ಇತ್ತ ಹೆಂಡ್ತಿ ಅತ್ತ ಅಪ್ಪ ಅಮ್ಮ


ಅಪ್ಪ ಅಮ್ಮ ಮತ್ತು ಹೆಂಡತಿ


ಬೆಳೆಯುವವರೆಗೂ , ಅಪ್ಪ ಅಮ್ಮ...ಬೆಳೆದ ಮೇಲೆ ಹೆಂಡತಿ .. ಯಾವುದು ಆಯ್ಕೆ ಸರಿ...ಯಾವ ಆಯ್ಕೆ ತಪ್ಪು...ಈ ಪ್ರಪಂಚವೇ ಗೊಂದಲದಲ್ಲಿದೆ.

ಅಪ್ಪ ಅಮ್ಮ (  ಭಾಗ 1 )


ಹುಟ್ಟಿದಾಗಿನಿಂದ ಸಾಕಿರುತ್ತಾರೆ.ಈಗ ಯಾರೋ ಬಂದ್ರೂ ಅಂತಾ ,ಮಗನ ಮೇಲೆ ಅಧಿಕಾರನಾ ತ್ಯಾಗ ಮಾಡೋದು ಕಷ್ಟ ... ಎಲ್ಲಾದಕ್ಕೂ ಮಗನಿಗೆ ಹೇಳ್ತಾ ಇದ್ದ ಅಮ್ಮ ಅಥವಾ ಅಪ್ಪ ... ಇವಾಗ ಸೊಸೆ ಹತ್ರಾನೂ ಹೇಳಬೇಕು ಅವಳ ಅಭಿಪ್ರಾಯ ತಗೋಬೇಕು... ಅವಳು ಚಿಕ್ಕೋಳು ...ಅದೇ ಸಲುಗೆಯಿಂದ ನಮ್ಮನ್ನು ಕೀಳಾಗಿ ನೋಡಿದರೆ ,ಅನ್ನೋ ಆತಂಕ 

ಅಪ್ಪ ಅಮ್ಮ ( ಭಾಗ 2 )


ಸೊಸೆ ನಾ ಒಂದು ರೀತಿ ನೋಡೋದು ,ಮಗಳನ್ನ ಇನ್ನೊಂದು ರೀತಿ ನೋಡೋದು... ನೆಂಟರಿಷ್ಟರಲ್ಲಿ ಸೊಸೆ ನಾ ಬಿಟ್ಟು ಕೊಡೋದು... ಅವರು ಎಷ್ಟೇ ಮಾಡಿದ್ರೂ ,ಗುರುತಿಸದೇ ಇರೋದು... ಮಗಳಿಗೆ ಜಾಸ್ತಿ ಪ್ರಾಧಾನ್ಯತೆ ಕೊಡೋದು...

ಅಪ್ಪ ಅಮ್ಮ ( ಭಾಗ 3 )


ಸೊಸೆ ನಾ ಮಗಳ ತರಾ ನೋಡಿದ್ರು ಕೂಡ , ಅಪ್ಪ ಅಮ್ಮ ಮಾತು ಕೇಳಿ, ನಾನು ಏಕೆ ಇವರ ಸೇವೆ ಮಾಡಬೇಕು ಅಂತಾ ಉದಾಸೀನ ಮಾಡೋದು... ಅಪ್ಪ ಅಮ್ಮ ,ಅವರ ತವರು ಮನೆ ಏನು ಮಾಡಿದ್ರೂ ಸರಿ...ಗಂಡ , ಅಪ್ಪ ಅಮ್ಮ ಅವರ ಮನೆಯವರು , ಏನು ಮಾಡಿದ್ರೂ ತಪ್ಪು

ಸೊಸೆ ( ಭಾಗ 1 ) 


ಹೊಸ ಜೋಡಿಗಳು , ಹೊಸ ಕನಸುಗಳು... ನನ್ನ ಫ್ರೆಂಡ್ ಅವಳ ಗಂಡ ಇಬ್ಬರೇ ಇರೋದು... ನನಗೂ ಅದೇ ಆಸೆ.. ನಾನು ನನ್ನ ಗಂಡ... ನನಗೆ ಹುಟ್ಟೂ ಮಗು... ವಯಸ್ಸಾದವರು ಇದ್ದರೆ ಯಾವಾಗಲೂ ಕಾಯಿಲೆ ,ಕಸಾಲೆ .. ಯಾರಿಗೆ ಬೇಕು ಈ ರಿಸ್ಕ್

ಸೊಸೆ ಭಾಗ - 2


ನನ್ನ ಗಂಡ ,ಅವರ ಅಪ್ಪ ಅಮ್ಮನಿಗೆ ನನ್ನ ಮೇಲೆ ಪ್ರೀತಿ ಇಲ್ಲ .. ನನ್ನ ಆಸ್ತಿ ಮೇಲೆ ನನ್ನ ವರದಕ್ಷಿಣೆ ಮೇಲೆ ಆಸೆ... ಮಗಳು ಏನು ಮಾಡಿದ್ರೂ ಸರಿ... ನಾನು ಏನು ಮಾಡಿದ್ರೂ ತಪ್ಪು... ನನ್ನ ಮಗಳು ತರ ಅವರು ನೋಡಿಕೊಂಡ್ರೆ , ನಾನು ಅಪ್ಪ ಅಮ್ಮ ತರಹ ಏಕೆ ನೋಡಿಕೊಳ್ಳೋಲ್ಲ...ಅಳಿಯ ಮಾತ್ರ ಮಗಳ ಮಾತು ಕೇಳಬೇಕು ...ಮಗ ಮಾತ್ರ ಇವರ ಮಾತು ಕೇಳಬೇಕು

ಸೊಸೆ ಭಾಗ - 3


ನನ್ನ ಅಪ್ಪ ಅಮ್ಮ ನನಗೆ ಹೆಚ್ಚು...ಅವರ ಅಪ್ಪ ಅಮ್ಮ ,ಅವರ ಫ್ಯಾಮಿಲಿ ಅಂದ್ರೆ ಇರಿಟೇಟ್ ...ಅದೇನೂ ಇಷ್ಟೇನೆ ಆಗೋಲ್ಲ... ಏನೋ ,ಮಾನ ಮರ್ಯಾದೆಗೋಸ್ಕರ ಅಡ್ಜಸ್ಟ್ ಮಾಡಿಕೊಂಡು ಹೋಗಬೇಕು ಅಷ್ಟೇ..

ಈ 6 ಸಮಸ್ಯೆಗಳಿಗೆ ಔಷಧಿ ಇನ್ನೂ ಸಿಕ್ಕಿಲ್ಲ... ಶತ ಶತಮಾನಗಳಿಂದ ,ಅತ್ತೆ ಸೊಸೆ ..ಮಗಳು ಸೊಸೆ ..ಮಾವ ಅಳಿಯ ..ಬಾವ ಭಾಮೈದ ತಂಗಿ - ಹೆಂಡ್ತಿ ಹೀಗೆ ಸಮಸ್ಯೆಗಳಿಗೆ ಪರಿಹಾರ ಇಲ್ಲ... ಹೊಂದಾಣಿಕೆ ಒಂದೇ ಸದ್ಯದ ಔಷಧಿ..

* ಎಲ್ಲಾ ಓದಿ ಒಮ್ಮೆ ನಕ್ಕುಬಿಡಿ... ಗಾಳಿ ಬಂದ ಕಡೆ ತೂರಿಕೊಂಡು , ಗೆದ್ದು ಬಿಡಿ....ತಕ್ಷಣದ ಪರಿಹಾರ

ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು