ರೈತ ಸಂಘಟನೆಗಳಿಗೆ ಆಮೇರಿಕಾದ ಏಳು ಶಾಸಕರ ಸಾಥ್

ರೈತರ ಪ್ರತಿಭಟನೆಗೆ ಅಮೇರಿಕಾದ ಶಾಸಕರು 


ವಿವಾದಿತ ಕೃಷಿ ಮಸೂದೆಯ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವ ಸಂಘಟನೆಗಳ ಪ್ರತಿಭಟನೆಗೆ 7 ಪ್ರಭಾವಿ ಶಾಸಕರು ,ಬೆಂಬಲ ನೀಡಿದ್ದಾರೆ.ಭಾರತೀಯ ಅಮೇರಿಕನ್ ಕಾಂಗ್ರೆಸ್ ವುವೆನ್ ಪ್ರಮೀಳಾ ಜಯಪಾಲ್ ಸಹಿತ ,ಆಮೇರಿಕಾದ ಏಳು ಪ್ರಭಾವಿ ಶಾಸಕರ ಗುಂಪು , ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊಗೆ ಪತ್ರ ಬರೆದಿದ್ದಾರೆ.ಅದರ ಮುಖ್ಯಾಂಶಗಳು ಈ ರೀತಿ ಇದೆ.
" ಆಮೇರಿಕಾದಲ್ಲಿರುವ ಎಷ್ಟೋ ಭಾರತೀಯರಿಗೆ  , ಭಾರತದಲ್ಲಿ ಜಾರಿಗೆ ತಂದಿರುವ ನೂತನ ಮಸೂದೆಯಿಂದ , ಹಲವಾರು ಸಮಸ್ಯೆಗಳು ತಂದು ಕೊಡುತ್ತದೆ.ಏಕೆಂದರೆ ಅಮೇರಿಕಾದಲ್ಲಿ ವಾಸಿಸುತ್ತಿರುವ ,ಪ್ರಜೆಗಳ ಸಂಬಂಧಿಕರು ಮತ್ತು ಅವರ ಜಾಮೀನುಗಳು ,ಅಲ್ಲಿರುವುದರಿಂರ ಇದು ಆಮೇರಿಕಾದ ಭಾರತೀಯರ ಸಮಸ್ಯೆ ಎಂದು ತಿಳಿದು ,ತಾವು ಭಾರತದ ಜೊತೆಗೆ ಮಾತನಾಡಬೇಕೆಂದು ಒತ್ತಾಯಿಸಿದ್ದಾರೆ.ಭಾರತದ ಪ್ರತಿರೂಪದಂತೆ  ಭಾರತಕ್ಕೆ ಸಲಹೆಗಳನ್ನು ನೀಡಬಹುದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಭಾರತದ ಪ್ರತಿಕ್ರಿಯೆ


ರೈತರ ಪ್ರತಿಭಟನೆಗಳಿಗೆ , ಆಮೇರಿಕಾದ ನಾಯಕರುಗಳ ಹೇಳಿಕೆಗಳನ್ನು ಭಾರತವು ' 'ಅನಪೇಕ್ಷಿತ' ಮತ್ತು 'ಅನಗತ್ಯ ' ಎಂದು ಕರೆದಿದೆ.ಈ ವಿಷಯವು ಪ್ರಜಾಪ್ರಭುತ್ವ ರಾಷ್ಟ್ರದ ಆಂತರಿಕ ವ್ಯವಹಾರಗಳಿಗೆ ಸಂಬಂಧಿಸಿದೆ.ನಾವು ವಿದೇಶಿಯರ ಹೇಳಿಕೆಗಳನ್ನು ಗಮನಿಸುತ್ತಿದ್ದೀವಿ.ಆದರೆ ಈ ಹೇಳಿಕೆಗಳು ಅನಗತ್ಯ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಅನುರಾಗ್ ಶ್ರೀವಾಸ್ತವ್ ಈ ತಿಂಗಳ ಆರಂಭದಲ್ಲಿಯೇ ಹೇಳಿದ್ದಾರೆ ಎಂದು ಭಾರತ ಪ್ರತಿಕ್ರಿಯಿಸಿದೆ.


ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು