಿ ಕೆಟ್ಟದ್ದೇ ?

ಒಂದು ಪರಿಶುದ್ಧವಾದ ಪ್ರೀತಿ ಅಮೂಲ್ಯವಾದುದು .ಪ್ರೀತಿ ಮಾಡುವುದು ಕೆಟ್ಟದ್ದಲ್ಲ , ಪ್ರೀತಿಯಿಂದ ಮೋಸ ಹೋಗುವುದು ತಪ್ಪು... ಪ್ರೀತಿಗೋಸ್ಕರ ಸಾಯುವುದು ತಪ್ಪು.. ಹೃದಯ ನೋಡಿ ಪ್ರೀತಿ ಬರುತ್ತೆ ಎಂಬುದು ನಿಜ ಆದರೂ ,ವಿವೇಕ ಇಲ್ಲದೇ ಪ್ರೀತಿ ಮಾಡಿದರೆ ,ಜೀವನ ಎಲ್ಲಾ ಅನುಭವಿಸಬೇಕಾಗುತ್ತದೆ.

ಪ್ರೀತಿಯಲ್ಲಿ ಅವನೇ ರಾಜಕುಮಾರ / ಅವಳೇ ರಾಜಕುಮಾರಿ 

ಮದುವೆಯಾಗಿ , ಎರಡು ವರ್ಷ ಕಳೆದ ಮೇಲೆ ಮೇಲಿನ ಮಾತು , ಹೇಳಿದಾಗ, ಆ ದಂಪತಿಗಳು ಆದರ್ಶ ದಂಪತಿಗಳು...ನಾವು ಒಂದೇ ಒಂದು ಸಲ ಜಗಳ ಆಡಿಲ್ಲ ಎಂದವರು ಮಾತ್ರ ದೇವಾಂಶ ಸಂಭೂತರು... ನೀವು ಬೇರೆ ಮನೆಯಲ್ಲಿ ಇರುತ್ತೀರಾ ... ನಿಮ್ಮ ಜೊತೆಗಾರ / ಜೊತೆಗಾತಿ ಬೇರೆ ಮನೆಯಲ್ಲಿ ಇರುತ್ತಾಳೆ.ಮದುವೆ ಆದ ಮೇಲೆ ಒಂದೇ ಮನೆಯಲ್ಲಿ ಇರುತ್ತೀರಾ...ಆಗ ಸ್ವಲ್ಪ ದಿನ ಆದ ಮೇಲೆ ಜಗಳ ಶುರು ಆಗುತ್ತದೆ.ಆಗ ಜೀವನ ಹೊಂದುಕೊಂಡು ಹೋಗುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ.ದೊಡ್ಡವರು ಮದುವೆ ಮಾಡಿದ್ದರೆ , ಹಿರಿಯರು ಬಂದು ರಾಜಿ ಮಾಡುತ್ತಾರೆ.. ಸಮಾಧಾನ ಮಾಡುತ್ತಾರೆ...ನಾವೇ ಲವ್ ಮಾಡಿ ಮದುವೆ ಆಗಿದ್ದರೆ , ನಿನ್ನದೇ ಸೆಲೆಕ್ಷನ್ ಅನುಭವಿಸು ,ಅಂತಾ ಮುಖಕ್ಕೆ ಉಗೀತಾರೆ .. ಅವಾಗ ನಮ್ಮ ಜೀವನ ನಾವೇ ಸರಿ ಮಾಡಿಕೋ ಬೇಕು... ಅಪ್ಪ ಅಮ್ಮ ಒಳ್ಳೆಯವರಾದರೆ,ಈ ಸಮಸ್ಯೆ ಬರೋದಿಲ್ಲ.

ಕೊನೆಯ ಮಾತು

ಪ್ರೀತಿ ಮಾಡುವುದು ತಪ್ಪಲ್ಲ..ಪ್ರೀತಿ ಮಾಡಿದ ಮೇಲೆ ಪ್ರೀತಿ ಪಡೆದುಕೊಳ್ಳಿ... ಸಿಗಲಿಲ್ಲ ಎಂದರೆ ಆ ಹುಡುಗ / ಹುಡುಗಿ ಚೆನ್ನಾಗಿ ಇರಲಿ ಎಂದು ತ್ಯಾಗ ಮಾಡಿ...ಈ ಜೀವನ ಎಂಬ ರೈಲಿನಲ್ಲಿ ಹಲವಾರು ಪ್ರಯಾಣಿಕರು ಹತ್ತುತ್ತಾರೆ ಮತ್ತು ಇಳಿಯುತ್ತಾರೆ...ಹತ್ತಿದ್ದಾಗ ಸ್ನೇಹಿತರಾಗುತ್ತಾರೆ.ಅವರು ಇಳಿಯುವಾಗ ,ನಾವು ಇಳಿಯೋಕೆ ಆಗೋಲ್ಲ ...ಏಕೆ ಅಂದರೆ ನಮ್ಮ ನಿಲ್ದಾಣ ಇನ್ನೂ ಬಂದಿರೋದಿಲ್ಲ ...ಪ್ರಯಾಣ ಮುಂದುವರೆಸಿ...

ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು