ಲಸಿಕೆಗೆ ಮೋದಿ ಹಸಿರು ನಿಶಾನೆ

ಲಸಿಕೆಗೆ ಮೋದಿ ಹಸಿರು ನಿಶಾನೆ


ವಿಶ್ವವ್ಯಾಪಿ ಹಬ್ಬಿರುವ ಈ ಕರೋನಾ ಮಹಾಮಾರಿಯನ್ನು , ತೊಲಗಿಸಲು ಭಾರತ್ ಬಯೋಟೆಕ್ ಮತ್ತು ಆಕ್ಸ್‌ಫರ್ಡ್ / ಅಸ್ಟ್ರಾಜೆನೆಕಾದ ಲಸಿಕೆಗಳಿಗೆ ಭಾರತದ ಪ್ರಧಾನಿ 
ನರೇಂದ್ರ ಮೋದಿ ಹಸಿರು ನಿಶಾನೆ ತೋರಿದ್ದಾರೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದೊಂದಿಗೆ ಅಸ್ಟ್ರಾಜೆನೆಕಾ ಮತ್ತು ಸ್ಥಳೀಯ ಸಂಸ್ಥೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಲಸಿಕೆಗೆ ಔಷಧ ನಿಯಂತ್ರಣ ಪ್ರಾಧಿಕಾರವು ಹಸಿರು ನಿಶಾನೆ ತೋರಿದೆ.

 ಪ್ರಧಾನಿ ನರೇಂದ್ರ ಮೋದಿ ಇದನ್ನು "ನಿರ್ಣಾಯಕ ತಿರುವು" ಎಂದು ಕರೆದಿದ್ದಾರೆ

ಈ ವರ್ಷ ಸುಮಾರು 30 ಕೋಟಿ ಜನರಿಗೆ ಲಸಿಕೆ ನೀಡುವ ಉದ್ದೇಶ , ಕೇಂದ್ರ ಸರ್ಕಾರಕ್ಕೆ ಇದೆ . ಇದಕ್ಕಾಗಿ 90000 ಕ್ಕೂ ಹೆಚ್ಚು , ಆರೋಗ್ಯ ಕಾರ್ಯಕರ್ತರನ್ನು ,ಈ ಕೆಲಸಕ್ಕೆ ನಿಯೋಜಿಸಲು ಸಿದ್ದತೆ ನಡೆದಿದೆ.


ಒಪ್ಪಿಗೆ ಹೇಗೆ ಸಿಕ್ಕಿತು ?


ಎರಡೂ ತಯಾರಕರು ತಮ್ಮ ಲಸಿಕೆಗಳನ್ನು ಬಳಸಲು ಸುರಕ್ಷಿತವೆಂದು ತೋರಿಸುವ ಡೇಟಾವನ್ನು ಸಲ್ಲಿಸಿದ್ದಾರೆ ಎಂದು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ತಿಳಿಸಿದೆ.

 ಲಸಿಕೆಯಲ್ಲೂ , ಆತ್ಮನಿರ್ಭರತೆಗೆ ಸಾಕ್ಷಿಯಾಗಿದೆ.
ಆಕ್ಸ್‌ಫರ್ಡ್ / ಅಸ್ಟ್ರಾಜೆನೆಕಾ ಲಸಿಕೆಯನ್ನು ವಿಶ್ವದ ಅತಿದೊಡ್ಡ ಲಸಿಕೆ ತಯಾರಕರಾದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸ್ಥಳೀಯವಾಗಿ ತಯಾರಿಸುತ್ತಿದೆ.  ಇದು ತಿಂಗಳಿಗೆ 50 ದಶಲಕ್ಷಕ್ಕೂ ಹೆಚ್ಚಿನ ಪ್ರಮಾಣವನ್ನು ಉತ್ಪಾದಿಸುವ ಗುರಿ ಇಟ್ಟು ಕೊಂಡಿದೆ.


ಅತ್ಯಂತ ಸುರಕ್ಷಿತ


ಎರಡು ಲಸಿಕೆಗಳು ಶೇ 110 ರಷ್ಟು ಸುರಕ್ಷಿತವಾಗಿದೆ .ಈ ಲಸಿಕೆ ಪಡೆದವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ ಎಂದು ಕಂಪೆನಿ ಹೇಳಿದೆ ಎಂದು ವರದಿಯಾಗಿದೆ.
ಔಷಧೀಯ ತಯಾರಿಕೆ ವಿಷಯಕ್ಕೆ ಸಂಬಂಧಿಸಿದ ಹಾಗೆ ಜಾಗತಿಕವಾಗಿ ಶೇ 60 ರಿಂದ 65 ರಷ್ಟು ತಯಾರಿಸುವ ಭಾರತ, ಜುಲೈ 2021 ರ ವೇಳೆಗೆ ಸುಮಾರು 30 ಕೋಟಿ  ಜನರಿಗೆ ರೋಗನಿರೋಧಕ ಶಕ್ತಿಯ ಹೆಚ್ಚಿಸಲು ನಿರ್ಧರಿಸಿದೆ.

ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು