ಭಾರತದಲ್ಲಿ ಕುಸಿದ ಕರೋನಾ ಸಾವಿನ ಸಂಖ್ಯೆ

ಭಾರತದಲ್ಲಿ ಕುಸಿದ ಕರೋನಾ ಸಾವಿನ ಸಂಖ್ಯೆ


ಕರೋನಾ ಎಂಬ ವೈರಸ್ ,ಇಡೀ ವಿಶ್ವದಲ್ಲಿ ಸಾವು ನೋವುಗಳು , ಉದ್ಯೋಗ ,ಆದಾಯ , ವ್ಯಾಪಾರ ಎಲ್ಲವನ್ನೂ ಕಸಿದುಕೊಂಡಿತು.ಈ ವೈರಸ್ ಇಡೀ ವಿಶ್ವವನ್ನು ಈಗಲೂ ಭಯದಲ್ಲಿ ಇರುವಂತೆ ಮಾಡಿದೆ.ಬೃಹತ್ ಜನಸಂಖ್ಯೆಯ ಭಾರತದಲ್ಲಿ ಕರೋನಾ ವೈರಸ್ ನಿಂದ ಆಪಾರ ಸಾವು ನೋವು ಸಂಭವಿಸಿದ್ದು , ಈಗಲೂ ತನ್ನ ಅಟ್ಟಹಾಸ ಮೆರೆಯುತ್ತಿದೆ .ಆದರೆ ಇದರಲ್ಲಿ ಒಂದು ಸಂತೋಷದ ಸಂಗತಿ ಎಂದರೆ ,ಬ್ರಿಟನ್ ನಿಂದ ಬಂದ ಕರೋನಾ ,ಹೊಸ ಅವತಾರದ ವೈರಸ್  ಹೊಸ ಭಯದ ನಡುವೆಯೂ, ದೇಶದಲ್ಲಿ
ಕರೋನಾದಿಂದ ಆಗುತ್ತಿದ್ದ ಸಾವು ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿದೆ.

ಅತಿ ಕಡಿಮೆ ಪ್ರಕರಣ


ಜೂನ್ 1 ರ‌ ನಂತರ ,ಇದೇ ಮೊದಲ ಬಾರಿಗೆ,ಹೊಸ ಪ್ರಕರಣಗಳ ಸಂಖ್ಯೆ 18153, ಗೆ ಇಳಿದಿದೆ.ಸಾವಿನ ಸಂಖ್ಯೆ ಕನಿಷ್ಠ 216 ಗೆ ಇಳಿದಿದೆ.

ಯಾವ ರಾಜ್ಯದಲ್ಲಿ ಎಷ್ಟೆಷ್ಟು ?


ಮಹಾರಾಷ್ಟ್ರದಲ್ಲಿ 51 ಕರೋನಾ ಸಾವು ಸಂಭವಿಸುವುದೊಂದಿಗೆ,ಅತಿ ಹೆಚ್ಚು ಪ್ರಕರಣ ದಾಖಲಿಸಿದೆ.ಎರಡನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳ 28 , ಕೇರಳದಲ್ಲಿ 21 , ಪಂಜಾಬ್ ನಲ್ಲಿ 15 ಸಾವು, ದೆಹಲಿಯಲ್ಲಿ 14 ಸಂಭವಿಸಿದೆ.


ಪರೀಕ್ಷೆಯಲ್ಲಿ ಕಡಿತ


ಹೊಸ ವರ್ಷದ ದಿನದಂದು ಪರೀಕ್ಷೆಯಲ್ಲಿ ತೀವ್ರ ಕುಸಿತದಿಂದಾಗಿ.  ದೇಶಾದ್ಯಂತ ಶುಕ್ರವಾರ 8.3 ಲಕ್ಷಕ್ಕಿಂತ ಕಡಿಮೆ ಪರೀಕ್ಷೆಗಳು ನಡೆದಿದ್ದು, ಹಿಂದಿನ ದಿನಕ್ಕಿಂತ 2.3 ಲಕ್ಷ ಕಡಿಮೆಯಾಗಿದೆ.
 ಹೊಸ ಪ್ರಕರಣಗಳಲ್ಲಿ ಸ್ಥಿರವಾದ ಕುಸಿತದ ಜೊತೆಗೆ, ಸೆಪ್ಟೆಂಬರ್ 18 ರಂದು 1,244 ಸಾವುನೋವುಗಳು ದಾಖಲಾದ ದಿನಗಳಿಂದ ದಿನಕ್ಕೆ ಗರಿಷ್ಠ ಸಂಖ್ಯೆಯಲ್ಲಿ ಏರಿದ ನಂತರ ಭಾರತವು ವೈರಸ್‌ನಿಂದ ಕಡಿಮೆ ಸಾವುಗಳನ್ನು ವರದಿ ಮಾಡಿದೆ.


ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು