ಕರೋನಾ ಮತ್ತು ಶಿಕ್ಷಣ


ಕರೋನಾದಲ್ಲಿ  ಶಿಕ್ಷಣ ಮುಖ್ಯನಾ ? ಆರೋಗ್ಯ ಮುಖ್ಯನಾ ?


ಪ್ರಪಂಚಾದ್ಯಂತ  ಕರೋನಾಮಯ ಆಗಿತ್ತು.ಈಗ ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಬರುತ್ತಿದೆ ಎನ್ನುವಷ್ಟರಲ್ಲಿ , ಬ್ರಿಟನ್ ವೈರಸ್ ಭಯ ಕಾಡುತ್ತಿದೆ.ಕೆಲವರು ಇದೊಂದು ದಂಧೆ ಎಂದೂ ಆರೋಪಿಸಿದರೂ, ಪ್ರಪಂಚಾದ್ಯಂತ ಕರೋನಾ ಭಯ ಇರುವುದಂತೂ ಸತ್ಯ.ಅದಕ್ಕೆ ಉದಾಹರಣೆ ಎಂದರೆ , ಜರ್ಮನಿ , ನೆದರ್ಲೆಂಡ್ , ಟರ್ಕಿಯಲ್ಲಿ ಇನ್ನೂ , ಲಾಕ್ ಡೌನ್ ಜಾರಿಯಲ್ಲಿದೆ.ಹಲವು ದೇಶಗಳು ಹೊಸ ವರ್ಷದ ಸಂಭ್ರಮಾಚರಣೆಗೆ , ನಿರ್ಬಂಧ ಹೇರಿತ್ತು.

ಪೋಷಕರ ಆತಂಕ


ನನಗೆ ಏನಾದರೂ ಪರವಾಗಿಲ್ಲ, ನನ್ನ ಮಕ್ಕಳಿಗೆ ಏನು ಆಗಬಾರದು ಎಂಬುದು ಪೋಷಕರ ಸಹಜ ಅಭಿಪ್ರಾಯ . ಒಂದು ಕಡೆ ಶಿಕ್ಷಣ , ಒಂದು ಕಡೆ ಕರೋನಾ,ಇವೆರಡರ ನಡುವೆ ಯಾವ ರೀತಿ ತೀರ್ಮಾನ ತೆಗೆದುಕೊಳ್ಳುವುದು ಎಂದು ಬಹುತೇಕ ಪೋಷಕರಿಗೆ ತಿಳಿಯುತ್ತಿಲ್ಲ.ಸಮಾಜಿಕ ಅಂತರ ಮತ್ತು ಮಾಸ್ಕ್ ಶಾಲೆಗಳಲ್ಲಿ ಪಾಲಿಸುತ್ತಾರಾ ಎನ್ನುವ ಭಯ... ಸರ್ಕಾರ ಕಡ್ಡಾಯ ಹಾಜರಾತಿ ಇಲ್ಲ ಎಂದಿದೆ ಆದರೆ ಎಲ್ಲರೂ ಹೋಗಬೇಕಾದರೆ , ತನ್ನ ಮಕ್ಕಳು ಹೋಗದೆ ಇರುವುದು ಹೇಗೆ ‌? ಎನ್ನುವ ಭಯ ... ಒಟ್ಟಿನಲ್ಲಿ ಬಿಸಿ ತುಪ್ಪದಂತೆ ಉಗುಳುವುದು ಕಷ್ಟ ... ನುಂಗುವುದು ಕಷ್ಟ

 ಶಾಲೆಗಳು


ಸಾಮಾಜಿಕ ಅಂತರ ಮತ್ತು ಮಾಸ್ಕ್ ಕಡ್ಡಾಯ ಮಾಡುತ್ತೇವೆ ಅನ್ನುತ್ತಾರೆ ಆದರೆ , ಅಷ್ಟು ಮಕ್ಕಳನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯನಾ ? ಅದು ಹೇಗೆ ‌ಸಾಧ್ಯ ? ಎಂಬುದನ್ನು ಕಡ್ಡಾಯವಾಗಿ ಪೋಷಕರಿಗೆ ನಂಬಿಕೆ ಉಂಟಾಗುವಂತೆ ಮಾಡಬೇಕು.ಏಕೆಂದರೆ ಸೀಮಿತ ಸಿಬ್ಬಂದಿ , ಮಕ್ಕಳ ಪ್ರತಿಯೊಂದು ಚಲನವಲನದ ಮೇಲೆ ನಿಗಾ ಇರಿಸಬೇಕು.ಕರೋನಾ ಅಕಸ್ಮಾತ್ ಬಂದರೆ , ಮಕ್ಕಳನ್ನು ಹೇಗೆ ರಕ್ಷಿಸಬೇಕು ಎನ್ನುವುದರ ಬಗ್ಗೆ ಶಾಲೆಗಳ ಯೋಜನೆಗಳೇನು ? ಎಂಬುದರ ಮಾಹಿತಿಯನ್ನು ಸರ್ಕಾರ ಮತ್ತು ಪೋಷಕರಿಗೆ ತಿಳಿಸಿದಾಗ , ಮಾತ್ರ ಪೋಷಕರು ನೆಮ್ಮದಿಯಾಗಿ ಇರಲು ಸಾಧ್ಯ

ಸರ್ಕಾರ


ಶಾಲೆಗಳಲ್ಲಿ ತೊಂದರೆ ಆದರೆ , ಭಾರತದಲ್ಲಿ ನೇರವಾಗಿ ,ಸರ್ಕಾರದ ಜೊತೆ ಸಂವಾದ ನಡೆಸುವುದು ಇಂದಿಗೂ ಕೂಡ ಮರೀಚಿಕೆ ಆಗಿದೆ.
ಶಾಲೆಗಳಲ್ಲಿ ಏನಾದ್ರೂ ಅವ್ಯವಸ್ಥೆ ಆದರೆ , ಸಾಮಾನ್ಯವಾಗಿ ಪೋಷಕರು ಪ್ರಶ್ನಿಸಲು ಆಗದೇ , ಅನುಭವಿಸಲು ಆಗದೇ ಒದ್ದಾಡುವ ಪರಿಸ್ಥಿತಿ ಬಂದರೆ ,ಅಂತಹ ಪೋಷಕರಿಗಾಗಿ ಸರ್ಕಾರ ಒಂದು ಹೆಲ್ಪ್ ಲೈನ್ ಸೌಲಭ್ಯ ಕಲ್ಪಿಸಬೇಕು.ಸಾಮಾನ್ಯವಾಗಿ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಕೆಲವು ಪೋಷಕರು ಶಾಲೆಗಳನ್ನು ಪ್ರಶ್ನಿಸಲು ಸಾಧ್ಯವಾಗುವುದಿಲ್ಲ.ಹಾಗಾಗಿ ಪೋಷಕರ ಸಲಹೆಗಳು , ದೂರುಗಳಿಗೆ ಹೆಲ್ಪ್ ಲೈನ್ ಸೌಲಭ್ಯ ಅತಿ ಅವಶ್ಯಕ.ಇಲ್ಲಿ ಪೋಷಕರು ಮತ್ತು ಮಕ್ಕಳ ಹೆಸರನ್ನು ಕಡ್ಡಾಯವಾಗಿ ಗೋಪ್ಯವಾಗಿ ಇಡಬೇಕು.ಕೆಲವು ಸಲ ದುರುಪಯೋಗ ಕೂಡ ಆಗಬಹುದು.ಹಾಗಾಗಿ
ಸ್ವತಂತ್ರ ತನಿಖೆಯ ಮೂಲಕ ಸತ್ಯಾಸತ್ಯತೆ ಪರಿಶೀಲಿಸಿ , ಶಿಸ್ತು ಕ್ರಮ ತೆಗೆದುಕೊಳ್ಳಬೇಕು.

ಶಿಕ್ಷಣ ಒಂದು ಮಗುವಿಗೆ ಎಷ್ಟು ಮುಖ್ಯವೋ , ಆರೋಗ್ಯ ಅದರ ಎರಡರಷ್ಟು ಮುಖ್ಯ . ಶಾಲೆಗಳು ಮತ್ತು ಸರ್ಕಾರ ಈ ವಿಷಯದಲ್ಲಿ , ತುಂಬಾ ಮುತುವರ್ಜಿ ವಹಿಸುತ್ತಿದ್ದೀವಿ ಎಂದು ಹೇಳುತ್ತಿದೆ.ಆದರೂ ಪೋಷಕರಿಗೆ ಭಯ , ಆತಂಕಗಳು ಇನ್ನೂ ಅಗೋಚರ ವಾಗಿದೆ. ಅದನ್ನು ದೂರಮಾಡುವ ಕೆಲಸಗಳು ಇನ್ನಷ್ಟು ಆಗಬೇಕಿದೆ.
ಇದರಿಂದ, ಸರ್ಕಾರ , ಶಾಲೆಗಳು ತೆಗೆದುಕೊಳ್ಳುವ ಮುನ್ನೆಚ್ಚರಿಕೆ ಕ್ರಮಗಳು ಪೋಷಕರ ನೆಮ್ಮದಿಗೆ ಕಾರಣವಾಗುತ್ತದೆ.ಇದರಿಂದ ಶಾಲೆಗಳಿಗೆ‌ ಮತ್ತು ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ.

... ನನ್ನ ಅಭಿಪ್ರಾಯ ನಿಮ್ಮ ಅಭಿಪ್ರಾಯ ಕೂಡ ಆಗಿದ್ದದರೆ ,  ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ... ಸಲಹೆಗಳು ಇದ್ದರೆ, ಕಾಮೆಂಟ್ ‌ಮಾಡಿ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು