ಶಾಂಪೂ ಯಾವ ದೇಶದ್ದು ? ಶಾಕ್ ಆಗ್ತೀರಾ ...



 ಶಾಂಪೂ ನಮ್ಮದೇ ..


ಶಾಂಪೂ ಭಾರತದ್ದು , ಹೌದು ಭಾರತೀಯರ ವಿಶ್ವದ
ಕೊಡುಗೆಗಳಲ್ಲಿ ಶಾಂಪೂ ಕೂಡ ಸೇರುತ್ತೆ...

ಅಜ್ಜಿಯರು ಡಾಕ್ಟರ್ ಆಗಿದ್ದ ಕಾಲ


ಭಾರತದಲ್ಲಿ ಪುರಾತನ ಆಯುರ್ವೇದದ ಪದ್ಧತಿ ಇತ್ತು.ಅದನ್ನು ನೀವು ಚಿಕ್ಕದಾಗಿ , ಚೊಕ್ಕವಾಗಿ ಅಜ್ಜಿ ಔಷಧಿ ಅಂತೀರೂ ಅಥವಾ ಹರಳೆಕಾಯಿ ಪಂಡಿತರು ಅಂತೀರೂ ನಿಮಗೆ ಬಿಟ್ಟಿದ್ದು...ಭಾರತದ ಔಷಧಿಯ ವಿಜ್ಞಾನ ಎಷ್ಟು ಮುಂದುವರೆದಿದ್ದು , ಅಂದ್ರೆ ನಮ್ಮ ಅಜ್ಜಿಯರು ಕೂಡ ಒಂದು ರೀತಿಯಲ್ಲಿ , ಡಾಕ್ಟರ್ ಆಗಿದ್ದರು...

ಕೂದಲು ಮತ್ತು ದೇಹದ ಹಾರೈಕೆ


ಭಾರತೀಯರು ಕೂದಲು ಮಸಾಜ್ ಮಾಡುವುದು , ಸೀಗೆಕಾಯಿ ಬಳಸುವುದು ... ನೆಲ್ಲಿಕಾಯಿ , ಹೀಗೆ ವಿವಿಧ ಗಿಡಮೂಲಿಕೆಗಳ ಬಳಸಿ , ಮಸಾಜ್ ಮಾಡುತ್ತಿದ್ದರು . ಅಭ್ಯಂಜನ ಸ್ನಾನ ಮಾಡುತ್ತಿದ್ದರು.

ಇಂಗ್ಲೆಂಡ್ ಗೆ ಹಾರಿದ ಚಾಂಪೂ


ಹಿಂದಿಯ ಪದ ಚಾಂಪೂ , ಬಳಕೆಯನ್ನು 
 ,ಭಾರತೀಯ ಪ್ರವಾಸಿ, ಶಸ್ತ್ರಚಿಕಿತ್ಸಕ ಮತ್ತು ಉದ್ಯಮಿ ಸೇಕ್ ಡೀನ್ ಮಹೋಮೆದ್ ಅವರು ಚಂಪೂಯಿ ಅಥವಾ "ಶಾಂಪೂ" ಅಭ್ಯಾಸವನ್ನು ಬ್ರಿಟನ್‌ಗೆ ಪರಿಚಯಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.  1814 ರಲ್ಲಿ, ಮಹೋಮೆದ್, ತನ್ನ ಐರಿಶ್ ಪತ್ನಿ ಜೇನ್ ಡಾಲಿಯೊಂದಿಗೆ,  ಇಂಗ್ಲೆಂಡ್‌ನಲ್ಲಿ ಮೊದಲ ವಾಣಿಜ್ಯ "ಶಾಂಪೂಯಿಂಗ್" ಆವಿ ಮಸಾಜ್ ಸ್ನಾನವನ್ನು ತೆರೆದರು.  ಅವರು ಸ್ಥಳೀಯ ಪತ್ರಿಕೆಯಲ್ಲಿ, ಚಿಕಿತ್ಸೆಯನ್ನು "ದಿ ಇಂಡಿಯನ್ ಮೆಡಿಕೇಟೆಡ್ ಆವಿ ಬಾತ್ "ಗಿಡಮೂಲಿಕೆಗಳ ಕುದಿಸಿ , ಕೂದಲಿಗೆ ಹಚ್ಚುತ್ತಿದ್ದರು.
 ಅನೇಕ ಕಾಯಿಲೆಗಳಿಗೆ ಪರಿಹಾರ  ವಿಶೇಷವಾಗಿ ಸಂಧಿವಾತ ಮತ್ತು ಪಾರ್ಶ್ವವಾಯು, ಗೌಟ್, ಗಟ್ಟಿಯಾದ ಕೀಲುಗಳು, ಹಳೆಯ ಉಳುಕು, ಕುಂಟ ಕಾಲುಗಳು  , ಕೀಲುಗಳಲ್ಲಿನ ನೋವು ನಿವಾರಣೆಗೆ ಅತ್ಯುತ್ತಮ ವಿಧಾನ ಎಂದು ಹೇಳಲಾಗಿತ್ತು.ನಂತರ ವಿಶ್ವದ ಹಲವು ದೇಶಗಳಲ್ಲಿ , ಶಾಂಪೂ ಕುರಿತಾದ ಜಾಹೀರಾತುಗಳು ಬಂದು , ಯುರೋಪಿನಲ್ಲಿ ಜನಪ್ರಿಯ ಆಗಿ ,ನಂತರ ಪೂರ್ತಿ ವಿಶ್ವ ಆವರಿಸಿದೆ. 


ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು