ಜನವರಿ 1 ಜಾಗತಿಕ ಕುಟುಂಬ ದಿನ



ಏನಿದು ಈ ದಿನದ ಮಹತ್ವ


ಒಂದೇ ಮಾತಿನಲ್ಲಿ ಹೇಳುವುದಾದರೆ , ಕುಟುಂಬವಾಗಿ ,ಹೊಸ ದಿನ ಆಚರಿಸುವ ದಿನ.1997 ನವೆಂಬರ್ ನಲ್ಲಿ ಈ ದಿನವನ್ನು ವಿಶ್ವ ಸಂಸ್ಥೆಯು ವಿಶ್ವ ಕೌಟುಂಬಿಕ ದಿನ ಎಂಬುದಾಗಿ ಆಚರಣೆಗೆ ತರಲು ಬಹುತೇಕ ದೇಶಗಳ ಸಮ್ಮತಿ ಯೊಂದಿಗೆ ಜಾರಿಗೆ ತಂದಿತು.ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟು ಜನರು ಈ ದಿನವನ್ನು ' ಶಾಂತಿ ದಿನ 'ಎಂದು ಆಚರಿಸುತ್ತಿದೆ.
ಒಬ್ಬ ಮನುಷ್ಯನ ಬೆಳವಣಿಗೆ ಮತ್ತು ಅವನತಿ ಆ ಕುಟುಂಬದ ಮೇಲೆ ನಿಂತಿದೆ.ಕುಟುಂಬ ಎಂದರೆ ಅದು ಭಾವಾನಾತ್ಮಕ ಸಂಬಂಧ , ಕುಟುಂಬ ಎಂದರೆ ಒಂದು ಶಕ್ತಿ .ಕುಟುಂಬ ಎಂದರೆ ಸಂತೋಷ , ಕುಟುಂಬ ಎಂದರೆ ಮರೆಯಲಾಗದ ಸಿಹಿ ಕಹಿ ನೆನಪುಗಳು .. ಒಟ್ಟಿನಲ್ಲಿ ಒಂಟಿಯಾಗಿರದ ಮನುಷ್ಯ ಸಾಮೂಹಿಕವಾಗಿ ಬದುಕಲು ಆರಂಭಿಸಿದಾಗ , ಹುಟ್ಟಿದ ವ್ಯವಸ್ಥೆ ಕುಟುಂಬ ...ಹೊಸ ವರ್ಷ ಒಂದೇ ಕುಟುಂಬದ ಸದಸ್ಯರು ಒಟ್ಟಾಗಿ ಸೇರಿ , ಹೊಸ ಘೋಷಣೆ , ಹೊಸ ಸಂತಸ ವಿನಿಮಯ , ಹೊಸ ಆನಂದ ಅನುಭವಿಸುವ ದಿನ

ಭಾರತದಲ್ಲಿ ಈ ದಿನಕ್ಕೆ ಮಹತ್ವ ಬೇಕಾ ? 


ಭಾರತೀಯ ಕುಟುಂಬಗಳಿಗೂ ,ಹಲವು ವಿದೇಶಿ ಕುಟುಂಬಗಳ ಮಧ್ಯೆ ತುಂಬಾ ವ್ಯತ್ಯಾಸ ಇದೆ.ಭಾರತೀಯರ ಕುಟುಂಬ ವ್ಯವಸ್ಥೆ ತುಂಬಾ ಬಲಿಷ್ಠ ಆಗಿದೆ .ಆದರೆ ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬ ಕಡಿಮೆ ಆಗುತ್ತಾ ,ಅಣು ಕುಟುಂಬ ಜಾಸ್ತಿ ಆಗುತ್ತಾ ಇದೆ.ಅಪ್ಪ ಅಮ್ಮ ವೃದ್ಧಾಶ್ರಮಕ್ಕೆ ಸೇರಿಸುವ ಪ್ರವೃತ್ತಿ ಹೆಚ್ಚುತ್ತಿದೆ.ಹೀಗೆ ಮುಂದುವರೆದರೆ,
ಮುಂದೆ ಈ ದಿನ ಭಾರತೀಯರಿಗೆ ಅತ್ಯಂತ ಅವಶ್ಯಕ ಆಗಬಹುದು .


ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು