ಟ್ರಂಪ್ ಬೆಂಬಲಿಗರಿಂದ ಟ್ರಬಲ್



ಆಮೇರಿಕಾದ ಪ್ರಜಾಪ್ರಭುತ್ವಕ್ಕೆ ಆತಂಕ


ಅತ್ಯಂತ ಹಳೆಯ ಪ್ರಜಾಪ್ರಭುತ್ವದ ರಾಷ್ಟ್ರ ಅಮೇರಿಕಾ ...ಆದರೆ ಈಗ ನಡೆಯುತ್ತಿರುವ , ಬೆಳವಣಿಗೆಗಳು ಅತ್ಯಂತ ಅಸಹ್ಯ ಹುಟ್ಟಿಸುತ್ತದೆ.

ಏತಕ್ಕಾಗಿ ?



ಚುನಾವಣೆಯನ್ನು ರದ್ದುಗೊಳಿಸುವ ಮತ್ತು ಶ್ವೇತಭವನಕ್ಕೆ ಅಂಟಿಕೊಳ್ಳುವ ,ಸತತ ಪ್ರಯತ್ನ ಟ್ರಂಪ್ ಪ್ರತಿಭಟನಾಕಾರರೊಂದಿಗೆ , ನವೆಂಬರ್ ನಲ್ಲಿ ನಾವು ಗೆದ್ದಿದ್ದೇವೆ ಎಂಬ ಹೇಳಿಕೆ , ಹಿಂಸಾಚಾರ ಭುಗಿಲೆದ್ದಲು ಕಾರಣವಾಗಿದೆ.

ಏನಾಯ್ತು ? 


ಪ್ರತಿಭಟನಾಕಾರರು , ಅಧ್ಯಕ್ಷರ ಕ್ಯಾಪಿಟಲ್ ಸ್ಥಳಕ್ಕೆ ನುಗ್ಗಿದ್ದಾರೆ.ಪ್ರತಿಭಟನೆಯನ್ನು ಚದುರಿಸಲು ,ಪೋಲೀಸರು ಅಶ್ವವಾಯು  ಮತ್ತು ಕರ್ಫ್ಯೂ ಘೋಷಿಸಿದರು.ಈ ಗಲಾಟೆಯಲ್ಲಿ ಒಬ್ಬ ಮಹಿಳೆಗೆ ಗುಂಡು ತಗುಲಿದ್ದು ,ಆ ಮಹಿಳೆ ಸಾವನ್ನಪ್ಪಿದ್ದಾರೆ.

ವಿಶ್ವ ನಾಯಕರುಗಳ ಖಂಡನೆ


ಇಂಗ್ಲೆಂಡ್ ಪ್ರಧಾನಿ


ಈ ದಾಳಿ ಅಸಹನೀಯವಾಗಿದೆ . ಅಮೇರಿಕಾ ಪ್ರಜಾಪ್ರಭುತ್ವದ ಸ್ಥಾಪನೆಗಾಗಿ ವಿಶ್ವದಲ್ಲಿ ನಿಲ್ಲುವ ರಾಷ್ಟ್ರವಾಗಿದೆ . ಅಧಿಕಾರ ಶಾಂತಿಯುತವಾಗಿ ವರ್ಗಾವಣೆ ಆಗಬೇಕು.

ಸ್ಪಾನಿಷ್ ಪ್ರಧಾನಿ


ಪ್ರಜಾಪ್ರಭುತ್ವದ ಶಕ್ತಿಯ ಬಗ್ಗೆ ಎಲ್ಲರೂ ನಂಬಿಕೆ ಇರಿಸಿ.ಜೋ ಬಿಡೆನ್ ಅವರ ಹೊಸ ಅಧ್ಯಕ್ಷತೆಯು ಈ ಉದ್ವಿಗ್ನ ವಾತಾವರಣ ನಿವಾರಿಸಿ , ಅಮೇರಿಕಾದ ಜನರನ್ನು ಒಂದುಗೂಡಿಸುತ್ತದೆ. 

ಹಲವಾರು ವಿಶ್ವದ ನಾಯಕರು ಆಮೇರಿಕಾದ ಈ ಘಟನೆ ಪ್ರಜಾಪ್ರಭುತ್ವದ ಕಪ್ಪು ಚುಕ್ಕೆ ಎಂದು ವ್ಯಾಖ್ಯಾನಿಸಿದ್ದಾರೆ.

ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು